ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಶ್ವರಪ್ಪ ಸುಮ್ಮನಿದ್ದರೆ ಸಾಕು..ಬಿಜೆಪಿಗೆ ಅದುವೇ ಕೋಟಿ ರೂಪಾಯಿ

ಈಶ್ವರಪ್ಪನವರ ಬಾಲಿಶ ಹೇಳಿಕೆಗಳು ಬಿಜೆಪಿ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದ ಉದಾಹರಣೆಗಳು ಬೆಟ್ಟದಷ್ಟು. ಈಶ್ವರಪ್ಪನವರ ಅಂತಹ ಕೆಲವೊಂದು ಹೇಳಿಕೆಗಳ ಮಾಲೆ.

|
Google Oneindia Kannada News

ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವ ಗಾದೆಮಾತೊಂದಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಉತ್ತಮ ಮಾತುಗಾರರಾಗಿರುವ ರಾಜ್ಯ ಬಿಜೆಪಿಯ ಹಿರಿಯ ಮುಖಂಡ ಈಶ್ವರಪ್ಪನವರಿಗೆ ಅವರ ಮಾತೇ ಎಷ್ಟೋ ಬಾರಿ ಮುಜುಗರ ಮತ್ತು ಜಗಳ ತಂದೊಡ್ಡಿದ್ದುಂಟು.

ನಾಲಿಗೆಯ ಮೇಲೆ ಹಿಡಿತವಿಲ್ಲದ ರಾಜಕಾರಣಿಯೆಂದು ವಿರೋಧ ಪಕ್ಷದವರ ಟೀಕೆಗೆ ಗುರಿಯಾಗುತ್ತಲೇ ಇರುವ ಈಶ್ವರಪ್ಪನವರ ಕೆಲವೊಂದು ಬಾಲಿಶ ಹೇಳಿಕೆಗಳು ಬಿಜೆಪಿ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದ ಉದಾಹರಣೆಗಳು ಬೆಟ್ಟದಷ್ಟು.

ಯಡಿಯೂರಪ್ಪನವರ ಜೊತೆ ವಿರಸ ಮತ್ತು ನಂತರ ಘೋಷಣೆಯಾದ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರದ ಉಪಚುನಾವಣೆಯ ದಿನಾಂಕದ ನಂತರವೂ ಈಶ್ವರಪ್ಪನವರು ತನ್ನ ನಾಲಿಗೆಯ ಮೇಲಿನ ಹಿಡಿತವನ್ನು ಕಳೆದುಕೊಂಡು ಬರುತ್ತಲೇ ಇದ್ದಾರೆ.

ಇಡೀ ರಾಜ್ಯವೇ ಕುತೂಹಲದಿಂದ ಎದುರು ನೋಡುತ್ತಿರುವ ಉಪಚುನಾವಣೆಯ ಈ ಸಂದರ್ಭದಲ್ಲಿ, ಈಶ್ವರಪ್ಪ ಪಕ್ಷದ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರದಿದ್ದರೂ ಪರವಾಗಿಲ್ಲ, ಅವರು ಸುಮ್ಮನಿದ್ದರೆ ಸಾಕು, ಪಕ್ಷಕ್ಕೆ ಅದುವೇ ದೊಡ್ಡ ಕೊಡುಗೆ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಕ್ಷದ ಕಾರ್ಯಕರ್ತರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನೊಂದು ದಿನದಲ್ಲಿ ಮುಕ್ತಾಯಗೊಳ್ಳಲಿರುವ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೂ ಮುನ್ನ, ಈಶ್ವರಪ್ಪನವರು ನೀಡಿರುವ ಕೆಲವೊಂದು ಹೇಳಿಕೆಗಳತ್ತ ಒಂದು ನೋಟ. ಎರಡು ಕ್ಷೇತ್ರಗಳಿಗೆ ಭಾನುವಾರ (ಏ 9) ಚುನಾವಣೆ ನಡೆಯಲಿದ್ದು, ಏಪ್ರಿಲ್ 13ರಂದು ಫಲಿತಾಂಶ ಹೊರಬೀಳಲಿದೆ.

