ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮಾ,, ನಮ್ಮೂರಲ್ಲಿ 15 ದಿನಕ್ಕೊಮ್ಮೆ ಯಾಕೆ ನೀರು ಬಿಡ್ತಾರೆ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್. 26: 'ಅಮ್ಮಾ ಇವತ್ತು ನನ್ನ ನೆಚ್ಚಿನ ಆಟಿಕೆ ಅಂಗಡಿಗಳು ಯಾಕೆ ಬಾಗಿಲು ತೆಗೆದಿಲ್ಲಾ?' ಎಂದು ಬಂದ್ ದಿನ ಬೆಂಗಳೂರಿನ ಮಗುವು ಪ್ರಶ್ನೆ ಮಾಡುತ್ತದೆ. ಇದು ಸಾಮಾನ್ಯ ಕೂಡಾ. ಇದಕ್ಕೆ ಏನಾದರೊಂದು ಉತ್ತರ ನೀಡಿ ಸಾಗಹಾಕಬಹುದು.

'ಅಮ್ಮಾ ನಮ್ಮ ನಗರದಲ್ಲಿ 15 ದಿನಕ್ಕೊಮ್ಮೆ ಯಾಕೆ ನೀರು ಬಿಡುತ್ತಾರೆ? ಎಂದು ಹುಬ್ಬಳ್ಳಿ-ಧಾರವಾಡದ ಮಗುವೊಂದು ಪ್ರಶ್ನೆ ಮಾಡುತ್ತದೆ, ಅದಕ್ಕೆ ಯಾವ ಉತ್ತರ ನೀಡುತ್ತೀರಿ? ಹೌದು... ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಕಂಡುಬಂದ ಒಂದು ಟ್ವೀಟ್ ಇಡೀ ಉತ್ತರ ಕರ್ನಾಟಕದ ನೀರಿನ ಸಮಸ್ಯೆಯ ಕತೆಯನ್ನು ಬಿಚ್ಚಿಡುತ್ತದೆ.

karnataka

ಬೆಂಗಳೂರಿನ ತಾಯಿಯೊಬ್ಬರ ಟ್ವೀಟ್ ಗೆ ನಾಗರಿಕರು ಎರಡನೇ ಪ್ಯಾರಾದ ರೀತಿಯಲ್ಲಿ ಉತ್ತರಿಸಿದ್ದಾರೆ. ನಿಜ ಕಾಳಜಿ ಇದ್ದ ಬೆಂಗಳೂರಿಗರು ಬಂದ್ ಗೆ ಬೆಂಬಲ ನೀಡಿ ಕರ್ನಾಟಕದ ಪ್ರಜೆ ಎನಿಸಿಕೊಂಡರು.ಉಳಿದವರು? ಜಾಲತಾಣದಲ್ಲಿ ತಮ್ಮ ಭಿನ್ನ ಅಭಿಪ್ರಾಯ ಹಂಚಿಕೊಂಡು ಅಸಮಾಧಾನವನ್ನು ಹೊರಹಾಕಿದರು. ರಾಜ್ಯವೊಂದೇ, ನೀರು ಒಂದೇ ಅಂದು ಅಂದುಕೊಂಡಿದ್ದರೆ ಇಂಥ ಕಮೆಂಟ್ ಗಳನ್ನು ಹಾಕುತ್ತಿರಲಿಲ್ಲ ಬಿಡಿ.[ಉತ್ತರ ಕರ್ನಾಟಕದ ನೀರಿನ ತುಡಿತಕ್ಕೆ ಮಿಡಿದ ಬೆಂಗಳೂರು]

ಓದುಗರೊಬ್ಬರು ನಮ್ಮ ಬಂದ್ ಸುದ್ದಿಗೆ ಹಾಕಿದ ಕಮೆಂಟ್ ನೋಡಿ.. ಆಹಾ.... ಎಂತಹ ಶಾಂತ ವಾತವರಣ ಇಂದು..... ಮನೆಯ ಎದುರು ವಾಹನಗಳ ಓಡಾಟದ ಭರಾಟೆ ಇಲ್ಲ.... ಬೆಳಿಗ್ಗೆಯಿಂದ ಮನೆಯೊಡತಿಯ ಏರುಧ್ವನಿ-ಮುನಿಸುಗಳಿಲ್ಲ... ಪಕ್ಕದ ಮನೆಯ ಕಿಚನ್ ರಿಪೇರಿ ಕೊಟ-ಕೊಟ ಬಡಿತಗಳಿಲ್ಲ..... ದೋಸೆ ಮಾಡಿಕೊಂಡು ಪಟ್ಟಾಗಿ ತಿಂದು... ಒಂದು ಗಂಟೆ ಹೆಚ್ಚಾಗಿಯೇ ಪೇಪರ್ ಓದಿ, ಬಂದ್ ಸುದ್ದಿಯನ್ನು ವಾಹಿನಿಯಲ್ಲಿ ನೋಡುತ್ತಿದ್ದರೆ... ಆಕಳಿಕೆ ಬರುತ್ತಿದೆ.... ದೋಸೆಯ ಪ್ರಭಾವವಿರಬೇಕು.... ಆದರೂ ಇಂದಿನ ಶಾಂತ ವಾತಾವರಣ, ಸದ್ದು-ಗದ್ದಲಗಳಿಲ್ಲದ ನೆರೆ-ಹೊರೆ.... ಆಹಾ.... ಹಾ ಮತ್ತೆ ನನಗೂ ಕಳಸಾ-ಬಂಡೂರಿಗೂ ನಂಟು ಇಲ್ಲವೆಂದಿರಾ.... ಹಾಗಲ್ಲ... ಜನಹಿತದ ದೃಷ್ಟಿಯಿಂದ ಮೂರೂ ರಾಜ್ಯಗಳ ಮುಖ್ಯ ಮಂತ್ರಿಗಳು ಸೇರಿ ಸಮಸ್ಯೆ ಬಗೆಹರಿಸಬೇಕು.... ಇದರಲ್ಲಿ ಕೇಂದ್ರ ಸರಕಾರ / ಮೋದಿ / ಹೈ ಕಮಾಂಡಗಳ ಪಾತ್ರ ಇರಬಾರದು... ಆಗ ಮಾತ್ರ ಸಾಧ್ಯ... ಇದರಲ್ಲಿ ರಾಜಕೀಯ ಬೇಡ.... ಜನಪರ ಧ್ವನಿ, ಜನಹಿತ ಧೋರಣೆ, ಮುಖಂಡರುಗಳ ಇಚ್ಛಾಶಕ್ತಿಗಳು ಮಾತ್ರ ಬೇಕು...

