ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಕೊಡುಗೆ

|
Google Oneindia Kannada News

ಬೆಂಗಳೂರು, ಮಾ. 14: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಮೀಸಲಿಟ್ಟಿದ್ದಾರೆ. ಕೃಷಿ, ಕೈಗಾರಿಕೆ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೂ ಭರಪೂರ ಕೊಡುಗೆ ನೀಡಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿನ ಮೂಲ ಸೌಕರ್ಯ ಸಮಸ್ಯೆಗೆ ಪರಿಹಾರ ಕಲ್ಪಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಬಜೆಟ್ ನ ಹೈಲೈಟ್ಸ್. ಸೋಲಾರ್ ಬಳಕೆಗೆ ಉತ್ತೇಜನ, ಕಾನೂನು ಪದವಿಧರರಿಗೆ ಹೆಚ್ಚುವರಿ ಶುಷ್ಯ ವೇತನ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ನಾಂದಿ ಹಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಪಟ್ಟಿ ಇಲ್ಲಿದೆ.[ಕರ್ನಾಟಕ ಬಜೆಟ್ 2015-16 : ಮುಖ್ಯಾಂಶಗಳು]

karnataka

* ಗ್ರಾಮೀಣ ಭಾಗದ ಸಾವಿರ ಶಾಲೆಗಳಿಗೆ ಟೆಲಿ ಶಿಕ್ಷಣ ಕಾರ್ಯಕ್ರಮ ವಿಸ್ತರರಣೆ.
* ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಗ್ರಂಥಾಲಯ, ಪ್ರಯೋಗಾಲಯ, ಹೊಸ ಕಟ್ಟಡ, ಹೆಚ್ಚುವರಿ ಕಟ್ಟಡ, ಶೌಚಾಲಯ, ಕುಡಿವ ನೀರು ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಕಲ್ಪಿಸಲು 110 ಕೋಟಿ ರೂ.
* ಶಾಲಾ ಕಾಲೇಜುಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು 'ಶಾಲೆಗಾಗಿ ನಾವು ನೀವು' ಕಾರ್ಯಕ್ರಮ ಅನುಷ್ಠಾನ
* 1ರಿಂದ 10ನೇ ತರಗತಿ ವರೆಗೆ 54.54 ಲಕ್ಷ ಮಕ್ಕಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಒದಗಿಸಲು 120 ಕೋಟಿ ರೂ.
* 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ನೂರು ಪ್ರೌಢಶಾಲೆಗಳು ಹಾಗೂ ನೂರು ಪದವಿ ಪೂರ್ವ ಕಾಲೇಜುಗಳಿಒಗೆ ಸೋಲಾರ್ ಎಜುಕೇಷನಲ್ ಕಿಟ್[ಬಜೆಟ್ ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?]
* ಪ್ರಾಥಮಿಕ ಶಿಕ್ಷಣಕ್ಕೆ ಒಟ್ಟಾರೆ 16,204 ಕೋಟಿ ರೂ. ನಿಗದಿ
* ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಲು ಡಿಎಸ್‌ಇಆರ್‌ಟಿ ಮತ್ತು ಮೆ.ಹೆಚ್‌ಸಿಎಲ್ ಫೌಂಡೇಷನ್ ವತಿಯಿಂದ 'ಸ್ಪರ್ಧಾಕಲಿ' ಕಾರ್ಯಕ್ರಮ ಜಾರಿ.
