ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ಪ್ರಮುಖ ಹೆದ್ದಾರಿಗಳ ಅಭಿವೃದ್ಧಿ, ಟೋಲ್ ಸಂಗ್ರಹ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್ 18 : ಪಿಎಸ್‍ಐ ಜಗದೀಶ್ ಅವರ ಕುಟುಂಬಕ್ಕೆ ನಿವೇಶನ ನೀಡುವುದು. ಆರು ಪ್ರಮುಖ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿ ಟೋಲ್ ಸಂಗ್ರಹ ಮಾಡಲು ಒಪ್ಪಿಗೆ. ಕೆಪಿಎಸ್‌ಸಿಯಲ್ಲಿ ಹುದ್ದೆಗಳ ಭರ್ತಿ ಸೇರಿದಂತೆ ಹಲವು ಪ್ರಮುಖ ವಿಚಾರಗಳಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ಅವರು ಸಭೆಯ ವಿವರಗಳನ್ನು ನೀಡಿದರು. [ಪ್ಲಾಸ್ಟಿಕ್ ನಿಷೇಧಕ್ಕೆ ಸಚಿವ ಸಂಪುಟದ ಒಪ್ಪಿಗೆ]

ಸಚಿವ ಸಂಪುಟ ಸಭೆಯ ವಿವರಗಳು

* ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಹಾಗೂ ವಿಶ್ವಬ್ಯಾಂಕಿನ ಸಹಯೋಗದೊಂದಿಗೆ ಖಾಸಗಿ ಸಹಭಾಗಿತ್ವದಡಿ 363.20 ಕಿ.ಮೀ.ಯ 6 ಪ್ರಮುಖ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಂದ ಟೋಲ್ ಸಂಗ್ರಹ ಮಾಡುವ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.

* 6 ಹೆದ್ದಾರಿಗಳು : ಬಾಗೇವಾಡಿ-ಸವದತ್ತಿ, ಬೀದರ್-ಚಿಂಚೋಳ್ಳಿ, ಹಾಸನ-ಪಿರಿಯಾಪಟ್ಟಣ, ಹಿರೇಕೆರೂರು - ರಾಣೆಬೆನ್ನೂರು, ಮುಂಡರಗಿ-ಹರಪನಹಳ್ಳಿ ಹಾಗೂ ಹುನಗುಂದ-ತಾಳೀಕೋಟೆ ರಸ್ತೆ. [ಅಪಘಾತವಾದಾಗ ಜೀವ ಉಳಿಸಲು ನೆರವಾಗಿ]

* 2009ರಲ್ಲಿ ನಡೆದ ಹಾವೇರಿಯ ಗೋಲಿಬಾರ್ ಪ್ರಕರಣದಲ್ಲಿ ಸಿದ್ದಲಿಂಗಪ್ಪ ಚೂರಿ ಎಂಬ ರೈತ ಸಾವಿಗೀಡಾದ ನಂತರ ನೇಮಕಮಾಡಿದ್ದ ನ್ಯಾಯಮೂರ್ತಿ ಕೆ.ಜಗನ್ನಾಥ ಶೆಟ್ಟಿ ನೇತೃತ್ವದ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲು ಸಂಪುಟ ಒಪ್ಪಿಗೆ ನೀಡಿದೆ. ಜಗನ್ನಾಥ ಶೆಟ್ಟಿ ವರದಿ ವಾಸ್ತವ ಸಂಗತಿಗೆ ತದ್ವಿರುದ್ಧವಾಗಿರುವುದರಿಂದ ವರದಿಯನ್ನು ಸಂಪುಟ ಸಭೆ ತಿರಸ್ಕರಿಸಿದೆ.

tb jayachandra

* ಬೈಕ್ ಕಳ್ಳರನ್ನು ಹಿಡಿಯಲು ಹೋದಾಗ ಹತ್ಯೆಯಾದ ದೊಡ್ಡಬಳ್ಳಾಪುರ ಠಾಣೆ ಪಿಎಎಸ್‍ಐ ಜಗದೀಶ್ ಅವರ ಕುಟುಂಬಕ್ಕೆ ಬೆಂಗಳೂರಿನ ಎಚ್.ಬಿ.ಆರ್. ಬಡಾವಣೆ 2ನೇ ಹಂತದಲ್ಲಿ 60-40 ಅಡಿ ನಿವೇಶ ನೀಡಲು ಒಪ್ಪಿಗೆ ನೀಡಲಾಗಿದೆ. [ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]

* ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರತಿಭಾನ್ವಿತ ವಿದ್ಯಾರ್ಥಿ ವಸತಿ ನಿಲಯಗಳ ಸ್ಥಾಪನೆಗೆ 2014- 15ರಲ್ಲಿ ಪ್ರಕಟಿಸಿದಂತೆ ಒಂದು ಸಾವಿರ ಕೋಟಿ ರೂ ವೆಚ್ಚದಲ್ಲಿ 100 ವಸತಿ ಶಾಲೆಗಳನ್ನು ಆರಂಭಿಸಲು ಒಪ್ಪಿಗೆ.

