ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೇ ಭಗವಾನ್! ಯಾರು? ಏನು? ಎತ್ತ? ಏನಿದೆಲ್ಲ?

By Mahesh
|
Google Oneindia Kannada News

ಬೆಂಗಳೂರು, ಸೆ. 21: ಕನ್ನಡದ ಜನಪ್ರಿಯ ಅನುವಾದಕ, ಚಿಂತಕ, ವಿಚಾರವಾದಿ, ವಿಮರ್ಶಕ ನಿವೃತ್ತ ಇಂಗ್ಲಿಷ್ ಪ್ರೊಫೆಸರ್ ಕೆ.ಎಸ್. ಭಗವಾನ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಭಗವಾನ್ ಅವರ ಸಾಹಿತ್ಯ ಕೃಷಿಯ ಸ್ಥೂಲ ಪರಿಚಯ ಇಲ್ಲಿದೆ...

ಭಗವಾನ್ ಅವರು ಸರಳ ರೀತಿಯ ವಿವಾಹ ಪ್ರಚುರಪಡಿಸಿ ಸಾವಿರಾರು ದಂಪತಿಗಳ ಹೊಸ ಬಾಳಿಗೆ, ಹೊಸ ಹಾದಿಗೆ ಕಾರಣರಾಗಿದ್ದಾರೆ. ಅವರನ್ನು 'ಜಾತ್ಯತೀತ ಜೋಯಿಸ' ಎಂದು ಕೂಡಾ ಕರೆಯುತ್ತಾರೆ.

ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಕೆ.ಎಸ್ ಭಗವಾನ್ ಅವರು ವಿವಾದಗಳಿಂದ ಜನಪ್ರಿಯತೆ ಗಳಿಸಿದವರು. ಅದರೆ, ಯಾವುದೇ ಟೀಕೆ, ವಿರೋಧಕ್ಕೂ ಅಂಜದೆ ತಮ್ಮ ಎಡಪಂಥೀಯ ಹಾಗೂ ಹಿಂದೂ ವಿರೋಧಿ ಆಲೋಚನೆಯನ್ನು ಮಂಡಿಸುವುದರಲ್ಲಿ ಎಂದಿಗೂ ಹಿಂದೇಟು ಹಾಕಿದವರಲ್ಲ. [ಕೆಎಸ್ ಭಗವಾನ್ ವಿರುದ್ಧ ಸಹಿ ಸಂಗ್ರಹ ಅಭಿಯಾನ]

ಭಗವದ್ಗೀತೆ, ಆದಿ ಶಂಕರಾಚಾರ್ಯ, ಶ್ರೀಕೃಷ್ಣ, ಶ್ರೀರಾಮ ಹೀಗೆ ಎಲ್ಲರ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾದ ಭಗವಾನ್ ಅವರು ಅನೇಕ ಪ್ರಬಂಧಗಳು, ಅನುವಾದಿತ ನಾಟಕಗಳನ್ನು ಕನ್ನಡ ಓದುಗರಿಗೆ ನೀಡಿದ್ದಾರೆ. ಇದರಲ್ಲಿ ಶೇಕ್ಸ್ ಪಿಯರ್ ನ ಒಂಭತ್ತು ನಾಟಕಗಳ ಅನುವಾದ, ಕುವೆಂಪು ಅವರ ಮೆಚ್ಚುಗೆ ಪಡೆದ ಅವರ ಕ್ರಾಂತಿಕಾರಿ ಕೃತಿ 'ಶಂಕರಾಚಾರ್ಯ ಮತ್ತು ಪ್ರತಿಗಾಮಿತನ' ಪ್ರಮುಖವಾಗಿದೆ. [ಭಗವಾನ್ ಅವರ ಈ ಹಿಂದಿನ ವಿವಾದಗಳು]

ಪ್ರಶಸ್ತಿ, ಪುರಸ್ಕಾರಗಳು

ಪ್ರಶಸ್ತಿ, ಪುರಸ್ಕಾರಗಳು

* 1999ರಲ್ಲಿ ರಾಜ್ಯೋತ್ಸವ ಪ್ರಶಸ್ತಿ
* ಕಾವ್ಯಾನಂದ ಪ್ರಶಸ್ತಿ, ನಾಡ ಚೇತನ ಪ್ರಶಸ್ತಿ,
* 2007 ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
* 2011ಹುಣಸೂರಿನಲ್ಲಿ ನಡೆದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ.
* ಕುವೆಂಪು ಪ್ರಶಸ್ತಿ, ಸಾಹಿತ್ಯ ಕಲಾರತ್ನ ಪ್ರಶಸ್ತಿ, ಶೂನ್ಯ ಪೀಠ ಪ್ರಶಸ್ತಿ
* ಕರ್ನಾಟಕ ಸರ್ಕಾರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ.
* ದಾವಣಗೆರೆಯ ಪ್ರೊ.ಬಿ.ವಿ.ವೀರಭದ್ರಪ್ಪ ಪ್ರತಿಷ್ಠಾನ ನೀಡುವ 'ಲೋಕಾಯತ' ಪ್ರಶಸ್ತಿಗೆ ಆಯ್ಕೆ .
* 2013ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
* ಕರ್ನಾಟಕ ಕ್ರಾಂತಿರತ್ನ ಪ್ರಶಸ್ತಿ

