ಬಜೆಟ್ 2017: ಅಲ್ಪಸಂಖ್ಯಾತ, ಹಿಂದುಳಿದವರಿಗೆ ಭರ್ಜರಿ ಕೊಡುಗೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್. 15 : ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ 2017-18ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು,ಅಲ್ಪಸಂಖ್ಯಾತ, ಹಿಂದುಳಿದ ವರ್ಗಕ್ಕೆ ಕೆಲವು ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ.

karnataka-budget 2017 for minorities backward class

ಸಮಾಜ ಕಲ್ಯಾಣ
* ಎಸ್ಸಿ, ಎಸ್ಟಿ ವಿಧವೆಯರನ್ನು ವಿವಾಹವಾದರೆ 3 ಲಕ್ಷ ರೂ. ಪ್ರೋತ್ಸಾಹ ಧನ
* ಅಂತರ್ಜಾತಿ ವಿವಾಹವಾದ ಮಾಡಿಕೊಳ್ಳುವರಿಗೆ 2 ಲಕ್ಷ ಸಹಾಯಧನ.[ಬಜೆಟ್ 2017: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ. 100ರಷ್ಟು ಮೀಸಲಾತಿ]
* ಆಶಾದೀಪ ಯೋಜನೆ ಅಡಿಯಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಎಸ್ ಮತ್ತು ಎಸ್ ಟಿ ಕಾರ್ಮಿಕರಿಗೆ ಉದ್ಯೋಗ.
* ದಾವಣಗೇರೆ ಜಿಲ್ಲೆಯ ಸೇವಾಲಾಲ್ ಸಮುದಾಯಕ್ಕೆ 5 ಕೋಟಿ ರು.
* ಆದಿವಾಸಿ ಜನರಿಗೆ ಉದ್ಯೋಗ ನೀಡಲು 200 ಕೋಟಿ ರು.[ಶಿಕ್ಷಕರಿಗೂ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ]
* 1 ಲಕ್ಷ ಎಸ್ ಟಿ ಮತ್ತು 1 ಲಕ್ಷ ಎಸ್ ಸಿ ವಿದ್ಯಾರ್ಥಿಗಳಿಗೆ ಉಚಿತ ಕೌಶಲ್ಯ ತರಬೇತಿ.

* ಜಿಲ್ಲೆಗೆ ಒಂದರಂತೆ ತಲಾ 1 ಕೋಟಿ ರೂ. ವೆಚ್ಚದಲ್ಲಿ 30 ಮೊರಾರ್ಜಿ ವಸತಿ ಶಾಲೆಗಳನ್ನು ವಿಜ್ಞಾನ ಮತ್ತು ಗಣಿತ ವಿಷಯಗಳೊಂದಿಗೆ ಪಿ.ಯು.ಸಿ.ಗೆ ಮೇಲ್ದರ್ಜೆಗೆ
* 14 ಜಿಲ್ಲಾ ಕಛೇರಿಗಳ ಜೊತೆಗೆ 5 ಜಿಲ್ಲೆಗಳಲ್ಲಿ ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಕಚೇರಿ.
* ವಾಹನ ಚಾಲನಾ ಪರವಾನಗಿ ಹೊಂದಿರುವ 3500 ಪರಿಶಿಷ್ಟ ಜಾತಿ ಮತ್ತು 1500 ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿಗಳನ್ನು ಖರೀದಿಸಲು 3 ಲಕ್ಷ ರು.ಗಳವರೆಗೆ ಸಹಾಯಧನ.

* ಕಾನೂನು ಪದವಿಧರರ ಮಾಸಿಕ ತರಬೇತಿ ಭತ್ಯೆಯನ್ನು 2000 ರು.ಗಳಿಂದ 5000 ರು.ಗಳಿಗೆ ಹೆಚಿಳ.