* ಉಡುಪಿ, ಯಾದಗಿರಿ, ಗೋಕಾಕ್ ಮತ್ತು ಕೊಪ್ಪಳದಲ್ಲಿ ರಾಜ್ಯ ಸರ್ಕಾರಿ ತರಬೇತಿ ಕೇಂದ್ರಗಳನ್ನು [ಜಿಟಿಡಿಸಿ] ಒಂದು ಸಾವಿರ ಕೋಟಿ ರೂ ವೆಚ್ಚದಲ್ಲಿ ಆರಂಭಿಸಲು ಸಮ್ಮತಿ.

* ರಾಜ್ಯ ಲೋಕಸೇವಾ ಆಯೋಗದಲ್ಲಿ ಕಿರಿಯ ಶ್ರೇಣಿಯ ಅಧಿಕಾರಿಗಳ ನೇಮಕಾತಿ ಮತ್ತು ಬಡ್ತಿಯಲ್ಲಿ ಖಾಲಿ ಹುದ್ದೆಗಳ ಭರ್ತಿ ಬದಲಾಗಿ ಖಾಲಿಯಿರುವ ಸ್ಥಾನಗಳ ಭರ್ತಿಗೆ ಮೀಸಲಾತಿಯನ್ವಯ ನೇಮಕ ಮಾಡಲು ಸಂಪುಟ ಅನುಮೋದನೆ ನೀಡಿದೆ. [162 ಹುದ್ದೆಗಳ ಅರ್ಜಿ ಆಹ್ವಾನಿಸಿದ KPSC]

* ಧಾರವಾಡ ಜಿಲ್ಲೆಯ ತಡಸಿಕೊಪ್ಪದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ 60.06 ಎಕರೆ ಪ್ರದೇಶದಲ್ಲಿ ಆರಂಭಿಸಲು ಆಡಳಿತಾತ್ಮಕ ಒಪ್ಪಿಗೆ ನೀಡಿದ್ದು, ಹಲವು ರಿಯಾಯಿತಿ, ವಿನಾಯಿತಿಗಳನ್ನು ನೀಡಲಾಗಿದೆ.

* ಕೇಂದ್ರ ಸರ್ಕಾರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಆಂದೋಲದ ರೂಪದಲ್ಲಿ ಅಭಿವೃದ್ಧಿಪಡಿಸಲು ಸಂಪುಟ ಸಮ್ಮತಿಸಿದ್ದು, ಇನ್ನು ಮುಂದೆ ಐಸಿಡಿಎಸ್ ಕಾರ್ಯಕ್ರಮಗಳನ್ನು ಸೊಸೈಟಿ ಮೂಲಕವೇ ಜಾರಿಗೊಳಿಸಲು ಅನುಮತಿ.

* ತುಂಗಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರದ ಎಐಬಿಪಿ ಯೋಜನೆಯಡಿ ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಒಪ್ಪಿಗೆ ನೀಡಿದ್ದು. ಈಗಾಗಲೇ ಕೇಂದ್ರ ಸರ್ಕಾರ 226 ಕೋಟಿ ರೂ. ಪೈಕಿ 157 ಕೋಟಿ ರೂ. ಬಿಡುಗಡೆ ಮಾಡಿದ್ದು, ಉಳಿದ ಹಣದ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರವಿದೆ.

* ಗದಗ್‍ನಲ್ಲಿ ರಾಜ್ಯಮಟ್ಟದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸ್ಥಾಪನೆಗೆ ಒಪ್ಪಿಗೆ ನೀಡಿದ್ದು, 153.12 ಎಕರೆ ಸರ್ಕಾರಿ ಭೂಮಿ ಹಾಗೂ 353 ಖಾಸಗಿ ಭೂಮಿಯಲ್ಲಿ ವಿ.ವಿ. ಸ್ಥಾಪನೆಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

English summary
The Karnataka government has decided to develop 363.20 km length 6 roads. After cabinet meeting law minister T.B.Jayachandra said, Karnataka road development corporation limited will take up work with the help of word bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X