ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವೀಣ್ ಖಾಂಡ್ಯಗೆ ಸುಪ್ರೀಂ ನೋಟಿಸ್, ಮತ್ತೆ ಬಂಧನ ಭೀತಿ

By Mahesh
|
Google Oneindia Kannada News

ಚಿಕ್ಕಮಗಳೂರು, ಜುಲೈ 25:ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ, ತೇಜಸ್ ಅಪಹರಣ ಕೇಸಿಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ಖಾಂಡ್ಯಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿರುವ ಸುದ್ದಿ ತಿಳಿದಿರಬಹುದು. ಈಗ ಪ್ರವೀಣ್ ಗೆ ಮತ್ತೊಮ್ಮೆ ಬಂಧನ ಭೀತಿ ಶುರುವಾಗಿದೆ.

ಕಲ್ಲಪ್ಪ ಹಂಡಿಬಾಗ್ ಪ್ರಕರಣ: ಪ್ರವೀಣ್ ಖಾಂಡ್ಯಗೆ ಜಾಮೀನುಕಲ್ಲಪ್ಪ ಹಂಡಿಬಾಗ್ ಪ್ರಕರಣ: ಪ್ರವೀಣ್ ಖಾಂಡ್ಯಗೆ ಜಾಮೀನು

ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರವೀಣ್ ಖಾಂಡ್ಯಗೆ ಕಳೆದ ಡಿಸೆಂಬರ್ ನಲ್ಲಿ ಹೈಕೋರ್ಟಿನಿಂದ ನಿರೀಕ್ಷಣಾ ಜಾಮೀನು ಸಿಕ್ಕಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಮೆಟ್ಟಿಲೇರಿತ್ತು.

ಕಲ್ಲಪ್ಪ ಪ್ರಕರಣದಲ್ಲಿ ಕಿಡ್ನಾಪ್ ಆಗಿದ್ದ ತೇಜಸ್ ಹೇಳಿದ್ದೇನು
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಭಯ್ ಮನೋಹರ್ ಸಪ್ರೆ ಹಾಗೂ ನ್ಯಾ ಪ್ರಫುಲ್ ಸಿ ಪಂತ್ ಅವರಿದ್ದ ಸುಪ್ರೀಂ ಕೋರ್ಟ್ ನ ನ್ಯಾಯ ಪೀಠ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಪ್ರವೀಣ್ ಖಾಂಡ್ಯಗೆ ನೋಟಿಸ್ ಜಾರಿ ಮಾಡಿದೆ.

ಪ್ರವೀಣ್ ಖಾಂಡ್ಯಗೆ ಸುಪ್ರೀಂ ನೋಟಿಸ್, ಮತ್ತೆ ಬಂಧನ ಭೀತಿ

ಇದಲ್ಲದೆ ಜನವರಿ ತಿಂಗಳಿನಲ್ಲಿ ಪ್ರವೀಣ್ ನನ್ನು ಬಂಧಿಸಿದ ಪೊಲೀಸರು ಕಲಬುರಗಿ ಜೈಲಿಗೆ ತಳ್ಳಿದ್ದರು. ಆದರೆ, ಮತ್ತೊಮ್ಮೆ ಜಾಮೀನು ಪಡೆದು ಹೊರ ಬಂದಿದ್ದ.

ಒಟ್ಟು 33 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಹಿಂದೂಪರ ಸಂಘಟನೆ ಮುಖಂಡ ಖಾಂಡ್ಯ ಊರಿನ ಎಚ್ .ಕೆ ಪ್ರವೀಣ್‌ ಈಗ ವಿಚಾರಣೆಗೆ ಹಾಜರಾಗದೆ ವಿಧಿಯಿಲ್ಲ.

English summary
Kallappa Handibag case : VHP activist Praveen Khandya gets notice from Supreme court. Praveen was arrested by the police after it slapped provisions of the Goonda Act against him for his alleged involvement in about 33 criminal cases. However, he was again released on bail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X