ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಪಿಯುಸಿ ಫಲಿತಾಂಶ: ಇವರ ಫಲಿತಾಂಶ ಕಂಡು ಅಂಧತ್ವವೂ ನಾಚಿತು!

ಕೆಲವೊಮ್ಮೆ ಸಾಧನೆಗೆ ಯಾವ ನ್ಯೂನತೆಗಳೂ ಅಡ್ಡಿಯಾಗುವುದಿಲ್ಲ, ಸಾಧಿಸಬೇಕೆಂಬ ಮನೋಬಲದೆದುರು ನ್ಯೂನತೆಗಳೇ ಸೋಲುತ್ತವೆ! ಅದಕ್ಕೆ ಉತ್ತಮ ಉದಾಹರಣೆ ಅಂಧತ್ವವನ್ನೂ ಮೆಟ್ಟಿನಿಂತು ಸಾಧನೆ ಮಾಡಿದ ಓಂಕಾರ ಪಾವಸ್ಕರ್ ಮತ್ತು ಕರೆಪ್ಪ ಬಾಳಪ್ಪ್ ಶಿಡ್ಲ್ಯಾಳ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಕಾರವಾರ, ಮೇ 12: ಕೆಲವೊಮ್ಮೆ ಸಾಧನೆಗೆ ಯಾವ ನ್ಯೂನತೆಗಳೂ ಅಡ್ಡಿಯಾಗುವುದಿಲ್ಲ, ಸಾಧಿಸಬೇಕೆಂಬ ಮನೋಬಲದೆದುರು ನ್ಯೂನತೆಗಳೇ ಸೋಲುತ್ತವೆ, ಅವು ಗೌಣ ಎನ್ನಿಸಿಬಿಡುತ್ತವೆ! ಅದಕ್ಕೆ ಉತ್ತಮ ಉದಾಹರಣೆ ಅಂಧತ್ವವನ್ನೂ ಮೆಟ್ಟಿನಿಂತು ಸಾಧನೆ ಮಾಡಿದ ಓಂಕಾರ ಪಾವಸ್ಕರ್.

ಕಾರವಾರದ ಪಿಯು ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಓಂಕಾರ್ ಪಾವಸ್ಕರ್ ಅಂಧತ್ವದಿಂದ ಬಳಲುತ್ತಿದ್ದರೂ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.94.33 ಅಂಕ ಗಳಿಸುವ ಮೂಲಕ ಮನೋಬಲದೆದುರು ಬೇರೆಲ್ಲ ಗೌಣ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಸಮಾಜಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಲ್ಲದೆ ಇತಿಹಾಸ -95, ಅರ್ಥಶಾಸ್ತ್ರ-94, ರಾಜ್ಯ ಶಾಸ್ತ್ರ-93, ಹಿಂದಿ-96, ಇಂಗ್ಲಿಷ್-88 ಅಂಕ ಪಡೆದಿರುವ ಇವರು ತಂದೆ-ತಾಯಿ, ಒಡಹುಟ್ಟಿದವರು ಮತ್ತು ಕಾಲೇಜಿಗೆ ಕೀರ್ತಿ ತಂದಿದ್ದಾರೆ.[ಕರ್ನಾಟಕ ಪಿಯುಸಿ ಫಲಿತಾಂಶ: ಮಂಗಳೂರಿನ ದರ್ಶನ್, ಪ್ರಣವ್ ಸಾಧನೆ]

Karnataka 2nd PUC results: Blind students achievement

ಯಾವ ನ್ಯೂನತೆಯೂ ಇಲ್ಲದವರೂ ಪಡೆಯಲಾಗದಷ್ಟು ಅಂಕಗಳಿಸಿ, ಮನೋಬಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.[ತಾಯಿಯೇ ನನಗೆ ಸ್ಫೂರ್ತಿ: ಪಿಯುಸಿ ಟಾಪರ್ ಸೃಜನಾ]

ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ ಅಂಧ ವಿದ್ಯಾರ್ಥಿ
ಓಂಕಾರ್ ಅವರಂತೆಯೇ ಬೆಳಗಾವಿಯ ಲಿಂಗರಾಜ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕರೆಪ್ಪ ಬಾಳಪ್ಪ್ ಶಿಡ್ಲ್ಯಾಳ ಕಲಾವಿಭಾಗದಲ್ಲಿ ಶೇ. 93.83 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.'[ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ: ಸೃಜನಾ, ರಾಧಿಕಾ, ಚೈತ್ರಾ ಟಾಪರ್ಸ್]

Karnataka 2nd PUC results: Blind students achievement

ದೃಷ್ಟಿಯಿಲ್ಲದ ಕಾರಣ ಕರೆಪ್ಪ ಅವರಿಗೆ ಓಡುವುದಕ್ಕೆ ಆಗುತ್ತಿರಲಿಲ್ಲ. ಪಠ್ಯವನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಸಿಕೊಂಡು ಪಠ್ಯವನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಕರೆಪ್ಪ ಯಾವ ನ್ಯೂನತೆಯೂ ಇಲ್ಲದ ಮಕ್ಕಳಿಗೂ ಸಾಧಿಸಲಾಗದ್ದನ್ನು ಸಾಧಿಸಿ ತೋರಿಸಿದ್ದಾರೆ. ಐಎಎಸ್ ಅಥವಾ ಕೆಎಎಸ್ ಮಾಡುವ ಮಹದಾಸೆ ಕರೆಪ್ಪ ಅವರದು.

English summary
Karnataka 2nd PUC results announced yesterday (may 11th). Here are the success story of two blind achievers from Karwar and Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X