 ಸಿಎಂ ತಲಾಕ್ ರಾಜಕಾರಣಿ

ಸಿಎಂ ತಲಾಕ್ ರಾಜಕಾರಣಿ

ಇತ್ತೀಚೆಗೆ ಮುಖ್ಯಮಂತ್ರಿಗಳ ವಿರುದ್ದ ವಾಗ್ದಾಳಿ ನಡೆಸಿದ್ದ ಈಶ್ವರಪ್ಪ, ಸಿದ್ದರಾಮಯ್ಯ ಒಬ್ಬ 'ತಲಾಕ್' ರಾಜಕಾರಣಿ. ಅಧಿಕಾರಕ್ಕಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದವರು. ನನಗೆ ಬಿಜೆಪಿ ಮೇಲಿರುವ ನಿಷ್ಠೆಯ ಬಗ್ಗೆ ಸಿದ್ದರಾಮಯ್ಯ ಸರ್ಟಿಫಿಕೇಟ್ ನೀಡಬೇಕಾಗಿಲ್ಲ ಎಂದು ಹೇಳಿದ್ದರು. ಬಿಎಸ್ವೈ ಮತ್ತು ಈಶ್ವರಪ್ಪನಿಗೆ ಆಗಿ ಬರೋಲ್ಲಾ.. ಬಿಜೆಪಿ ಸೋಲಬೇಕೆಂದು ಈಶ್ವರಪ್ಪನಿಗೂ ಇದೆ ಎಂದು ಸಿಎಂ ನೀಡಿದ್ದ ಹೇಳಿಕೆಗೆ ಈಶ್ವರಪ್ಪ ಈ ರೀತಿ ಪ್ರತಿಕ್ರಿಯಿಸಿದ್ದರು.

 ಬಿಜೆಪಿ ಕಚೇರಿ ಗುಡಿಸಿದರೆ ಮುಸ್ಲಿಮರಿಗೆ ಟಿಕೆಟ್

ಬಿಜೆಪಿ ಕಚೇರಿ ಗುಡಿಸಿದರೆ ಮುಸ್ಲಿಮರಿಗೆ ಟಿಕೆಟ್

ಬಿಜೆಪಿ ಕಚೇರಿ ಗುಡಿಸಿದರೆ ಮುಸ್ಲಿಮರಿಗೆ ಪಕ್ಷದ ಟಿಕೆಟ್ ನೀಡಲಾಗುವುದು ಎಂದು ಈಶ್ವರಪ್ಪ ನೀಡಿದ್ದ ಹೇಳಿಕೆ ವ್ಯಾಪಕ ಟೀಕೆಗೊಳಗಾಗಿತ್ತು. ಗುಡಿಸುವುದು ಎಂದರೆ ಪಕ್ಷಕ್ಕಾಗಿ ದುಡಿಯುವುದು, ಚಮಚಾಗಿರಿ ಮಾಡೋದಲ್ಲಾ. ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ಯಾರು ಎಂದು ಈಶ್ವರಪ್ಪ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

 ಕೈಯಿಂದ ದುಡ್ಡು ಪಡೆದು ಕಮಲಕ್ಕೆ ಮತಹಾಕಿ

ಕೈಯಿಂದ ದುಡ್ಡು ಪಡೆದು ಕಮಲಕ್ಕೆ ಮತಹಾಕಿ

ಕಾಂಗ್ರೆಸ್ಸಿನವರು ನಿಮಗೆ ದುಡ್ಡು ಕೊಡೋಕೆ ಬಂದ್ರೆ ಬೇಡ ಅನ್ಬೇಡಿ. ಅವರತ್ರ ದುಡ್ಡು ಇಸ್ಕೊಂಡು ಬಿಜೆಪಿಗೆ ವೋಟ್ ಹಾಕಿ ಎಂದು ಈಶ್ವರಪ್ಪ ಗುಂಡ್ಲುಪೇಟೆಯಲ್ಲಿ ಹೇಳಿದ್ದರು. ಡಿ ಕೆ ಶಿವಕುಮಾರ್ ಒಂದು ವೋಟಿಗೆ 4 ಸಾವಿರ ರೂಪಾಯಿ ಕೊಡ್ತಾ ಇದ್ದಾರೆ, ಅವರು ಕೊಟ್ಟ ದುಡ್ಡು ಇಸ್ಕೊಂಡು, ಬಿಜೆಪಿಗೆ ಮತ ಹಾಕಬೇಕು - ಈಶ್ವರಪ್ಪ.

