ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಬಿಜೆಪಿ ಕಲಹ: ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಎಚ್ಡಿಕೆ ಹೇಳಿಕೆ!

ಬಿಜೆಪಿ ಆಂತರಿಕ ಕಲಹದ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೀಡಿರುವ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಬಿಜೆಪಿಯ ಹೈಕಮಾಂಡ್ ಈಶ್ವರಪ್ಪನವರ ಬೆನ್ನಿಗಿರುವ ಸಾಧ್ಯತೆಯಿದೆ ಎನ್ನುವ ಹೇಳಿಕೆಯನ್ನು ಎಚ್ಡಿಕೆ ನೀಡಿದ್ದಾರೆ.

|
Google Oneindia Kannada News

ತಾರಕಕ್ಕೇರಿರುವ ಯಡಿಯೂರಪ್ಪ ಮತ್ತು ಈಶ್ವರಪ್ಪ ಬಣಗಳ ಕಲಹ ಈಗ ಬಿಜೆಪಿ ಹೈಕಮಾಂಡ್ ಅಂಗಣದಲ್ಲಿದೆ. ರಾಜ್ಯ ಘಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ದೆಹಲಿ ನಾಯಕರು ತೀವ್ರ ಆಕ್ರೋಶಗೊಂಡಿದ್ದಾರೆ ಎನ್ನುವ ಮಾಹಿತಿಯಿದೆ.

ದೆಹಲಿಯಲ್ಲಿರುವ ಯಡಿಯೂರಪ್ಪ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಭೇಟಿ ಸೋಮವಾರದ ಮೇಲಷ್ಟೇ ಸಾಧ್ಯವಾಗಿರುವುದರಿಂದ, ಬಿಎಸ್ವೈ ಪಕ್ಷದ ಮತ್ತು ಸಂಘಟನೆಯ ಹಿರಿಯ ಮುಖಂಡರನ್ನು ಭೇಟಿಯಾಗಿ ಈಶ್ವರಪ್ಪ ವಿರುದ್ದ ದೂರು ಸಲ್ಲಿಸುವ ಕಾರ್ಯದಲ್ಲಿದ್ದಾರೆ. [ಮೋದಿ ಅಲೆಯನ್ನು ಹೊಸಕಿಹಾಕುತ್ತಿರುವ ಯಡ್ಡಿ,ಈಶು ಜಟಾಪಟಿ]

ಈ ನಡುವೆ, ಬಿಜೆಪಿ ಆಂತರಿಕ ಕಲಹದ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಬಿಜೆಪಿಯ ಹೈಕಮಾಂಡ್ ಈಶ್ವರಪ್ಪನವರ ಬೆನ್ನಿಗಿರುವ ಸಾಧ್ಯತೆಯಿದೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಚುನಾವಣೆ ಗೆದ್ದೇ ಬಿಟ್ಟಿದ್ದೇವೆ, ತಾನು ಮುಖ್ಯಮಂತ್ರಿ ಆಗಿಬಿಟ್ಟಿದ್ದೇನೆ ಎಂದು ವರ್ತಿಸುತ್ತಿದ್ದ ಯಡಿಯೂರಪ್ಪನವರಿಗೆ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಮುಳುವಾಗುವ ಸಾಧ್ಯತೆ ಇದೆ ಎಂದು ಎಚ್ಡಿಕೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ಚುನಾವಣೆಗೆ ಸ್ಪರ್ಧಿಸಲಿದ್ದೇವೆ. ಈಗಾಗಲೇ ತಿಳಿಸಿದಂತೆ ಎಲ್ಲಾ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮುಂದೆ ಓದಿ..

 ಬಿಜೆಪಿ ವಿದ್ಯಮಾನ, ಭಾಗವತ್ ಬೇಸರ

ಬಿಜೆಪಿ ವಿದ್ಯಮಾನ, ಭಾಗವತ್ ಬೇಸರ

ರಾಜ್ಯ ಬಿಜೆಪಿ ಘಟಕದಲ್ಲಿ ನಡೆಯುತ್ತಿರುವ ವಿದ್ಯಮಾನದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಬಳ್ಳಾರಿ ಹಗರಿಬೊಮ್ಮನಹಳ್ಳಿಯಲ್ಲಿ ನಡೆಯುತ್ತಿರುವ ಸಂಘದ ಪ್ರಶಿಕ್ಷಣ ಸಭೆಯಲ್ಲಿ ಭಾಗವತ್ ಭಾಗವಹಿಸಿದ್ದರು.

