ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರದ ವಿಧಾನಸಭೆ ಕಲಾಪದ ಮುಖ್ಯಾಂಶಗಳು

|
Google Oneindia Kannada News

ಬೆಂಗಳೂರು, ಮಾರ್ಚ್, 26 : ಗುರುವಾರದ ವಿಧಾನಸಭೆ ಕಲಾಪಕ್ಕೆ ಶಾಸಕರು ಮತ್ತು ಸಚಿವರು ಗೈರು ಹಾಜರಾಗಿರುವುದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಅಸಮಾಧಾನಕ್ಕೆ ಕಾರಣವಾಯಿತು. ವರ್ಷದ 365 ದಿನದಲ್ಲಿ 60 ದಿನ ಅಧಿವೇಶನ ನಡೆಯೋದು ಕಷ್ಟ. ಶಾಸನ ಸಭೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸದನದಲ್ಲಿ ಕೂರುವುದಿಲ್ಲ ಎಂದರೆ ಹೇಗೆ? ಎಂದು ಅವರು ತರಾಟೆಗೆ ತೆಗೆದುಕೊಂಡರು.

ಕ್ರಿಕೆಟ್ ನೋಡುತ್ತಿದ್ದ ಶಾಸಕರು : ಕಲಾಪಕ್ಕೆ ಗೈರು ಹಾಜರಾಗಿದ್ದ ಕೆಲವು ಶಾಸಕರು ಮತ್ತು ಸಚಿವರು ವಿಶ್ವಕಪ್ ಸೆಮಿಫೈನಲ್ ಕ್ರಿಕೆಟ್ ನೋಡುತ್ತಿದ್ದರು. ಕಲಾಪ ಆರಂಭವಾದಾಗ ಕೋರಂಗೆ ಅಗತ್ಯವಿರುವಷ್ಟು ಶಾಸಕರು ಮತ್ತು ಸಚಿವರು ಮಾತ್ರ ಹಾಜರಿದ್ದರು. ಶಾಸಕರು ಕ್ರಿಕೆಟ್ ನೋಡುತ್ತಿದ್ದಾರೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರ ಗಮನಕ್ಕೆ ತಂದರು. ಸ್ಪೀಕರ್ ಶಾಸಕರ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.

Karnataka Budget

ಹೊಸ ಜಾಹೀರಾತು ನೀತಿ ಶೀಘ್ರ ಜಾರಿ : ಅಕ್ರಮ ಜಾಹೀರಾತು ತಡೆಗೆ ಹೊಸ ಜಾಹೀರಾತು ನೀತಿಯನ್ನು ಜಾರಿಗೆ ತರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಪರಿಷತ್ತಿನಲ್ಲಿ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಅನಧಿಕೃತ ಜಾಹೀರಾತುಗಳಿಂದ ನಷ್ಟವಾಗುತ್ತಿದೆ. ಅನಧಿಕೃತ ಫಲಕಗಳಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದರು.[ಪರಿಷತ್ತಿನಲ್ಲಿ ಶಪಥ ಮಾಡಿದ ಈಶ್ವರಪ್ಪ]

ಶರವಣ ಬಂಗಾರ ಕೊಟ್ಟುಬಿಡಿ : ವಿಧಾನ ಪರಿಷತ್ತಿನಲ್ಲಿ ಸೈಟ್ ಭಾಗ್ಯ ಹಾಗೂ ಬಂಗಾರ ಭಾಗ್ಯದ ಚರ್ಚೆ ನಡೆಯಿತು. ಕೆಂಪೇಗೌಡ ಲೇಔಟ್ ನಿರ್ಮಾಣ ವಿಳಂಬವಾಗುತ್ತಿರುವ ವಿಚಾರ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಶರವಣ ಅವರು, ಬೆಂಗಳೂರಿಗರಿಗೆ ಸೈಟ್ ಭಾಗ್ಯ ಕಲ್ಪಿಸಿ ಎಂದರು.

ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿಗಳು 'ಬೆಂಗಳೂರಿಗರಿಗೆ ಬಂಗಾರದ ಭಾಗ್ಯ ಕೊಟ್ಟು ಬಿಡು' ಶರವಣ ಅವರಿಗೆ ತಿರುಗೇಟು ನೀಡಿದರು. 45 ಸಾವಿರ ಸೈಟ್ ಹಂಚಿಕೆ ಮಾಡುವ ಉದ್ದೇಶವಿದೆ. ನೀರು, ಒಳಚರಂಡಿ ಸಂಪರ್ಕ ಕಲ್ಪಿಸಲು ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.

ಧನ ವಿನಿಯೋಗ ವಿಧೇಯಕ ಅನುಮೋದನೆ : ವಿಧಾನ ಸಭೆಯಲ್ಲಿ ಅಂಗೀಕೃತವಾದ 2015ನೇ ಸಾಲಿನ ಕರ್ನಾಟಕ ಧನ ವಿನಿಯೋಗ ವಿಧೇಯಕವನ್ನು ವಿಧಾನ ಪರಿಷತ್ತಿನಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ವಿಧಾನ ಪರಿಷತ್ತಿನಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಯವರು 4713 ಕೋಟಿ ರೂ ಮೊತ್ತದ ವಿಧೇಯಕವನ್ನು ಅಂಗೀಕರಿಸುವಂತೆ ಸೂಚಿಸಿದರು. ವಿಧೇಯಕವನ್ನು ಸಭಾಪತಿ ಡಾ. ಹೆಚ್. ಶಂಕರಮೂರ್ತಿ ಅವರು ಧ್ವನಿ ಮತಕ್ಕೆ ಹಾಕುವ ಮೂಲಕ ವಿಧೇಯಕ ಅಂಗೀಕಾರವಾಗಿದೆ ಎಂದು ಪ್ರಕಟಿಸಿದರು.

ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣ : ಹೆಬ್ಬಾಳದ ರಾಜಕಾಲುವೆ ಒಳಗಡೆ ಜೀರೋ ಸಿವೇಜ್ ಲೈನ್ ಅಳವಡಿಕೆ ಕಾಮಗಾರಿಯನ್ನು ಇನ್ನೂ ಮೂರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಪರಿಷತ್ತಿನಲ್ಲಿ ಡಾ. ಜಯಮಾಲ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ರಾಜ ಕಾಲುವೆಯಲ್ಲಿ ಮಳೆ ನೀರಿನ ಜೊತೆಗೆ ತ್ಯಾಜ್ಯ ನೀರು ಹರಿಯುವುದನ್ನು ತಪ್ಪಿಸುವ ಸಲುವಾಗಿ 18 ಕಿಲೋ ಮೀಟರ್‌ನಷ್ಟು ಜೀರೋ ಸೀವೆಜ್ ಲೈನ್ ಅಳವಡಿಸಲಾಗುತ್ತಿದ್ದು, ಬಹುಪಾಲು ಕಾಮಗಾರಿಯು ಈಗಾಗಲೇ ಮುಗಿದಿದೆ. ಸೀವೆಜ್ ಲೈನ್‌ಗಳಿಗೆ ಹೆಚ್ಚುವರಿ 800 ಮೀಟರ್ ಸ್ಯಾನಿಟರಿ ಲೈನ್‌ಗಳನ್ನು ಜೋಡಣೆ ಮಾಡುವ ಕಾಮಗಾರಿಯು ಪ್ರಗತಿಯಲ್ಲಿದೆ ಎಂದರು.

English summary
Karnataka Budget session 2015 : Thursday, March 26 highlights. What happened in the Assembly today?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X