ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಮಂಡಲ ಅಧಿವೇಶನ: ಡಿಕೆಶಿ VS ಈಶ್ವರಪ್ಪ

By Madhusoodhan
|
Google Oneindia Kannada News

ಬೆಂಗಳೂರು, ಜುಲೈ, 04: ಅಕ್ರಮ ಮರಳು ಗಣಿಗಾರಿಗೆ ವಿರುದ್ಧ ದನಿ ಎತ್ತಿದ ಬಿಜೆಪಿ, ಇಂಧನ ಸಚಿವ ಡಿಕೆ ಶಿವಕುಮಾರ್ ಮೇಲೆ ಮುಗಿಬಿದ್ದ ವಿಧಾನಪರಿಷತ್ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ, ಕನಕಪುರ ಮತ್ತು ರಾಮನಗರ ಅಕ್ರಮಗಳ ತವರಾಗಿದೆ ಎಂದು ಆರೋಪಿಸಿದ ಬಿಜೆಪಿ..

ನೂತನವಾಗಿ ಪರಿಷತ್ ಗೆ ಆಯ್ಕೆಯಾದ ಬಸವರಾಜ ಹೊರಟ್ಟಿ ಸೇರಿದಂತೆ ಹನುಮಂತಪ್ಪ ರುದ್ರಪ್ಪ ನಿರಾಣಿ ಮತ್ತು ಅರುಣ್ ಷಹಾಪುರ್ ಅವರು ಇಂದು ಪ್ರಮಾಣ ವಚನ ತೆಗೆದುಕೊಂಡರು. ಇದು ವಿಧಾನ ಮಂಡಲ ಅಧಿವೇಶನದ ಎರಡನೇ ದಿನದ ಹೈಲೈಟ್ಸ್. ['ಆರೋಗ್ಯ ಇಲಾಖೆ ಎಂದರೆ ತೆಲುಗು ಸಿನಿಮಾದ ನರಕ']

karnataka


ನಿಮ್ಮ ದಾದಾಗಿರಿಯನ್ನು ಇಲ್ಲಿ ತೋರಿಸಬೇಡಿ, ಜೈಲಿನಲ್ಲಿ ಇರಬೇಕಾದವರು ಮಂತ್ರಿಯಾಗಿದ್ದೀರಿ ಎಂದು ಕೆ ಎಸ್ ಈಶ್ವರಪ್ಪ ಇಂಧನ ಸಚಿವ ಡಿಕೆ ಶಿವಕುಮಾರ್ ಅವರನ್ನು ಕೆಣಕಿದ್ದು ಗೊಂದಲಕ್ಕೆ ದಾರಿ ಮಾಡಿಕೊಟ್ಟಿತು. ಇದಕ್ಕೆ ಡಿಕೆಶಿ ಮತ್ತು ಸಚಿವ ಎ ಮಂಜು ಸರಿಯಾಗಿಯೇ ತಿರುಗೇಟು ನೀಡಿದರು.

ಶಿಕ್ಷಕರ ಕ್ಷೇತ್ರದಿಂದ ಸತತವಾಗಿ ಏಳನೇ ಬಾರಿಗೆ ವಿಧಾನ ಪರಿಷತ್‌ಗೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಬಸವರಾಜ ಹೊರಟ್ಟಿ ಅವರು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆಂದು ವಿಧಾನ ಪರಿಷತ್ ಸಭಾಧ್ಯಕ್ಷರಾದ ಡಿ.ಎಚ್. ಶಂಕರಮೂರ್ತಿ ವಿಧಾನ ಪರಿಷತ್ತಿನಲ್ಲಿ ಪ್ರಕಟಿಸಿದರು.

ಆನ್‌ಲೈನ್‌ನಲ್ಲಿ ಕೃಷಿ ಉಪಕರಣ ಬಾಡಿಗೆ ಒದಗಿಸಲು ಚಿಂತನೆ:
ಸಾರ್ವಜನಿಕರಿಗೆ ಟ್ಯಾಕ್ಸಿ ಸೇವೆ ಒದಗಿಸುವ ಒಲಾ ಮಾದರಿಯಲ್ಲಿ ರೈತರಿಗೆ ಆನ್ ಲೈನ್ ಮೂಲಕ ಕೃಷಿ ಉಪಕರಣಗಳನ್ನು ಬಾಡಿಗೆಗೆ ಒದಗಿಸಲು ಚಿಂತಿಸಲಾಗುತ್ತಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು.[ಅಕ್ಕಪಕ್ಕದಲ್ಲೇ ಕಾಣಿಸಿಕೊಂಡ ಬಿಎಸ್‌ವೈ ಮತ್ತು ಈಶ್ವರಪ್ಪ]

ವಿಧಾನ ಪರಿಷತ್ತಿನಲ್ಲಿಂದು ರಾಮಚಂದ್ರಗೌಡ ಅವರು ಪ್ರಶ್ನೋತ್ತರ ವೇಳೆಯಲ್ಲಿ ಎಷ್ಟು ಕೃಷಿ ಯಂತ್ರಗಳು ಬಾಡಿಗೆಗೆ ದೊರೆಯಲಿವೆ ಮತ್ತು ಎಲ್ಲೆಲ್ಲಿ ದೊರೆಯಲಿವೆ ಎಂಬ ಮಾಹಿತಿಯನ್ನು ರೈತರಿಗೆ ಅಂತರ್ ಜಾಲಗಳ ಮುಖಾಂತರ ತಿಳಿಸಿದಲ್ಲಿ ಅವರಿಗೆ ಯಂತ್ರಗಳನ್ನು ಬಾಡಿಗೆಗೆ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಸಚಿವರು ಆನ್‌ಲೈನ್ ವ್ಯವಸ್ಥೆಯ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.