*ಜೇನುಕುರುಬ, ಕೊರಗ, ಸೋಲಿಗ, ಕಾಡುಕುರುಬ, ಎರವ, ಗೌಡಲು, ಹಸಲುರು, ಇರುಳಿಗ, ಸಿದ್ಧಿ, ಮಲೆಕುಡಿಯ, ಹಕ್ಕಿಪಿಕ್ಕಿ, ತೋಡ, ಮೇದ ಇತ್ಯಾದಿ ಆದಿವಾಸಿ ಸಮುದಾಯಗಳ ಅಭಿವೃದ್ಧಿಗೆ ಮತ್ತು ಸ್ವಯಂ ಉದ್ಯೋಗ ಕಲ್ಪಿಸಲು 200 ಕೋಟಿ ರು.ಗಳ ಅನುದಾನ.

ಹಿಂದುಳಿದ ವರ್ಗ
ಹಿಂದುಳಿದ ವರ್ಗಕ್ಕೆ ಒಟ್ಟು 3154 ಕೋಟಿ ರುಗಳನ್ನು ನೀಡಲಾಗಿದೆ.[LIVE: ಬೆಂಗಳೂರಿನಲ್ಲಿ ಬಾಡಿಗೆ ಸೈಕಲ್ ಯೋಜನೆ]
* ವಿಶ್ವಕರ್ಮ ಸಮುದಾಯ ಅಭುವೃದ್ದಿಗೆ 25 ಕೋಟಿ ರು.
* ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪನೆ.
* ಅಂಭೀಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪನೆ.
* ರಾಜ್ಯದಲ್ಲಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಶಾಲೆಗಳ ಸ್ಥಾಪನೆ.[ಬಜೆಟ್ 2017: ದ್ವಿಚಕ್ರವಾಹನ ಖರೀದಿ ದುಬಾರಿ, ಮದ್ಯ ಬೆಲೆ ಹೆಚ್ಚಳ]

* ಹಾಸ್ಟೆಲ್ ವಿದ್ಯಾರ್ಥಿಗಳ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳು, ಕ್ಷೌರ ಹಾಗೂ ಸಮವಸ್ತ್ರ ವೆಚ್ಚಗಳನ್ನು ಅನುಕ್ರಮವಾಗಿ 200 ರು.ಗಳಿಂದ 400ಕ್ಕೆ, 150 ರೂ.ಗಳಿಂದ 300 ಕ್ಕೆ ಹಾಗೂ 499 ರು.ಗಳಿಂದ 1000 ರು.ಗಳಿಗೆ ಹೆಚ್ಚಿಸಲಾಗಿದೆ.
* ಸರ್ಕಾರಿ ಹಾಸ್ಟೆಲ್ ಗಳ/ವಸತಿ ಹಾಗೂ ಆಶ್ರಮ ಶಾಲೆಗಳ ಆಹಾರ ಭತ್ಯೆಯನ್ನು ಪ್ರತಿ ವಿದ್ಯಾರ್ಥಿಗೆ ಮಾಸಿಕ 100 ರು.ಗಳಷ್ಟು ಹೆಚ್ಚಿಸಲಾಗಿದೆ.
* ಸೇನೆಗಳಿಗೆ ಆಯ್ಕೆಯಾಗುವ ಅವಕಾಶಗಳನ್ನು ಹೆಚ್ಚಿಸಲು 3000 ಅಭ್ಯರ್ಥಿಗಳಿಗೆ ತರಬೇತಿ.
* ಮಡಿವಾಳ, ಸವಿತಾ ಸಮಾಜ, ತಿಗಳ, ಕುಂಬಾರ ಸಮುದಾಯಗಳ ಅಭಿವೃದ್ಧಿಗಾಗಿ 60 ಕೋಟಿ ರೂ.ಗಳ ಅನುದಾನ.
* ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಲಾಗುವುದು.
ಬುಡಬುಡಕಿ, ಗೊಂದಳಿ, ಹೆಳವ, ಪಿಚಗುಂಟ, ಜೋಗಿ, ಗೊಲ್ಲ, ಶಿಕ್ಕಲಿಗಾರ, ಹಾವುಗಾರ ಇತ್ಯಾದಿ ಅಲೆಮಾರಿ ಮತ್ತು
* ಅರೆ ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ 100 ಕೋಟಿ ರು.ಗಳು.
* 100 ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗ ವೇತನವನ್ನು ಮಂಜೂರು ಮಾಡಲಾಗುವುದು.
* 2017-18ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಒಟ್ಟಾರೆಯಾಗಿ 3,154 ಕೋಟಿ ರೂ. ಒದಗಿಸಲಾಗಿದೆ.