ಕೆಎಸ್ ಭಗವಾನ್ ಅವರ ಕೃತಿಗಳು

ಕೆಎಸ್ ಭಗವಾನ್ ಅವರ ಕೃತಿಗಳು

* ಶಂಕರಾಚಾರ್ಯ ಮತ್ತು ಪ್ರತಿಗಾಮಿತನ, ಗಾಂಧಿಯನ್ನು ಗೋಡ್ಸೆ ಏಕೆ ಕೊಂದ? ಭಾಷೆ ಮತ್ತು ಸಂಸ್ಕೃತಿ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ -ವಿಚಾರವಾದ ಕೃತಿಗಳು
* ಬದಲಾವಣೆ, ಆಂತರ್ಯ, ಕುವೆಂಪು ಯುಗ (ವಿಮರ್ಶಾತ್ಮಕ ಕೃತಿಗಳು)
* ಶೇಕ್ಸ್ ಪಿಯರ್ ನ ಜೂಲಿಯಸ್ ಸೀಸರ್, ಹ್ಯಾಮ್ಲೆಟ್, ಒಥೆಲೋ ಸೇರಿ 9 ನಾಟಕಗಳು.
* ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ, ಕೆಂಗಲ್ಲರ ಭಾಷಣಗಳು ಸೇರಿದಂತೆ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ.
* ಮಕ್ಕಳ ಸಾಹಿತಿಯಾಗಿ ಶೇಕ್ಸ್ ಪಿಯರ್ ನನ್ನು ಪರಿಚಯಿಸಿದ್ದಾರೆ. ಮಂತ್ರದ ಉಂಗುರ, ನೋವಿನಾಟಗಳು, ಚರಿತ್ರಾಟಗಳು ಕೃತಿ.

ಕೆ.ಎಸ್ ಭಗವಾನ್ ಅವರ ಭಾಷಣದ ಸ್ಯಾಂಪಲ್

ಕನ್ನಡ ಸಾಹಿತ್ಯ ಪರಿಷತ್ತು ಆಯೋಜನೆಯ ಶೇಕ್ಸ್‌ಪಿಯರ್ ದರ್ಶನ - ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪ್ರೊ. ಕೆಎಸ್ ಭಗವಾನ್ ಭಾಷಣ.

ಟಿವಿ 9 ಚಕ್ರವ್ಯೂಹದಲ್ಲಿ ಭಗವಾನ್

ಟಿವಿ 9 ವಾಹಿನಿಯ ಚಕ್ರವ್ಯೂಹದಲ್ಲಿ ಭಗವಾನ್ ಅವರು ಆಸ್ತಿಕ, ನಾಸ್ತಿಕ, ದೇವರು ಧರ್ಮದ ಬಗ್ಗೆ ಮಾತಾನಾಡಿದ್ದು ಹೀಗೆ

ಸುವರ್ಣವಾಹಿನಿಯ ನೇರಮಾತಿನಲ್ಲಿ

ಸುವರ್ಣವಾಹಿನಿಯ 'ನೇರ ಮಾತು' ಕಾರ್ಯಕ್ರಮದಲ್ಲಿ ಕೆಎಸ್ ಭಗವಾನ್ ಅವರು ಮಂಡಿಸಿದ ವಾದ ಹೀಗಿದೆ.

ಭಗವಾನ್ ವಿರುದ್ಧ ಸಹಿ ಸಂಗ್ರಹ ಅಭಿಯಾನ

ಭಗವಾನ್ ವಿರುದ್ಧ ಸಹಿ ಸಂಗ್ರಹ ಅಭಿಯಾನ

ಸಾಹಿತಿ ಎಂಎಂ ಕಲಬುರ್ಗಿ ಅವರ ಹತ್ಯೆ ನಂತರ ಕೆಎಸ್ ಭಗವಾನ್ ಅವರಿಗೆ ಜೀವ ಬೆದರಿಕೆ ಪತ್ರ ಬಂದಿತ್ತು. ಆದರೆ, ಪೊಲೀಸ್ ಭದ್ರತೆಯನ್ನು ನಿರಾಕರಿಸಿದ್ದರು.ಈಗ 2013ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಟ್ಟಿಯಿಂದ ಪ್ರಶಸ್ತಿ ಪಟ್ಟಿಯಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ಸಹಿ ಸಂಗ್ರಹ ಅಭಿಯಾನವನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ಆರಂಭಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಆನ್ ಲೈನ್ ಮೂಲಕ ಸಹಿ ಸಂಗ್ರಹ ಮಾಡಲಾಗುತ್ತಿದೆ

English summary
Meet - Controversial retired English Professor, writer, rationalist K.S Bhagawan, also known as 'Secular Joyish' as he popularized simple marriage movement in Karnataka. As a writer he is known for his translations of William Shakespeares works. A recipient of Karnataka Sahithya Academy award(2013), KSB, now better known for Stirring up hornets nest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X