ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವೇರಿ ಕೈ ತಪ್ಪಿದ 81ನೇ ಸಾಹಿತ್ಯ ಸಮ್ಮೇಳನ ಆತಿಥ್ಯ

|
Google Oneindia Kannada News

ಬೆಂಗಳೂರು, ಅ.28 : 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ನಿಗದಿ ಗೊಂದಲ ಬಗೆಹರಿದಿದೆ. ಹಾವೇರಿ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ನಿರ್ಣಯವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಹಿಂಪಡೆದಿದೆ. ನ.16ರಂದು ಸಮ್ಮೇಳನ ನಡೆಸುವ ಸ್ಥಳದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ಸೋಮವಾರ ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಹಾವೇರಿಯಲ್ಲಿ ಸಮ್ಮೇಳನ ನಡೆಸುವ ಕುರಿತು ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯಲು ಸಭೆಯಲ್ಲಿ ಚರ್ಚಿಸಲಾಯಿತು. [81 ನೇ ಸಮ್ಮೇಳನ ಹಾವೇರಿಯಲ್ಲಿ]

Kannada Sahitya Sammelan

ಆದರೆ, ಹಾವೇರಿ ಅಥವ ರಾಣೆಬೆನ್ನೂರು ಇವುಗಳಲ್ಲಿ ಎಲ್ಲಿ ಸಮ್ಮೇಳನ ನಡೆಸಬೇಕು? ಎಂಬ ಬಗ್ಗೆ ಒಮ್ಮತಕ್ಕೆ ಬಾರದ ಕಾರಣ ಹಾವೇರಿ ಜಿಲ್ಲೆಯಲ್ಲಿ ಸಮ್ಮೇಳನ ನಡೆಸುವ ನಿರ್ಣಯವನ್ನು ಹಿಂಪಡೆಯಲು ನಿರ್ಧಾರ ಕೈಗೊಳ್ಳಲಾಯಿತು. ಇದರಿಂದಿ 81ನೇ ಅಕ್ಷರ ಜಾತ್ರೆ ಆತಿಥ್ಯವಹಿಸುವ ಅವಕಾಶ ಹಾವೇರಿ ಕೈತಪ್ಪಿದಂತಾಗಿದೆ. [ಮುಜರಾಯಿ ದೇವಾಲಯದಲ್ಲಿ ನ.1ರಂದು ವಿಶೇಷ ಪೂಜೆ]

ನ.16ರಂದು ಸಭೆ : 81ನೇ ಸಾಹಿತ್ಯ ಸಮ್ಮೇಳನ ಹಾವೇರಿ ಕೈ ತಪ್ಪಿದ ಹಿನ್ನಲೆಯಲ್ಲಿ ಗುಲ್ಬರ್ಗ, ಹಾಸನ ಮತ್ತು ಬಳ್ಳಾರಿ ಜಿಲ್ಲೆಗಳು ಸಮ್ಮೇಳನ ನಡೆಸಲು ಮುಂದೆ ಬಂದಿವೆ. ಬೇಲೂರಿನಲ್ಲಿ ನ.16ರಂದು ಕಸಾಪ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಸಮ್ಮೇಳನವನ್ನು ಎಲ್ಲಿ ನಡೆಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪುಂಡಲೀಕ ಹಾಲಂಬಿ ತಿಳಿಸಿದ್ದಾರೆ.

ಜನವರಿಯಲ್ಲಿ ಕೊಡಗಿನಲ್ಲಿ ನಡೆದ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ 81 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ. ಹಾವೇರಿ ಮತ್ತು ರಾಣೆಬೆನ್ನೂರು ಜಟಾಪಟಿಯಿಂದಾಗಿ ಸಮ್ಮೇಳನ ನಡೆಸುವ ಅವಕಾಶ ಹಾವೇರಿ ಜಿಲ್ಲೆಯ ಕೈ ತಪ್ಪಿದೆ.

English summary
The 81st Akhila Bharata Kannada Sahitya Sammelan is shifted form Haveri due to differences among the office bearers and members of the Haveri district unit of the parishat over the venue. Sahitya Parishat president Pundalika Halambi said, new venue will be announced in November 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X