* ಚಿಕ್ಕಬಳ್ಳಾಪುರದ ಸರ್ಕಾರಿ ಬಿಇಡಿ ಕಾಲೇಜಿಗೆ ಉನ್ನತೀಕರಣ ಭಾಗ್ಯ
* ಉನ್ನತ ಶಿಕ್ಷಣ ಸಹಭಾಗಿತ್ವ ಎಂಬ ಹೆಸರಿನಡಿ ಸಮುದಾಯ ಸಹಭಾಗಿತ್ವ ಯೋಜನೆ ರೂಪಿಸಲು ಉದ್ದೇಶಿಸಲಾಗಿದ್ದು, ಕಾಲೇಜುಗಳು, ಪಾಲಿಟೆಕ್ನಿಕ್‌ಗಳು ಮತ್ತು ವಿವಿಗಳಲ್ಲಿ ಪ್ರಾರಂಭಿಸಲು ಆಲೋಚನೆ
* ಸ್ವಾವಲಂಬನೆ ಯೋಜನೆ: ಉದ್ದಿಮೆ ಆರಂಭಿಸಲು ವಿದ್ಯಾರ್ಥಿಗಳು ಬ್ಯಾಂಕಿನಿಂದ ಪಡೆಯುವ ವಾರ್ಷಿಕ 10 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಮೂರು ವರ್ಷಗಳವರೆಗೆ ಸರ್ಕಾರವೇ ಭರಿಸಲಿದ್ದು ಇದಕ್ಕೆ 10 ಕೋಟಿ ರೂ. ನಿಗದಿ.
* ಉನ್ನತ ಶಿಕ್ಷಣದಲ್ಲಿ ಅಧ್ಯಾಪಕರ ಕೊರತೆ ನೀಗಿಸಲು ಜ್ಞಾನ ಪ್ರಸಾರ ಯೋಜನೆಯಡಿ ಗುಣಮಟ್ಟದ, ಏಕರೂಪದ ಪಠ್ಯಾಂಶ ಒದಗಿಸಲು ತೀರ್ಮಾನ
* ಹಿರಿಮೆ-ಗರಿಮೆ ಯೋಜನೆಯಡಿ ನೂರು ವರ್ಷ, 75 ವರ್ಷ ಹಾಗೂ 50 ವರ್ಷ ಪೂರ್ಣಗೊಳಿಸಿದ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಕಲ್ಪಿಸಲು 10 ಕೋಟಿ ರೂ. ಅನುದಾನ.
* ನೂರು ವರ್ಷ ಪೂರೈಸಿರುವ ಮೈಸೂರು ವಿವಿ ಶತಮಾನೋತ್ಸವ ಆಚರಣೆಗಾಗಿ 50 ಕೋಟಿ ರೂ.
* ಹಿಂದುಳಿದ ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕಾ ಪರಿಣಾಮ ಉಂಟು ಮಾಡಲು 'ಅಭ್ಯಾಸ' ಯೋಜನೆಯಡಿ ಪ್ರೋತ್ಸಾಹ
* ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ 40 ಕೋಟಿ ರೂ. ಅನುದಾನ
* ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಉತ್ತಮ ಆಡಳಿತಕ್ಕಾಗಿ ಕಲಬುರಗಿ ಮತ್ತು ಧಾರವಾಡದಲ್ಲಿ ಎರಡು ವಲಯ ಕಚೇರಿ ಸ್ಥಾಪನೆ
* ಮಂಗಳೂರು ವಿವಿ ವ್ಯಾಪ್ತಿಯಲ್ಲಿ ರಾಣಿ ಅಬ್ಬಕ್ಕ ಪೀಠ ಸ್ಥಾಪನೆ, ಒಂದು ಕೋಟಿ ರೂ. ಅನುದಾನ.
* ನೆಹರೂ 125ನೇ ಜನ್ಮ ದಿನಾಚರಣೆ ಹಾಗೂ 50ನೇ ಪುಣ್ಯತಿಥಿ ಸ್ಮರಣಾರ್ಥ ಬೆಂಗಳೂರು ವಿವಿಯಲ್ಲಿ ನೆಹರೂ ಚಿಂತನ ಕೇಂದ್ರ ಸ್ಥಾಪಿಸಲು 3 ಕೋಟಿ ರೂ.
* ಸಾಹಿತಿ ದಿ.ಯು.ಆರ್.ಅನಂತಮೂರ್ತಿ ಹೆಸರಿನಲ್ಲಿ ಮೈಸೂರು ವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪನೆ. ಒಂದು ಕೋಟಿ ಅನುದಾನ.
* ಎಲ್ಲ ವಿವಿಗಳಲ್ಲಿಯೂ ಹೊರ ವಿಶ್ವವಿದ್ಯಾಲಯದ ಎಲ್ಲ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಪ್ರವೇಶದಲ್ಲಿ ಶೇ.15ರಷ್ಟು ಹೆಚ್ಚುವರಿ ಸೀಟು ನೀಡಲು ನಿರ್ಧಾರ.
* ಉನ್ನತ ಶಿಕ್ಷಣದಲ್ಲಿ ಅಂತಾರಾಷ್ಟ್ರೀಯತೆಯನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಿಂದ ಸಾಗರೋತ್ತರ ಶಿಕ್ಷಣ ಕೇಂದ್ರ ಸ್ಥಾಪನೆ.