 ಮೋದಿ ಕಾರ್ಯಶೈಲಿ ಒಪ್ಪದ ಸಿಎಂ

ಮೋದಿ ಕಾರ್ಯಶೈಲಿ ಒಪ್ಪದ ಸಿಎಂ

ಇಡೀ ದೇಶ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮತ್ತು ಅವರ ಕಾರ್ಯಶೈಲಿಯನ್ನು ಒಪ್ಪಿಕೊಂಡಿದೆ. ಒಪ್ಪದೇ ಇರುವವರು ಎಂದರೆ ಇಬ್ಬರು ಮಾತ್ರ, ಒಂದು ಪಾಕಿಸ್ತಾನದವರು ಮತ್ತೊಂದು ಸಿದ್ದರಾಮಯ್ಯ - ಈಶ್ವರಪ್ಪ ಲೇವಡಿ ಮಾಡಿದ್ದು.

 ಮರಳುಗಾರಿಕೆಗೆ ಮುಖ್ಯಮಂತ್ರಿಗಳು ಪರೋಕ್ಷ ಬೆಂಬಲ

ಮರಳುಗಾರಿಕೆಗೆ ಮುಖ್ಯಮಂತ್ರಿಗಳು ಪರೋಕ್ಷ ಬೆಂಬಲ

ಸುಳ್ಳು ಮತ್ತು ಪೊಳ್ಳು ಘೋಷಣೆಗಾಗಿ ನೊಬೆಲ್ ಪ್ರಶಸ್ತಿ ಕೊಡುವಂತಿದ್ದರೆ, ಇಡೀ ನಮ್ಮ ಭಾರತ ದೇಶದಲ್ಲಿ ಈ ಪ್ರಶಸ್ತಿ ನೀಡಬೇಕಾಗಿರುವುದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ. ಒಂದು ಕಡೆ ಮರಳು ಮಾಫಿಯಾದಿಂದ ಜಿಲ್ಲಾಧಿಕಾರಿಗಳ ಕೊಲೆ ಯತ್ನ ನಡೆಯುತ್ತಿದ್ದರೆ, ಇನ್ನೊಂದೆಡೆ ತಮ್ಮ ಲೋಕೋಪಯೋಗಿ ಸಚಿವರ ಮೂಲಕ ಮರಳುಗಾರಿಕೆಗೆ ಮುಖ್ಯಮಂತ್ರಿಗಳು ಪರೋಕ್ಷ ಬೆಂಬಲ ನೀಡುತ್ತಿದ್ದಾರೆ - ಈಶ್ವರಪ್ಪ.

 ರಿಜ್ವಾನ್ ಅರ್ಷದ್ ವಿರುದ್ದ ಈಶ್ವರಪ್ಪ ಮಾತಿನ ಚಕಮಕಿ

ರಿಜ್ವಾನ್ ಅರ್ಷದ್ ವಿರುದ್ದ ಈಶ್ವರಪ್ಪ ಮಾತಿನ ಚಕಮಕಿ

ನೋ ವೋಟ್‌, ನೋ ಸೀಟ್‌ ಎನ್ನುವುದು ನಮ್ಮ ಧ್ಯೇಯವಾಕ್ಯ. ಯಾರೋ ಪ್ರಭಾವ ಬೀರಿದರೆ ಅಥವಾ ಅಪ್ಪ ಇದ್ದಾರೆಂಬ ಕಾರಣಕ್ಕೆ ಮಗನಿಗೆ ಬಿಜೆಪಿಯಲ್ಲಿ ಟಿಕೆಟ್‌ ಸಿಗುವುದಿಲ್ಲ. ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಟಿಕೆಟ್‌. ಆದರೂ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಮುಸ್ಲಿಮರು ಪಕ್ಷಕ್ಕೆ ಮತ ನೀಡಿದ್ದಾರೆ. ಹಾಗಾಗಿ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ರಿಜ್ವಾನ್ ಅರ್ಷದ್ ಗೆ ಈಶ್ವರಪ್ಪ ಉತ್ತರಿಸಿದ್ದರು.

English summary
Senior BJP leader K S Eshwarappa controversial statement embarrass state BJP units several times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X