ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರೆಂಟ್ ಕೈ ಕೊಟ್ಟರೂ ವಿದ್ಯುತ್ ಕ್ಷೇತ್ರಕ್ಕೆ ಹಲವು ಕೊಡುಗೆ

|
Google Oneindia Kannada News

ಬೆಂಗಳೂರು, ಮಾರ್ಚ್ 18 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಭಾಷಣ ಓದುವಾಗ ಎರಡು ಬಾರಿ ಕರೆಂಟ್ ಕೈ ಕೊಟ್ಟಿತು. ಆಗ ಪ್ರತಿಪಕ್ಷಗಳು ಕತ್ತಲ ಭಾಗ್ಯ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದವು. ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಇಂಧನ ಕ್ಷೇತ್ರಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ವಿದ್ಯುತ್ ಸಮಸ್ಯೆ ನಿವಾರಣೆಯತ್ತ ಹೆಜ್ಜೆ ಇಟ್ಟಿದ್ದಾರೆ.

ತುಮಕೂರು ಜಿಲ್ಲೆಯ ಪಾವಗಡದಲ್ಲಿನ ಸೋಲಾರ್ ಪಾರ್ಕ್‌ನಲ್ಲಿ 2017ರ ಅಂತ್ಯಕ್ಕೆ 600 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೊಸ ಬೆಳಕು ಯೋಜನೆಗೆ ಒತ್ತು ನೀಡಲು ಎಲ್‍ಇಡಿ ಬಲ್ಬ್‌ಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗಿದೆ. [ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?]

power

ಇಂಧನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು? [ಸಿದ್ದರಾಮಯ್ಯ ಬಜೆಟ್ಟಿನಲ್ಲಿ ಐಟಿ-ಬಿಟಿಗೆ ಏನು ಗಿಟ್ಟಿಲ್ಲ!]

* 2015-16ರ ಅಂತ್ಯಕ್ಕೆ ಯರಮರಸ್ ಘಟಕ - 1ರಿಂದ 800 ಮೆಗಾವಾಟ್ ಹಾಗೂ ಪರ್ಯಾಯ ಇಂಧನ ಮೂಲಗಳಿಂದ 350 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೇರ್ಪಡೆಯ ನಿರೀಕ್ಷೆ ಇದೆ. [ರಾಜ್ಯ ಬಜೆಟ್: ಸಿದ್ದರಾಮಯ್ಯ ತೆರಿಗೆ ನೀತಿ ಪೂರ್ಣ ಮಾಹಿತಿ]

* 2016-17ರ ಅಂತ್ಯಕ್ಕೆ ಯರಮರಸ್ ಘಟಕ - 2 ರಿಂದ 800 ಮೆಗಾವಾಟ್, ಕೇಂದ್ರ ಉತ್ಪಾದನಾ ಘಟಕದಿಂದ 705.40 ಮೆಗಾವಾಟ್ ಮತ್ತು ಪರ್ಯಾಯ ಇಂಧನ ಮೂಲಗಳಿಂದ 1,150 ಮೆಗಾವಾಟ್ ಸೇರಿ 2,655.40 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೆಚ್ಚಳ ವಾಗುಲಿದೆ. [ಕರ್ನಾಟಕ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕಿದ್ದೇನು?]

* ಯಲಹಂಕದಲ್ಲಿ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಸ್ಥಾಪನೆ ಕಾರ್ಯಾರಂಭ. ಪ್ರಸಕ್ತ ಸಾಲಿನಲ್ಲಿ ಕಲಬುರಗಿ ವಿದ್ಯುತ್ ಸ್ಥಾವರ ಕಾರ್ಯಾರಂಭ. ಕೆ.ಪಿ.ಸಿ.ಎಲ್. ವತಿಯಿಂದ 200 ಮೆಗಾವಾಟ್ ಸಾಮರ್ಥ್ಯದ ಸೋಲಾರ್ ಪವರ್ ಪ್ಲಾಂಟ್ ಸ್ಥಾಪನೆ.

*ತುಮಕೂರು ಜಿಲ್ಲೆ ಪಾವಗಡದಲ್ಲಿ 2000 ಮೆಗಾವಾಟ್ ಸೋಲಾರ್ ಪಾರ್ಕ್ ಸ್ಥಾಪನೆಗೆ ಕ್ರಮ ಹಾಗೂ 2017ರ ಮಾರ್ಚ್ ಅಂತ್ಯಕ್ಕೆ 600 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ನಿರೀಕ್ಷೆ.

* ಕೆ.ಪಿ.ಟಿ.ಸಿ.ಎಲ್. ವತಿಯಿಂದ ತಲಾ 20 ಮೆಗಾವಾಟ್‌ಗಳಂತೆ 60 ಹಿಂದುಳಿದ ತಾಲೂಕುಗಳಲ್ಲಿ ಒಟ್ಟು 1,200 ಮೆಗಾವಾಟ್ ಸೋಲಾರ್ ವಿದ್ಯುತ್ ಘಟಕಗಳನ್ನು ಮತ್ತು 77 ಉಪ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ.

* ಹೊಸಬೆಳಕು ಯೋಜನೆಯಡಿ 42 ಲಕ್ಷ ಎಲ್‌ಇಡಿ ಬಲ್ಬ್‌ಗಳ ವಿತರಣೆ. 2016-17 ನೇ ಸಾಲಿನಲ್ಲಿ 50, 000 ಪಂಪ್‌ಸೆಟ್‌ಗಳ ಸಕ್ರಮಕ್ಕೆ ಕ್ರಮ.

* ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಅಂತರ್ಜಾಲದ ಮೂಲಕವೇ ಸಲ್ಲಿಸಲು ಅವಶ್ಯವಿರುವ ವೆಬ್ ಆಧಾರಿತ ಮಾದರಿ/ನಮೂನೆಗಳನ್ನು ತಯಾರಿಸಿ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.

English summary
Karnataka Chief Minister and Finance Minister Siddaramaiah has tabled Karnataka Budget 2016-17 on Friday, March 18, 2016. Share for Energy department department in budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X