ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಗೊಂದಲವಿದ್ದರೆ ಕರೆ ಮಾಡಿ

|
Google Oneindia Kannada News

ಬೆಂಗಳೂರು, ಮಾ.6 : ಪದವಿ ಪೂರ್ವ ಪರೀಕ್ಷಾ ಮಂಡಳಿ ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮಾರ್ಚ್ 12ರಿಂದ ಪಿಯುಸಿ ಪರೀಕ್ಷೆಗಳು ನಡೆಯಲಿದೆ. ಪೋಷಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷೆ ಬಗ್ಗೆ ಮಾಹಿತಿ ನೀಡುವ ಸಹಾಯವಾಣಿಯನ್ನು ತೆರೆಯಲಾಗಿದೆ.

ಗುರುವಾರ ಪದವಿ ಪೂರ್ವ ಪರೀಕ್ಷಾ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಿರ್ದೇಶಕಿ ಸುಷ್ಮಾ ಗೋಡಬೋಲೆ ಅವರು ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಮಾಹಿತಿ ನೀಡಿದರು. ಮಾರ್ಚ್ 12 ರಿಂದ 27ರ ತನಕ ಪರೀಕ್ಷೆಗಳು ನಡೆಯಲಿವೆ. [ಪರೀಕ್ಷೆ ವೇಳಾಪಟ್ಟಿ ನೋಡಿ]

Exam

6, 10, 939 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. 1,017 ಪರೀಕ್ಷಾ ಕೇಂದ್ರಗಳನ್ನು ಇದಕ್ಕಾಗಿ ತೆರೆಯಲಾಗುತ್ತದೆ. 82,067 ಪುರಾವರ್ತಿತ ವಿದ್ಯಾರ್ಥಿಗಳು, 4,96,900 ಹೊಸ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ.[ಬ್ಲೋ ಅಪ್ ಸಿಲಬಸ್ ಆಧಾರದಲ್ಲೇ ಪಿಯುಸಿ ಪರೀಕ್ಷೆ]

5,546 ಸಿಬ್ಬಂದಿಯನ್ನು ಪರೀಕ್ಷೆಗಾಗಿ ನಿಯೋಜನೆ ಮಾಡಲಾಗುತ್ತದೆ. ಇವರಲ್ಲಿ 1,017 ಅಧೀಕ್ಷಕರು, 1,017 ಸಹ ಮುಖ್ಯ ಅಧೀಕ್ಷಕರು, 2,657 ಜಾಗೃತದಳದ ಸದಸ್ಯರು, 855 ತಾಲೂಕು ಮತ್ತು ಜಿಲ್ಲಾ ವಿಶೇಷ ಜಾಗೃತದಳದ ಸದಸ್ಯರು ಸೇರಿದ್ದಾರೆ.

ಸಹಾಯವಾಣಿ ಆರಂಭ : ದ್ವಿತೀಯ ಪಿಯುಸಿ ಪರೀಕ್ಷೆ ಕುರಿತ ಗೊಂದಲಗಳನ್ನು ಬಗೆಹರಿಸಲು ಪಿಯು ಮಂಡಳಿ ಸಹಾಯವಾಣಿಯನ್ನು ಆರಂಭಿಸಿದೆ. ಮಾರ್ಚ್ 7ರ ಶನಿವಾರದಿಂದ ಕಚೇರಿ ವೇಳೆಯಲ್ಲಿ ಸಹಾಯವಾಣಿಗೆ ವಿದ್ಯಾರ್ಥಿಗಳು, ಪೋಷಕರು ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಸಹಾಯವಾಣಿ ಸಂಖ್ಯೆಗಳು 080-23468740/ 8741

English summary
Karnataka II PUC exam will be held form 12th March to 27th March 2015 said, Director of PU Department Sushama Godbole on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X