ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಎಲ್ ಭೈರಪ್ಪನವರ ವೆಬ್ ತಾಣ ಬೀಟಾ ಆವೃತ್ತಿ ನೋಡಿ

ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ(ಎಸ್ ಎಲ್ ಭೈರಪ್ಪ) ಅವರ ಬದುಕು ಬರಹ ಕುರಿತ ಅಧಿಕೃತ ವೆಬ್ ತಾಣದ ಬೀಟಾ ಆವೃತ್ತಿ ಈಗ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ.

By Mahesh
|
Google Oneindia Kannada News

ಬೆಂಗಳೂರು, ಜನವರಿ 09: ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ(ಎಸ್ ಎಲ್ ಭೈರಪ್ಪ) ಅವರ ಬದುಕು ಬರಹ ಕುರಿತ ಅಧಿಕೃತ ವೆಬ್ ತಾಣದ ಬೀಟಾ ಆವೃತ್ತಿ ಈಗ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ.

ಪ್ರಸ್ತುತ ಈ ವೆಬ್ ತಾಣವು ಇಂಗ್ಲೀಷ್ ಮತ್ತು ಕನ್ನಡದಲ್ಲಿ ಲಭ್ಯವಿದ್ದು, ಶೀಘ್ರದಲ್ಲಿ ಹಿಂದಿ ಮತ್ತು ಮರಾಠಿಯಲ್ಲೂ ದೊರೆಯಲಿದೆ. ಈ ಜಾಲತಾಣದಲ್ಲಿ ಡಾ. ಎಸ್. ಎಲ್. ಭೈರಪ್ಪನವರ ಬದುಕು- ಬರಹ ಗಳ ಕುರಿತ ಸಮಗ್ರ ವಿವರಗಳು, ಅಪರೂಪದ ಫೋಟೋಗಳು, ಭೈರಪ್ಪನವರೊಂದಿಗಿನ ಸಂವಾದದ ವೀಡಿಯೋಗಳು, ಮುಂಬರುವ ಕಾರ್ಯಕ್ರಮಗಳು ಇತ್ಯಾದಿ ವಿವರಗಳಿವೆ.

Kannada Novelist SL Bhyrappa Website beta version launched

ಈ ವೆಬ್ ತಾಣವನ್ನು ಬೆಂಗಳೂರಿನ ಧ್ಯೇಯ ಸಾಫ್ಟ್ ವೇರ್ ನ ರವಿನಾರಾಯಣ ಮತ್ತು ತಂಡ ಅಭಿವೃದ್ಧಿಪಡಿಸಿದ್ದಾರೆ. ವೆಬ್ ಸೈಟ್ ನಲ್ಲಿರುವ ಪ್ರತಿ ಅಕ್ಷರಗಳನ್ನು ಡಾ. ಶತಾವಧಾನಿ ಆರ್. ಗಣೇಶರು ನೋಡಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದ್ದಾರೆ.

ಈ ವೆಬ್ಸೈಟ್ ಇನ್ನೂ ಅಭಿವೃದ್ಧಿಯ ಪ್ರಥಮ ಹಂತವಾಗಿದ್ದು, ಇದನ್ನು ಮತ್ತಷ್ಟು ಉತ್ತಮಗೊಳಿಸಲು/ ತಪ್ಪುಗಳನ್ನು ತಿದ್ದಲು ನಿಮ್ಮೆಲ್ಲರ ಸಲಹೆ ಸೂಚನೆಗಳಿಗೆ ಸ್ವಾಗತವಿದೆ ಎಂದು ರವಿ ನಾರಾಯಣ ಅವರು ಹೇಳಿದ್ದಾರೆ. ವೆಬ್ ತಾಣ : http://www.slbhyrappa.in

ಈ ಜಾಲತಾಣವನ್ನು ಮತ್ತಷ್ಟು ಆಕರ್ಷಕವಾಗಿ ಮಾಡಲು ನಿಮ್ಮ ಸಲಹೆ/ ಸೂಚನೆಗಳಿಗೆ ಸ್ವಾಗತವಿದೆ. ನಿಮ್ಮ ಬಳಿ ಯಾವುದಾದರೂ ಉತ್ತಮ ಗುಣಮಟ್ಟದ ಫೋಟೋಗಳು ಲಭ್ಯವಿದ್ದರೆ ದಯವಿಟ್ಟು ನಮಗೆ ಇಮೇಲ್ ಅಥವಾ ಕೊರಿಯರ್ ಮುಖಾಂತರ ಕಳುಹಿಸಲು ವೆಬ್ ನಿರ್ವಾಹಕರು ಮನವಿ ಮಾಡಿದ್ದಾರೆ.ವೆಬ್ ಸೈಟ್ ನ ಇದರಲ್ಲಿರುವ ಲೋಪ ದೋಷಗಳ ಕುರಿತಾಗಿ ನಿರ್ವಾಹಕರಿಗೆ ತಿಳಿಸಲು ಈ ಸಂಪರ್ಕ ಕೊಂಡಿಯನ್ನು ಬಳಸಿ [email protected]

ಶಶಾಂಕ ಪರಾಶರ : +91-99866 88607

(ಒನ್ಇಂಡಿಯಾ ಸುದ್ದಿ)

English summary
Kannada writer SL Bhyrappa is widely regarded as one of modern India's foremost novelists. A website based on his works and life has been launched. Here is a beta version of website take a tour and send your feedback.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X