ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಪ್ರೇಮ, ಬೆಂಗಳೂರು ಯುವತಿ ಅಪಹರಣ, ರಕ್ಷಣೆ

By Srinath
|
Google Oneindia Kannada News

Karnataka Bagalkot woman rescued in Delhi- Boyfriend arrested
ಬೆಂಗಳೂರು/ನವದೆಹಲಿ, ಫೆ. 25: ಆರು ತಿಂಗಳ ಹಿಂದೆ ತನ್ನ ಮೊಬೈಲಿಗೆ ಬಂದಿದ್ದ ಮಿಸ್ಡ್ ಕಾಲ್ ಆ ಯುವತಿಯ ಅಪಹರಣ ಹಂತಕ್ಕೆ ಕರೆದೊಯ್ದಿತ್ತು. ಆದರೆ ಬೆಂಗಳೂರು ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಯುವತಿ ಕ್ಷೇಮವಾಗಿ ವಾಪಸಾಗಿದ್ದಾಳೆ.

ಕರ್ನಾಟಕದ 21 ವರ್ಷದ ಯುವತಿಯನ್ನು ಪಶ್ಚಿಮ ಬಂಗಾಳದ ಯುವಕನೊಬ್ಬ ಪ್ರೇಮ ಬಲೆಗೆ ಕೆಡವಿ, ಆಕೆಯನ್ನು ದೆಹಲಿಗೆ ಅಪಹರಿಸಿ, 10 ಲಕ್ಷ ರೂಪಾಯಿ ಒತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದ. ಆದರೆ ಕರ್ನಾಟಕ ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಯುವತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದಹಾಗೆ ಅಪಹರಣಕ್ಕೆ ಒಳಗಾದ ಯುವತಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯವಳಾಗಿದ್ದಾಳೆ. ಯುವತಿಯನ್ನು ಅಪಹರಿಸಿದ್ದವ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ನಿವಾಸಿ ಸಂಜಯ್‌ ಡೇ. ಮೊನ್ನೆ ಭಾನುವಾರ ದಿಲ್ಲಿಯ ದಕ್ಷಿಣ ಭಾಗದಲ್ಲಿರುವ ಮಹಿಪಾಲ್‌ ಪುರದಲ್ಲಿ ನಾನಾ ಕಡೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ಸಂಜಯ್‌ ಡೇ 6-7 ತಿಂಗಳ ಹಿಂದೆ ನನ್ನ ಮೊಬೈಲಿಗೆ ಮಿಸ್ಡ್ ಕಾಲ್ ಬಂದಿತ್ತು. ನಾನು ತಿರುಗಿ ಅದಕ್ಕೆ ಫೋನ್‌ ಮಾಡಿದ್ದೆ. ಆಗ ನನಗೆ ಪರಿಚಿತನಾಗಿದ್ದೇ ಈ ಸಂಜಯ್‌. ಸುಮಾರು ಕಾಲ ಫೋನ್ ಮೂಲಕವೇ ಪರಿಚಯ ಸಾಗಿತ್ತು. ಆನಂತರ ಸಂಧಿಸತೊಡಗಿದೆವು. ಆ ವೇಳೆ, ತಾನೊಬ್ಬ ವ್ಯಾಪಾರಿ ಎಂದು ಹೇಳಿ ನಂಬಿಸಿ ಸಲುಗೆ ಬೆಳೆಸಿಕೊಂಡಿದ್ದ' ಎಂದು ಯುವತಿ ಹೇಳಿದ್ದಾಳೆ.

ಆದರೆ ಇದೆಲ್ಲ ಯುವತಿಯ ಮನೆಯವರಿಗೆ ತಿಳಿದಿರಲಿಲ್ಲ. ಮಗಳ ಮದುವೆ ಬಗ್ಗೆ ತಲೆಕೆಡಿಸಿಕೊಂಡ ಅಪ್ಪ-ಅಮ್ಮ ವರನೊಬ್ಬನನ್ನು ನೋಡಿ, ಇದೇ ಏಪ್ರಿಲ್ ನಲ್ಲಿ ಮಗಳ ಮದುವೆಗೆ ಸಿದ್ಧತೆ ನಡೆಸಿದ್ದರು. ಮದುವೆಗೆಂದು ಲಕ್ಷಾಂತರ ರೂಪಾಯಿ ಚಿನ್ನಾಭರಣ, ನಗದು ತಂದಿಟ್ಟುಕೊಂಡಿದ್ದರು.

