ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಗೆ ಹೊರಟ ಬಿಜೆಪಿ ಅತೃಪ್ತ ನಾಯಕರು?

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಜುಲೈ 01 : ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಕೆ.ಎಸ್.ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರು ಬಹಿರಂಗವಾಗಿಯೇ ಕೆಸರೆರಚಿಕೊಳ್ಳುತ್ತಿದ್ದಾರೆ. ಈಶ್ವರಪ್ಪ ಅವರು ಈ ಕುರಿತು ದೂರು ನೀಡಲು ದೆಹಲಿ ವಿಮಾನವೇರುವ ಸಾಧ್ಯತೆ ಇದೆ.

ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾದ ಬಳಿಕ ಮೂಲ ಬಿಜೆಪಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಹಲವು ನಾಯಕರ ಆರೋಪ. ಈ ಬಗ್ಗೆ ಒಂದಷ್ಟು ನಾಯಕರ ಗುಂಪು ಈಶ್ವರಪ್ಪನವರೊಂದಿಗೆ ಕೈಜೋಡಿಸಿದೆ. ['ಈಶ್ವರಪ್ಪ ದೊಡ್ಡ ನಾಯಕರು, ಅವರ ಜೊತೆ ಮಾತನಾಡುವೆ']

ks eshwarappa

ಪದಾಧಿಕಾರಿಗಳ ಪಟ್ಟಿಯಲ್ಲಿ ತಮಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದಿದ್ದೇವೆ. ಆದರೆ, ನಮಗೆ ಸ್ಥಾನಮಾನ ನೀಡದೆ ಕೆಜೆಪಿಯಿಂದ ವಲಸೆ ಬಂದವರಿಗೆ ಆದ್ಯತೆ ನೀಡಲಾಗಿದೆ ಎಂಬುದು ಅತೃಪ್ತನಾಯಕರ ಅಳಲು. [ಶೋಭಾ ಕರಂದ್ಲಾಜೆ ನೋಡಿದ್ರೆ ಸಿಟಿ ರವಿ ಸಿಟ್ಟಾಗ್ತಾರೆ ಏಕೆ?]

ಇವುಗಳ ನಡುವೆಯೇ ಬಿಜೆಪಿಯಲ್ಲಿ ಭುಗಿಲೆದ್ದಿರುವ ಬಂಡಾಯ ತಾರಕ್ಕೇರಿದ್ದು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸುವಂತೆ ವರಿಷ್ಟರನ್ನು ಒತ್ತಾಯಿಸಲು ಈಶ್ವರಪ್ಪ, ಪ್ರಹ್ಲಾದ್ ಜೋಷಿ ಸೇರಿದಂತೆ ಹಲ ನಾಯಕರು ದೆಹಲಿಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ ಎಂಬುದು ಶುಕ್ರವಾರದ ಸುದ್ದಿ. [ಮೂಲ ಬಿಜೆಪಿ VS ವಲಸೆ ಬಿಜೆಪಿ: ಬಿಎಸ್ ವೈಗೂ ಭಿನ್ನಮತದ ಬಿಸಿ]

ಯಡಿಯೂರಪ್ಪ ಅವರು ಪಕ್ಷ ತೊರೆದು ಕೆಜೆಪಿಗೆ ಹೋದರೂ ಪಕ್ಷ ಅವರನ್ನು ಮರಳಿ ಕರೆತಂದು ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ಆದರೆ, ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ಕೆಜೆಪಿಯಲ್ಲಿದ್ದ ತಮ್ಮ ಬೆಂಬಲಿಗರಿಗೆ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದವರಿಗೂ ಪದಾಧಿಕಾರಿಗಳ ಹುದ್ದೆಗಳನ್ನು ನೀಡಲಾಗಿದೆ ಎಂದು ನಾಯಕರು ದೂರುತ್ತಿದ್ದಾರೆ.

ಪಕ್ಷದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಪ್ರಾಮುಖ್ಯತೆ ನೀಡುತ್ತಿದ್ದು, ಅವರ ಹಿಡಿತದಲ್ಲಿರಬೇಕು ಎಂದು ತೀರ್ಮಾನಿಸಿದಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿರುವ ನಾಯಕರು, ತಮಗೆ ಬೇಕಾದವರನ್ನೇ ಆಯಕಟ್ಟಿನ ಜಾಗಗಳಿಗೆ ತಂದು ಕೂರಿಸುತ್ತಿದ್ದಾರೆ ಎಂಬ ದೂರನ್ನು ಹೈಕಮಾಂಡ್ ನಾಯಕರಿಗೆ ನೀಡಲಿದ್ದಾರೆ.

ಪದಾಧಿಕಾರಿಗಳು ಹಾಗೂ ಜಿಲ್ಲಾ ಸಮಿತಿಗಳನ್ನು ಬದಲಿಸಲು ಒತ್ತಡ ತರುವುದರೊಂದಿಗೆ, ಪಕ್ಷಕ್ಕಾಗಿ ದುಡಿದವರಿಗೆ ಆದ್ಯತೆ ನೀಡುವಂತೆ ಹೈಕಮಾಂಡ್‍ನ್ನು ಒತ್ತಾಯಿಸುವ ಸಾಧ್ಯತೆಯಿದೆ. ಒಟ್ಟಾರೆ ಕಮಲಪಕ್ಷದಲ್ಲಿ ಎದ್ದಿರುವ ಅಸಮಾಧಾನವನ್ನು ಕೇಂದ್ರದ ನಾಯಕರು ಹೇಗೆ ಬಗೆಹರಿಸುತ್ತಾರೆ? ಎಂದು ಕಾದು ನೋಡಬೇಕು.

English summary
Clash between KS Eshwarappa and party president BS Yeddyurappa has reached boiling point. According to reliable sources, Eshwarappa has decided to approach BJP high command and explain his stand and status in Karnataka. Eshwarappa's allegation is that Yeddyurappa is taking one sided decision and not listening to any leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X