ಬಂದ್ ನ ಬಗೆಯನ್ನು ವಿವರಿಸುತ್ತಲೇ... ಕಳಸಾ ಬಂಡೂರಿ ಯೋಜನೆ ಸಾಕಾರ ಹೇಗೆ ಆಗಬೇಕು ಎಂಬುದನ್ನು ಮಹಾಶಯ ತಿಳಿಸಿಕೊಟ್ಟಿದ್ದಾರೆ--

ಕಳಸಾ ಬಂಡೂರಿಗೆ ಆಗ್ರಹಿಸಿ ಕರ್ನಾಟಕ ಬಂದ್ ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಒಂದೆಡೆಯಾದರೆ, ಸಾಮಾಜಿಕ ಜಾಲತಾಣಗಳಲ್ಲೂ ನಾಗರಿಕರು ವಿಭಿನ್ನ ಬಗೆಯಲ್ಲಿ ಬೆಂಬಲ ಸೂಚಿಸಿದ್ದಾರೆ. ಟ್ವೀಟ್ ಗಳ ಮೂಲಕ, ಫೇಸ್ ಬುಕ್ ಅಪ್ ಡೇಟ್ಸ್ ಗಳ ಮೂಲಕ, ವಾಟ್ಸಪ್ ಸಂದೇಶಗಳ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ತಿಂಗಳುಗಳ ಕಾಲದಿಂದ ನಡೆಯುತ್ತಿದ್ದ ಉತ್ತರ ಕರ್ನಾಟಕದ ಜನರ ಪ್ರತಿಭಟನೆಗೆ ಇಡೀ ರಾಜ್ಯವೇ ಸೆಪ್ಟೆಂಬರ್ 26 ರಂದು ಸ್ಪಂದಿಸಿದೆ. ಕಳಸಾ ಬಂಡೂರಿ ಯಾತಕ್ಕೆ ಬೇಕು? ನದಿಯ ವಿಸ್ತಾರವೇನು? ಎಷ್ಟು ಜನರಿಗೆ ಲಾಭವಾಗುತ್ತದೆ? ಗೋವಾಕ್ಕೆ ಆಗುವ ನಷ್ಟವಾದರೂ ಏನು? ಎಂಬ ಹಲವಾರು ಅಂಶಗಳನ್ನು ತೆರೆದಿಡಿವ ಟ್ವಿಟ್ ಇಲ್ಲಿದೆ ನೋಡಿ...

ಉತ್ತರ ಕರ್ನಾಟಕದ ಜನರ ಹೋರಾಟಕ್ಕೆ ಮಾಧ್ಯಮಗಳು, ಅದರಲ್ಲೂ ವಿಶೇಷವಾಗಿ ಇಂಗ್ಲಿಷ್ ಮಾಧ್ಯಮಗಳು ಸ್ಪಂದನೆ ನೀಡಿಲ್ಲ. ಅಗತ್ಯವಿಲ್ಲದ ವಿಚಾರಗಳನ್ನು ಗಂಟೆಗಟ್ಟಲೇ ಚರ್ಚೆ ಮಾಡುವ ಮಾಧ್ಯಮಗಳಿಗೆ ಇಂಥ ವಿಷಯದ ಬಗ್ಗೆ ಗಮನ ನೀಡಲು ಸಮಯವಾದರೂ ಎಲ್ಲಿ? ಎಂದು ಪ್ರಶ್ನೆ ಮಾಡಿದ್ದಾರೆ.

ಕನ್ನಡ ಹೋರಾಟಗಾರರು ಎಲ್ಲಿದ್ದಾರೇ? ಬೆಳಗಾವಿ ಅಧಿವೇಶನದಲ್ಲಿ ಎಂಎಲ್ ಎ ಗಳು ಬಾಯಿ ಬಿಡಲಿಲ್ಲ ಯಾಕೆ? ಎಂಬ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ. ಇದಕ್ಕೆಲ್ಲ ಉತ್ತರ ನೀಡುವವರು ಯಾರು?? ಪ್ರಶ್ನೆ ಪ್ರಶ್ನೆಯಾಗೇ ಉಳಿದಿದೆ.

English summary
Karnataka Bandh: People express their support to Karnataka Bandh in different way. The only one tweet telling the real fact of North Karnataka's situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X