* ಕೆಂಗೇರಿ ಬಳಿ ಗಾಣಕಲ್ ಗ್ರಾಮದಲ್ಲಿ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಶಿಕ್ಷಣದ ಕರ್ನಾಟಕ ಚಿತ್ರಕಲಾ ಪರಿಷತ್ ಹೊರ ಆವರಣ ಕೇಂದ್ರ ಸ್ಥಾಪಿಸಲು ಐದು ವರ್ಷಗಳಲ್ಲಿ 20 ಕೋಟಿ ವಿಶೇಷ ಅನುದಾನ ನೀಡಲಾಗುವುದು.
* ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ನಳಂದ ಬೌದ್ಧ ಅಧ್ಯಯನ ಕೇಂದ್ರ ಸ್ಥಾಪಿಸಲು 5 ಕೋಟಿ ನೆರವು.
* ಉನ್ನತ ಶಿಕ್ಷಣ ಕ್ಚೇತ್ರಕ್ಕೆ ಬಜೆಟ್‌ನಲ್ಲಿ ಒಟ್ಟು 3896 ಕೋಟಿ ಒದಗಿಸಲಾಗಿದೆ.
* 2013-14ನೇ ಸಾಲಿನಲ್ಲಿ ಘೋಷಿಸಲಾದ ಆರು ವೈದ್ಯ ಕಾಲೇಜುಗಳಿಗೆ (ಕಲಬುರಗಿ, ಗದಗ, ಕೊಪ್ಪಳ, ಕಾರವಾರ, ಚಾಮರಾಜನಗರ ಹಾಗೂ ಕೊಡಗು) ಅಗತ್ಯ ಮೂಲಸೌಲಭ್ಯ
* ಗುಲ್ಬರ್ಗದಲ್ಲಿ ಹೃದ್ರೋಗ ಚಿಕಿತ್ಸಾ ಘಟಕವನ್ನು 15 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ. ರಾಜೀವ್‌ಗಾಂಧಿ ವಿವಿ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ತಲಾ ಆರು ಕೋಟಿ ರೂ.
* ಮೂತ್ರಪಿಂಡ ರೋಗ ಚಿಕಿತ್ಸೆಗಾಗಿ ಬೆಂಗಳೂರಿನ ನೆಫ್ರಾಲಜಿ ಸಂಸ್ಥೆಯಲ್ಲಿ ಮೂತ್ರಪಿಂಡ ಕಸಿ ಕಾರ್ಯಕ್ರಮ ಜಾರಿಗೆ.
* ವೈದ್ಯ ಶಿಕ್ಷಣಕ್ಕೆ ಒಟ್ಟು 6107 ಕೋಟಿ ರೂ. ಮೀಸಲಿಡಲಾಗಿದೆ.
* ರಾಜ್ಯ ಕಾನೂನು ವಿವಿಗೆ ಕಾರ್ಯಸೌಧ
* ಕಾನೂನು ಶಾಲೆ, ವಿದ್ಯಾರ್ಥಿನಿಲಯಗಳ ಕಟ್ಟಡಗಳ ನಿರ್ಮಾಣ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಸಲುವಾಗಿ 9 ಕೋಟಿ ರೂ. ಮೀಸಲು
* ಕಾನೂನು ಮತ್ತು ನ್ಯಾಯಾಲಯಗಳ ಇಲಾಖೆಗೆ ಒಟ್ಟಾರೆಯಾಗಿ 597 ಕೋಟಿ ರೂ.
* ವಿಭಾಗೀಯ ಮಟ್ಟದಲ್ಲಿ ವಕೀಲರಿಗೆ 60 ಲಕ್ಷ ರೂ ವೆಚ್ಚದಲ್ಲಿ ವೃತ್ತಿ ತರಬೇತಿ.
* 2 ಕೋಟಿ ವೆಚ್ಚದಲ್ಲಿ ಜಿಲ್ಲಾ ಅಸೋಸಿಯೇಷನ್‌ಗಳಲ್ಲಿ ಇ-ಲೈಬ್ರೆರಿಗಳ ಸ್ಥಾಪನೆ.
* ಕಾನೂನು ಪದವೀಧರರಿಗೆ ನೀಡುವ ಮಾಸಿಕ ಶಿಷ್ಯ ವೇತನ 1000ದಿಂದ 2000ಕ್ಕೆ ಹೆಚ್ಚಳ

English summary
Karnataka Chief Minister Siddaramaiah, who also hold finance portfolio, presented budget for the year 2015-16 on Friday, 13th March. The education department has got 14% of share in the budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X