ಅಲ್ಪಸಂಖ್ಯಾತ

* ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗೆ 175 ಕೋಟಿ ರೂ. ಮೀಸಲು.

* ರಾಜ್ಯದಲ್ಲಿ 200 ಮೌಲಾನ ಅಜಾದ್ ಶಾಲೆ ಸ್ಥಾಪನೆ.

* ಜಿಲ್ಲಾ ಕೇಂದ್ರಗಳಲ್ಲಿ ಶಾದಿ ಮಾಲ್ ಸಮುದಾಯ ಭವನಕ್ಕೆ 2ಕೋಟಿ ರು.
*ತಾಲೂಕು ಕೇಂದ್ರಗಳಲ್ಲಿ ಶಾದಿ ಮಾಲ್ ಸಮುದಾಯ ಭವನಕ್ಕೆ 1ಕೋಟಿ ರು.[ಬಜೆಟ್ 2017: ನಮ್ಮ ಬೆಂಗಳೂರಿಗೆ ಸಿಕ್ಕಿದ್ದೇನು?]
* 1ಸಾವಿರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸೇನೆ ಸೇರಲು ಉಚಿತ ತರಬೇತಿ.
* ಹೆಚ್ಚು ಅಲ್ಪಸಂಖ್ಯಾತ ಇರುವ ಕಡೆಗಳಲ್ಲಿ ಮೂಲ ಸೌಕರ್ಯಕ್ಕಾಗಿ 8 ಸಾವಿರ ಕೋಟಿ ಕ್ರಿಯಾ ಯೋಜನೆ.
* 10 ಕೋಟಿ ರುಗಳಲ್ಲಿ ಮಂಗಳೂರಲ್ಲಿ ಹಜ್ ಭವನ ನಿರ್ಮಾಣ.

* ಹೊಸದಾಗಿ ಅಲ್ಪಸಂಖ್ಯಾತರ 20 ಮೊರಾರ್ಜಿ ದೇಸಾಯಿ ವಸತಿ ಶಾಲೆ, 05 ಪದವಿ ಪೂರ್ವ ಕಾಲೇಜು, 2,ಮಾದರಿ ವಸತಿ ಶಾಲೆಗಳು ಹಾಗೂ 25 ಮೆಟ್ರಿಕ್ ನಂತರ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರಾರಂಭ.

* ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಎಲ್ಲಾ ಕಛೇರಿಗಳನ್ನು ಹಾಗೂ ಒಂದು ಸಭಾಂಗಣವನ್ನು ಒಳಗೊಂಡ ಮೌಲಾನಾ ಅಬುಲ್ ಕಲಾಂ ಆಜಾದ್ ಭವನ.

* ವಕ್ಫ್ ಸಂಸ್ಥೆಗಳ ನಿರ್ವಹಣೆ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲು ಬೆಂಗಳೂರಿನಲ್ಲಿ ತರಬೇತಿ ಕೇಂದ್ರ ಪ್ರಾರಂಭ.

* ಉರ್ದು ಕನ್ವೆನ್ಷನ್ ಹಾಲ್ ಮತ್ತು ಸಾಂಸ್ಕೃತಿಕ ಕೇಂದ್ರ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನ.

English summary
Chief minister Siddaramaiah has presented Karnataka Budget 2017 for minorities and backward class.
Please Wait while comments are loading...