ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪೊಲೀಸರ ಮೊರೆ ಹೋದ ಮೇಲೂ ಬೆದರಿಕೆ ನಿಂತಿಲ್ಲ'

|
Google Oneindia Kannada News

ಬೆಂಗಳೂರು, ಅಕ್ಟೋಬರ್. 13: ಅಶ್ಲೀಲ ಕಮೆಂಟ್ ಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಏರಿದ ಮೇಲೆ ಬೆದರಿಕೆ ಹೆಚ್ಚಾಗಿದೆ ಎಂದು ಲೇಖಕಿ, ಬರಹಾರ್ತಿ ಚೇತನಾ ತೀರ್ಥಹಳ್ಳಿ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ನನ್ನ ವಿರುದ್ಧ ಅಶ್ಲೀಲ ಬರಹ ಹಾಕಿದ್ದು ಗೌರವಕ್ಕೆ ಧಕ್ಕೆ ತಂದಿದ್ದಾನೆ ಎಂದು ಆರೋಪಿಸಿ ಲೇಖಕಿ, ಪತ್ರಕರ್ತೆ ಚೇತನಾ ತೀರ್ಥಹಳ್ಳಿ ಪೊಲೀಸ್ ದೂರು ದಾಖಲಿಸಿದ್ದರು.[ಪೇಜಾವರ ಶ್ರೀಗಳನ್ನು ಚರ್ಚೆಗೆ ಕರೆದಿದ್ದ ದಿನೇಶ್ ಅಮಿನಮಟ್ಟು]

Kannada Journalist Files Complaint After Online Threats

ಮಧುಸೂದನ್ ಗೌಡ ಎಂಬಾತ ಫೇಸ್‌ಬುಕ್‌ನಲ್ಲಿ ನನ್ನ ವಿರುದ್ಧ ಅವಹೇಳನಕಾರಿ ಬರಹ ಪ್ರಕಟಿಸಿದ್ದಾನೆ. ಪುರಭವನದ ಎದುರು ನಡೆದ ಗೋ ಮಾಂಸ ಭಕ್ಷಣೆ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಅತ್ಯಾಚಾರದ ಬೆದರಿಕೆ ಹಾಕಲಾಗುತ್ತಿದೆ ಎಂದು ಚೇತನಾ ದೂರಿನಲ್ಲಿ ಆರೋಪಿಸಿ ಬೆಂಗಳೂರಿನ ಹನುಮಂತನಗರ ಠಾಣೆಗೆ ದೂರು ದಾಖಲಿಸಿದ್ದರು.

ತಾವು ಹೊಂದಿರುವ 'Alavikaa La' ಹೆಸರಿನ ಫೇಸ್‌ಬುಕ್ ಖಾತೆಗೆ ಮಧುಸೂದನ್‌ ಗೌಡ ಎಂಬಾತನಿಂದ ಮೇಲಿಂದ ಮೇಲೆ ಅಶ್ಲೀಲ ಸಂದೇಶಗಳು ಬರುತ್ತಿವೆ. ನನ್ನ ಹಾಗೂ ನನ್ನ ಕುಟುಂಬ ಸದಸ್ಯರನ್ನು ನಿಂದಿಸುವಂಥ ಬರಹಗಳನ್ನು ಹಾಕುತ್ತಿದ್ದಾನೆ. ನಾನು ಬರೆಯುವ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿದ್ದಾನೆ. ಇದರಿಂದ ನನಗೆ ಮಾನಸಿಕ ಹಿಂಸೆಯಾಗುತ್ತಿದ್ದು ಪೊಲೀಸರ ಮೊರೆ ಹೋಗುತ್ತಿದ್ದೇನೆ ಎಂದು ಚೇತನಾ ಹೇಳಿದ್ದಾರೆ. ಅಲ್ಲದೇ ತಾವು ದೂರು ದಾಖಲು ಮಾಡಿರುವ ಬಗ್ಗೆ ಫೇಸ್ ಬುಕ್ ನಲ್ಲಿಯೂ ಬರೆದುಕೊಂಡಿದ್ದರು.[ಗೋಮಾಂಸ ತಿನ್ನಲು ಮುಂದಾದವರಿಗೆ ಜನರ ಪ್ರಶ್ನೆ?]

ಚೇತನಾ ಫೇಸ್ ಬುಕ್ ಖಾತೆ ವೀಕ್ಷಿಸಿ

'ಜಾಗೃತ ಭಾರತ' ಹೆಸರಿನ ಖಾತೆಯಿಂದಲೂ ಅಶ್ಲೀಲ ಸಂದೇಶಗಳು ಬರುತ್ತಿವೆ. ಫೇಸ್‌ಬುಕ್‌ನಲ್ಲಿ ಹೀಗೆ ನಕಲಿ ಖಾತೆಗಳನ್ನು ತೆರೆದು, ಅವುಗಳ ಮೂಲಕ ಅವಹೇಳನಕಾರಿ ಬರಹ ಪ್ರಕಟಿಸಿ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ. ಈ ರೀತಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚೇತನಾ ಮನವಿ ಮಾಡಿಕೊಂಡಿದ್ದರು.

'ಮಧುಸೂದನ್ ಗೌಡ ಎಂಬ ಹೆಸರಿ ನಲ್ಲಿ ಖಾತೆ ಇದೆ. ಆದರೆ, ಅದು ನಿಜಕ್ಕೂ ಅದೇ ಹೆಸರಿನ ವ್ಯಕ್ತಿಯದ್ದೋ ಅಥವಾ ನಕಲಿ ಖಾತೆಯೋ ಎಂಬುದು ತಿಳಿದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ, ಚೇತನಾ ಅವರೊಂದಿಗೆ ನಟಿ ಪೂಜಾ ಗಾಂಧಿ ಸಹ ದೂರು ಸಲ್ಲಿಕೆ ವೇಳೆ ಇದ್ದರು.

English summary
Bengaluru: Two days after she filed a complaint with the Bengaluru police for online harassment, Chetana Thirthahalli says she is still being abused. Chetana Thirtahalli a columnist for a Kannada website, lodged a complaint against two Facebook users – Madhusudhan Gowda and Jagrutha Bharatha at the Hanumnatha Nagar police station after being inundated with lewd comments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X