ರೈತರು ತಮ್ಮ ಆದಾಯದಲ್ಲಿ ಅರ್ಧದಷ್ಟುನ್ನು ಕೂಲಿಗೆ ವೆಚ್ಚಮಾಡುತ್ತಿದ್ದಾರೆ. ಆದರೆ ರೈತರು ಬೆಳೆಯನ್ನು ನಾಟಿ ಮಾಡಲು ಹಾಗೂ ಕಟಾವು ಮಾಡಲು ಯಂತ್ರಗಳನ್ನು ಬಳಸಿದರೆ ಶೇಕಡ 30 ರಷ್ಟು ಹಣ ಉಳಿತಾಯ ಮಾಡಬಹುದು ಎಂದು ಹೇಳಿದರು.[3ಪಕ್ಷಗಳ ಅತೃಪ್ತಿಯ ಹೊಗೆಯ ನಡುವೆ, ಸದನದಲ್ಲೂ ಸಿದ್ದು ಮೇಲುಗೈ?]

2017 ಮಾರ್ಚ್ ಅಂತ್ಯದೊಳಗೆ ಹೊರಗುತ್ತಿಗೆ ನೇಮಕಾತಿ ರದ್ದು
ರಾಜ್ಯದಾದ್ಯಂತ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ನೇಮಕಾತಿಯನ್ನು 2017 ರ ಮಾರ್ಚ್ ಅಂತ್ಯದೊಳಗೆ ರದ್ದು ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ್ ಬಿ. ಖಂಡ್ರೆ ಅವರು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕೆ. ಪ್ರತಾಪಚಂದ್ರಶೆಟ್ಟೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರ ಸೇವೆಯನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಶ್ರೀಮತಿ ಉಪಾದೇವಿರವರ ಪ್ರಕರಣದಲ್ಲಿ ವಿಧಿಸಲಾದ 4 ಷರತ್ತುಗಳನ್ನು ಪೂರೈಸಿದ ನೌಕರರ ಸೇವಿಯನ್ನು ಸಕ್ರಮ ಮಾಡಲು 9 ತಿಂಗಳ ಕಾಲಾವಕಾಶ ನೀಡಲಾಗಿದ್ದು, ಸಕ್ರಮಾತಿ ಪ್ರಕ್ರಿಯಿಯು ಪ್ರಗತಿಯಲ್ಲಿದೆ ಎಂದರು.

ಹೊರಗುತ್ತಿಗೆ ಪೌರಕಾರ್ಮಿಕರಿಗೆ ಸೇವಾ ಭದ್ರತೆಯನ್ನು ಒದಗಿಸಲಾಗಿದ್ದು, ಅವರ ಹೆಸರಿಗೆ ಬ್ಯಾಂಕ್‌ನಲ್ಲಿ ತೆರೆಯಲಾಗಿರುವ ಎಸ್‌ಕಾರ್ಟ್ ಖಾತೆಗೆ ಮುಂಗಡವಾಗಿ ಎರಡು ತಿಂಗಳ ವೇತನವನ್ನು ಹಾಗೂ 3 ಸಾವಿರ ರೂ ಸಂಕಷ್ಟ ಭತ್ಯೆಯನ್ನು ನೇರವಾಗಿ ಆರ್.ಟಿ.ಜಿ.ಎಸ್. ಮೂಲಕ ಪಾವತಿಸಲಾಗುತ್ತಿದೆ. ಅಲ್ಲದೆ ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಿ ಸದರಿ ನಿಯಮಗಳಡಿಯಲ್ಲಿ ಹೊರ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಪ್ರತಿ ತಾಲೂಕುಗಳಿಗೆ ಪಶುವೈದ್ಯಕೀಯ ಆಂಬುಲೆನ್ಸ್
ಪ್ರತಿ ತಾಲ್ಲೂಕುಗಳಿಗೆ ತಲಾ ಒಂದೊಂದು ಪಶುವೈದ್ಯಕೀಯ ಆಂಬುಲೆನ್ಸ್ ಗಳನ್ನು ಮಂಜೂರು ಮಾಡಲಾಗುತ್ತಿದ್ದು, ಈ ಸಾಲಿನಲ್ಲಿ ಪ್ರಥಮ ಹಂತವಾಗಿ 18 ಜಿಲ್ಲೆಗಳ 33 ತಾಲ್ಲೂಕುಗಳಿಗೆ ಒಂದು ವಾಹನದಂತೆ 33 ಸಂಚಾರಿ ಪಶುವೈದ್ಯಕೀಯ ಆಂಬುಲೆನ್ಸ್ ವಾಹನಗಳನ್ನು ಮಂಜೂರು ಮಾಡಲಾಗಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಎ ಮಂಜು ಅವರು ತಿಳಿಸಿದರು.

English summary
Bengaluru: Karnataka assembly Monsoon session second day number of issues discussed. Senior Congress MLA (Ranebennur) K.B.Koliwad become the speaker of Karnataka Legislative Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X