ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯು ಜಿಲ್ಲಾವಾರು ರಿಸಲ್ಟ್: ದಕ್ಷಿಣ ಕನ್ನಡ 1, ಗದಗ 31

By Mahesh
|
Google Oneindia Kannada News

ಬೆಂಗಳೂರು, ಮೇ.18: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದುಕೊಂಡರೆ, ಗದಗ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಎಂದಿನಂತೆ ಬಾಲಕಿಯರು ಮೇಲುಗೈ ಪಡೆದುಕೊಂಡಿದ್ದಾರೆ.

ಮಾರ್ಚ್ 12ರಿಂದ ಮಾ.30ರ ತನಕ 1017 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. 6,10,939 ವಿದ್ಯಾರ್ಥಿಗಳ ಪೈಕಿ 3,69,474 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಈ ಬಾರಿ ಒಟ್ಟಾರೆ ಶೇ.60.54 ಫಲಿತಾಂಶ ಬಂದಿದೆ. [2014 ಪಿಯು ಫಲಿತಾಂಶ: ದಕ್ಷಿಣ ಕನ್ನಡ ಮೊದಲು, ಬೀದರ್ ಕೊನೆ]

16 ಸರ್ಕಾರಿ ಪದವಿ ಪೂರ್ವ ಕಾಲೇಜು, 1 ಅನುದಾನಿತ ಪದವಿ ಪೂರ್ವ ಕಾಲೇಜು , 38 ಅನುದಾನ ರಹಿತ ಪದವಿ ಪೂರ್ವ ಕಾಲೇಜು ಸೇರಿದಂತೆ ಒಟ್ಟು 55 ಕಾಲೇಜುಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ. ಒಟ್ಟು 47 ಕಾಲೇಜುಗಳು ಶೂನ್ಯ ಸಂಪಾದನೆ ಮಾಡಿದೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಸುಷ್ಮಾ ಗೋಡಬೋಲೆ ಫಲಿತಾಂಶ ಪ್ರಕಟಿಸಿದ್ದಾರೆ. [2015ರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ]

ದಕ್ಷಿಣ ಕನ್ನಡ ಶೇ.93.09 ರಷ್ಟು ಫಲಿತಾಂಶ ಪಡೆದು ಮೊದಲ ಪಡೆದಿದೆ. ಉಡುಪಿ ಶೇ. 92.32 ಫಲಿತಾಂಶ ಪಡೆದಿದ್ದು ದ್ವಿತೀಯ ಸ್ಥಾನದಲ್ಲಿದೆ. ಉತ್ತರ ಕನ್ನಡ ಶೇ. 81.19ರಷ್ಟು ಫಲಿತಾಂಶ ಪಡೆದು ಮೂರನೇ ಸ್ಥಾನಗಳಿಸಿದ್ದರೆ. ಶೇ 51.02ರಷ್ಟು ಫಲಿತಾಂಶ ಪಡೆದ ಗದಗ ಕೊನೆಯದಲ್ಲಿದೆ. ಪೂರ್ಣ ವಿವರ ಮುಂದಿನ ಪಟ್ಟಿಯಲ್ಲಿದೆ...

Karnataka PUC Exam Results 2015 District wise Statistics
ಶೈಕ್ಷಣಿಕ ಜಿಲ್ಲೆ ಮಾರ್ಚ್ 2015 ಫಲಿತಾಂಶ

ಮಾರ್ಚ್ 2014 ಫಲಿತಾಂಶ

ಶೇಕಡಾ ಸ್ಥಾನ ಶೇಕಡಾ

ಸ್ಥಾನ

ದಕ್ಷಿಣ ಕನ್ನಡ 93.09 1 86.64 1
ಉಡುಪಿ 92.32 2 85.57 2
ಉತ್ತರ ಕನ್ನಡ 81.19 3
72.36 4
ಕೊಡಗು 79.84 4 75.87 3
ಚಿಕ್ಕಮಗಳೂರು 75.18 5 69.29 5
ಶಿವಮೊಗ್ಗ 74.41 6 68.86
6
ಬೆಂಗಳೂರು ದಕ್ಷಿಣ 73.04 7 64.10 10
ಬೆಂಗಳೂರು ಉತ್ತರ 72.80 8 67.16
7
ಚಾಮರಾಜನಗರ 72.16 9 62.81 11
ಹಾವೇರಿ 71.58 10 65.29 8
ಬಾಗಲಕೋಟೆ 70.40 11 59.51
12
ಬೆಂಗಳೂರು ಗ್ರಾಮಾಂತರ 69.40 12 64.74 9
ಚಿಕ್ಕಬಳ್ಳಾಪುರ 68.44 13 55.14 20
ಧಾರವಾಡ 67.25 14 59.37 13
ಹಾಸನ 66.64 15 58.66
16
ಮೈಸೂರು 65.73 16 58.76 15
ಬೆಳಗಾವಿ 64.87 17 58.78 14
ಕೋಲಾರ 63.68 18 55.14 19
ರಾಮನಗರ 63.60 19 53.36 22
ಬಳ್ಳಾರಿ 63.48 20 50.99 25
ದಾವಣಗೆರೆ 62.71 21 57.90
18
ಯಾದಗಿರಿ 62.09 22 53.60 21
ಕಲಬುರಗಿ 61.06 23 46.71 29
ತುಮಕೂರು 61.02 24 58.00 17
ವಿಜಯಪುರ 60.65 25 50.34 26
ಮಂಡ್ಯ 58.57 26 52.46 23
ಕೊಪ್ಪಳ 58.35 27 49.46 27
ಚಿತ್ರದುರ್ಗ 56.67 28 48.04 28
ರಾಯಚೂರು 54.88 29 46.11 30
ಬೀದರ್ 54.40 30 44.95 31
ಗದಗ 51.02 31 52.12 24

(ಒನ್ ಇಂಡಿಯಾ ಸುದ್ದಿ)

English summary
Check it out Karnataka PUC Exam Results 2015 District wise Statistics with district position in comparison with last year results. Dakshina Kannada tops the table and Gadag at the bottom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X