ಅದನ್ನು ತನ್ನ ಮನದನ್ನೆಯ ಮುಖಾಂತರ ಕೇಳಿ ತಿಳಿದುಕೊಂಡ ಸಂಜಯ್‌ ಡೇ ಬೇರೆಯದೆ ಪ್ಲಾನ್ ಹಾಕಿದ. ಒನ್ ಫೈನ್ ಡೆ ... ಮನೆಯಲ್ಲಿರುವ ಚಿನ್ನಾಭರಣ ತಂದುಬಿಡು ತಾವಿಬ್ಬರೂ ಓಡಿಹೋಗೋಣ ಎಂದು ಯುವತಿಯನ್ನು ಪುಸಲಾಯಿಸಿದ್ದಾನೆ.

ಸಂಜಯನ ಮಾತಿಗೆ ಮರುಳಾದ ಯುವತಿ, ಫೆ. 20ರಂದು ಮಹೂರ್ತ ಫಿಕ್ಸ್ ಮಾಡಿಯೇ ಬಿಟ್ಟಳು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜಯನನ್ನು ಕರೆಯಿಸಿಕೊಂಡಿದ್ದಾಳೆ. ಆ ವೇಳೆಗೆ ಮನೆಯಲ್ಲಿ ಅಪ್ಪ-ಅಮ್ಮ ತನ್ನ ಮದುವೆಗೆಂದು ಕಷ್ಟಪಟ್ಟು ಹೊಂದಿಸಿದ್ದ ಒಡವೆ, ನಗದನ್ನು ಕದ್ದು, ತಾನೂ ವಿಮಾನ ನಿಲ್ದಾಣ ತಲುಪಿಕೊಂಡಿದ್ದಾಳೆ. ಅಲ್ಲಿಂದ ಅಪ್ಪ-ಅಮ್ಮನಿಗೆ ಮನದಲ್ಲೇ ಗುಡ್ ಬೈ ಹೇಳಿದ ಯುವತಿ ತನ್ನ ಪ್ರಿಯಕರನ ಜತೆ ನೇರವಾಗಿ ದಿಲ್ಲಿಗೆ ಹಾರಿದ್ದಾಳೆ.

ಅಲ್ಲೇನಾಯ್ತು, ದಿಲ್ಲಿಯಲ್ಲಿ?:
ದಿಲ್ಲಿಯ ಮಹಿಪಾಲಪುರದಲ್ಲಿರುವ ತನ್ನ ಗೆಸ್ಟ್ ಹೌಸಿಗೆ ಸಂಜಯ ಯುವತಿಯನ್ನು ಕರೆದೊಯ್ದಿದ್ದಾನೆ. ಅಂದು ರಾತ್ರಿ ಇಬ್ಬರು ಅದೇ ಗೆಸ್ಟ್ ಹೌಸಿನಲ್ಲಿ ಕಳೆದಿದ್ದಾರೆ. ಆದರೆ ಮುಂದೆ ಭವಿಷ್ಯದಲ್ಲಿ ದುಡ್ಡಿನ ಕೊರತೆಯುಂಟಾಗುತ್ತದೆ ಎಂದು ಬೇರೋಜ್ ಗಾರ್ ಸಂಜಯ ಲೆಕ್ಕಾಚಾರ ಹಾಕಿದ್ದಾನೆ. ಅದಕ್ಕೆ ಮತ್ತೆ ಇನ್ನೊಂದು ನಾಟಕಕ್ಕೆ ಅಣಿಯಾಗಿದ್ದಾನೆ.

ಯುವತಿಯ ಮನೆಗೆ ಕರೆ ಮಾಡಿ, ನಿಮ್ಮ ಮಗಳನ್ನು ಅಪಹರಿಸಿದ್ದೇನೆ. ಜಸ್ಟ್ 10 ಲಕ್ಷ ರೂ. ಕೊಡಿ ಎಂದು ಮೊಬೈಲಿನಲ್ಲಿ ಕೇಳಿದ್ದಾನೆ. ಕೊನೆಗೆ ಆ ಮೊಬೈಲ್ ಕರೆಯೇ ಪ್ರಕರಣ ಬೇಧಿಸಲು ಪೊಲೀಸರಿಗೆ ನೆರವಾಗಿದ್ದು ಅನ್ನಿ.

ಅಂದಹಾಗೆ ಸಂಜಯ ಪಿಯುಸಿ ಡ್ರಾಪ್ ಔಟ್. ಅವನಪ್ಪ ಟಿ ಶರ್ಟ್ ಸಿದ್ದ ಉಡುಪು ತಯಾರಿಕಾ ಘಟಕ ನಡೆಸುತ್ತಾನೆ. ಪ್ರಕರಣದ ಕಥಾನಾಯಕಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ.

English summary
Karnataka Bagalkot woman rescued in Delhi- Boyfriend arrested. A 21-year-old woman from Karnataka was rescued from South Delhi's Mahipalpur area in a joint operation of Delhi and Karnataka Police after the man she had eloped allegedly made ransom calls to her father demanding Rs 10 lakh. Sujoydey (27), a resident of 24 Pargana district of West Bengal, was arrested from Mahipalpur by the joint team and the girl was rescued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X