ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2017: ದ್ವಿಚಕ್ರವಾಹನ ಖರೀದಿ ದುಬಾರಿ, ಮದ್ಯ ಬೆಲೆ ಹೆಚ್ಚಳ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ (ಮಾರ್ಚ್ 15) 12ನೇ ಬಾರಿ ಬಜೆಟ್ ಮಂಡಿಸಿದರು. ದುಬಾರಿ ವಾಹನ ಖರೀದಿ, ಮದ್ಯದ ಮೇಲೆ ಸುಂಕ ಹೆಚ್ಚಳ ಮಾಡಲಾಗಿದೆ, ಪೂರ್ಣ ಪಟ್ಟಿ ಓದಿ

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ (ಮಾರ್ಚ್ 15) 12ನೇ ಬಾರಿ ಬಜೆಟ್ ಮಂಡಿಸಿದರು. ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ಅಗತ್ಯ ವಸ್ತುಗಳ ಮೇಲಿನ ತೆರಿಗೆ ಇಳಿಕೆ ಮಾಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಯತ್ನಿಸಿದ್ದಾರೆ.[ಬಜೆಟ್ LIVE: ರೈತರ ಸಾಲ ಮನ್ನಾ ಇಲ್ಲ, ಎಣ್ಣೆ ಬೆಲೆ ಇಳಿದಿಲ್ಲ]

ನಿರೀಕ್ಷೆಯಂತೆ ಕೃಷಿ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆಯಾಗಿದ್ದು, ಮದ್ಯ ಮೇಲಿನ ಸುಂಕವನ್ನು ಹೆಚ್ಚಳ ಮಾಡಲಾಗಿದ್ದು, ಬಿಯರ್, ವೈನ್, ಫೆನ್ನಿ ಮೇಲಿನ ಮೌಲ್ಯವರ್ಧಿತ ತೆರಿಗೆ ಇಳಿಕೆ ಮಾಡಲಾಗಿದೆ.[ಬಜೆಟ್ ಕುರಿತು ಮುಖ್ಯಮಂತ್ರಿ ಟ್ವೀಟ್ ನಲ್ಲೇನಿದೆ?]

Karnataka Budget 2017-18 What will get costlier what will get cheaper

ಏರಿಕೆ
* ಮದ್ಯ ಮಾರಾಟ ಲೈಸನ್ಸ್ ಶುಲ್ಕದಲ್ಲಿ ಶೇ25ರಷ್ಟು ಏರಿಸಲಾಗಿದೆ
* ದುಬಾರಿ ದ್ವಿಚಕ್ರವಾಹನ ಖರೀದಿದಾರರಿಗೆ ಬರೆ.
* 1 ಲಕ್ಷಕ್ಕೂ ಮೇಲ್ಪಟ್ಟ ಬೆಲೆಯುಳ್ಳ ದ್ವಿಚಕ್ರ ವಾಹನಗಳಿಗೆ ಈಗಿನ ತೆರಿಗೆ ಶೇಕಡ 12% ರಿಂದ ಶೇಕಡ 18%ಕ್ಕೆ ಹೆಚ್ಚಳ.
[ಬಜೆಟ್ 2017: ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ 2000 ಪಿಂಚಣಿ]

ಇಳಿಕೆ
* ಬಿಯರ್, ಫೆನ್ನಿ, ವೈನ್ ಮೇಲಿನ ಮೌಲ್ಯವರ್ಧಿತ ತೆರಿಗೆ ರದ್ದು
* ಸ್ಪಿರಿಟ್ (ಎಥನಾಲ್ ಹೊರತುಪಡಿಸಿ) ರಫ್ತಿನ ಮೇಲೆ ಪ್ರತಿ ಲೀಟರ್‌ಗೆ ರೂ.2 ರಂತೆ ಮತ್ತು ಆಮದಿನ ಮೇಲೆ ಪ್ರತಿ ಲೀಟರ್‌ಗೆ ರೂ.1 ರಂತೆ ವಿಧಿಸಲಾಗಿದ್ದ ಆಡಳಿತಾತ್ಮಕ ಶುಲ್ಕವನ್ನು ಹಿಂಪಡೆಯಲಾಗಿದೆ.
* ಹೆಚ್ಚುವರಿ ಅಬಕಾರಿ ಸುಂಕದ ಹೆಚ್ಚಳದಿಂದಾಗಿ ಬಿಯರ್, ಫೆನ್ನಿ, ಲಿಕ್ಯುಯೆರ್ ಮತ್ತು ವೈನ್ ಸೇರಿದಂತೆ ಮದ್ಯದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು 01/04/2017 ರಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ. [ಬಜೆಟ್ 2017: ಬಳ್ಳಾರಿ ಜಿಲ್ಲೆಯಲ್ಲಿ ಕುರಿ ಸಂವರ್ಧನಾ ಕೇಂದ್ರ]
* ಭತ್ತ, ಅಕ್ಕಿ, ಗೋಧಿ, ಬೇಳೆ ಕಾಳುಗಳು ಹಾಗೂ ಸಂಸ್ಕರಿತ ರಾಗಿ ಮತ್ತು ಗೋಧಿ ಪದಾರ್ಥ ಮೇಲಿನ ತೆರಿಗೆ ವಿನಾಯಿತಿ ಮುಂದುವರಿಕೆ.
* ಸಿರಿಧಾನ್ಯಗಳಾದ ನವಣೆ, ಸಾಮೆ, ಅರಕ ಹಾಗೂ ಬರಗು ಮೇಲಿನ ಹಿಟ್ಟುಗಳಿಗೆ ತೆರಿಗೆ ವಿನಾಯ್ತಿ
* ದ್ವಿದಳ ಧಾನ್ಯ, ತೆಂಗಿನ ಕಾಯಿ ಸಿಪ್ಪೆಯ ಮೇಲಿನ ತೆರಿಗೆ ವಿನಾಯಿತಿ.
(ಒನ್ಇಂಡಿಯಾ ಸುದ್ದಿ)

English summary
A seasoned Finance Minister Siddaramaiah has tabled Karnataka Budget 2017-18: Post budget, here is the list of what becomes expensive and cheaper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X