 ಬಿಜೆಪಿ 150 ಸೀಟೂ ಗೆಲ್ಲಲ್ಲಾ

ಬಿಜೆಪಿ 150 ಸೀಟೂ ಗೆಲ್ಲಲ್ಲಾ

ಬಿಜೆಪಿಯವರು ನೂರೈವತ್ತು ಸ್ಥಾನವನ್ನು ಗೆದ್ದೇಬಿಟ್ಟಿದ್ದಾರೆ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿದ್ದಾರೆ. ಸದ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ 2008ರಲ್ಲಿ ಗೆದ್ದಷ್ಟು ಸ್ಥಾನವನ್ನು ಕೂಡಾ ಬಿಜೆಪಿ ಗೆಲ್ಲುವುದಿಲ್ಲ - ಕುಮಾರಸ್ವಾಮಿ.

 ಈಶ್ವರಪ್ಪಗೆ ಹೈಕಮಾಂಡ್ ಬೆಂಬಲ

ಈಶ್ವರಪ್ಪಗೆ ಹೈಕಮಾಂಡ್ ಬೆಂಬಲ

ಹೈಕಮಾಂಡ್ ಅವರ ಬೆಂಬಲವಿಲ್ಲದಿದ್ದರೆ ಈಶ್ವರಪ್ಪ ಇಷ್ಟು ಗಟ್ಟಿನಿಲುವು ತಾಳುತ್ತಿರಲಿಲ್ಲ. ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ವಿರುದ್ದ ಸಾರ್ವಜನಿಕವಾಗಿ ಮಾತನಾಡಬೇಕೆಂದರೆ ಖಂಡಿತ ಬಿಜೆಪಿ ಹೈಕಮಾಂಡ್ ಬೆಂಬಲ ಈಶ್ವರಪ್ಪ ಪರವಾಗಿದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ.

 ಮೋದಿ ಹೆಸರು ಬಳಸದೇ ಬಿಜೆಪಿಗೆ ಬೇರೆ ದಾರಿಯಿಲ್ಲ

ಮೋದಿ ಹೆಸರು ಬಳಸದೇ ಬಿಜೆಪಿಗೆ ಬೇರೆ ದಾರಿಯಿಲ್ಲ

ರಾಜ್ಯ ಬಿಜೆಪಿಗೆ ಮೋದಿಯವರ ಹೆಸರು ಬಳಸದೇ ಬೇರೆ ದಾರಿಯಿಲ್ಲ. ಇವರು ನಡೆಸಿದ ಐದು ವರ್ಷಗಳಲ್ಲಿ ರಾಜ್ಯ ಭ್ರಷ್ಟಾಚಾರಮಯವಾಗಿತ್ತು. ಹಾಗಾಗಿ, ಇವರಿಗೆ ಮೋದಿ ಹೆಸರು ಹೇಳಿಕೊಂಡೇ ಮತಯಾಚಿಸಬೇಕಿದೆ. ಬರುವ ತಿಂಗಳು ಮೊದಲ ಕಂತಿನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದೇವೆ - ಕುಮಾರಸ್ವಾಮಿ.

 ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಎಚ್ಡಿಕೆ ಹೇಳಿಕೆ

ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಎಚ್ಡಿಕೆ ಹೇಳಿಕೆ

ಕಳೆದ ಕೆಲವು ತಿಂಗಳಿನಿಂದ ಈಶ್ವರಪ್ಪ, ಯಡಿಯೊರಪ್ಪ ವಿರುದ್ದ ಗುಡುಗುತ್ತಿದ್ದರೂ ಬಿಜೆಪಿ ಹೈಕಮಾಂಡ್ ಕಡೆಯಿಂದ ಕಟ್ಟುನಿಟ್ಟಿನ ಶಿಸ್ತುಕ್ರಮದ ಎಚ್ಚರಿಕೆ ಸಂದೇಶ ರವಾನೆಯಾದಂತಿಲ್ಲ. ಹೀಗಾಗಿ, ಈಶ್ವರಪ್ಪ ಬೆನ್ನಿಗೆ ಹೈಕಮಾಂಡ್ ಇದ್ದಾರೆ ಎನ್ನುವ ಎಚ್ಡಿಕೆ ಹೇಳಿಕೆ ಬಿಜೆಪಿ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

English summary
Karnataka BJP unit crisis: BJP top leaders supporting KS Eshwarappa, JDS state President HD Kumaraswamy statement in Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X