ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರ್ಗಿ ಹತ್ಯೆ ತನಿಖೆಗೆ ಸ್ಕಾಟ್‌ಲ್ಯಾಂಡ್‌ ಪೊಲೀಸರ ನೆರವು

|
Google Oneindia Kannada News

ಬೆಂಗಳೂರು, ಜೂನ್ 11 : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಗೆ ಸ್ಕಾಟ್‌ಲ್ಯಾಂಡ್ ಪೊಲೀಸರು ಸಹಕಾರ ನೀಡಲಿದ್ದಾರೆ. ಹತ್ಯೆಗೆ ಬಳಸಿದ ಬಂದೂಕಿನ ಕುರಿತು ಅಲ್ಲಿನ ಪೊಲೀಸರಿಂದ ಮಾಹಿತಿ ಸಂಗ್ರಹಣೆ ಮಾಡಲಾಗುತ್ತದೆ.

ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಯ ತನಿಖೆ ನಡೆಸುತ್ತಿರುವ ಸಿಬಿಐ ಡಾ.ವಿರೇಂದ್ರ ತಾವಡೆ ಅವರನ್ನು ಶುಕ್ರವಾರ ರಾತ್ರಿ ಬಂಧಿಸಿದೆ. ಈ ಬಂಧನದಿಂದಾಗಿ ಕಲಬುರಗಿ, ದಾಬೋಲ್ಕರ್ ಮತ್ತು ಗೋವಿಂದ ಪನ್ಸಾರೆ ಅವರ ಹತ್ಯೆ ಪ್ರಕರಣದ ತನಿಖೆಗೆ ಹೊಸ ಆಯಾಮ ಸಿಕ್ಕಿದೆ. [ಕಲ್ಲುಬಂಡೆಯಂತೆ ಕುಳಿತಿರುವ ಎಂಎಂ ಕಲಬುರ್ಗಿ ಹತ್ಯೆ ತನಿಖೆ]

mm kalburgi

ಈ ಮೂರು ಹತ್ಯೆ ಪ್ರಕರಣದಲ್ಲಿ ತಾವಡೆ ಅವರು ಭಾಗಿಯಾದ ಆರೋಪವಿದ್ದು, ಆ ಬಗ್ಗೆ ತನಿಖೆ ನಡೆಯುತ್ತಿದೆ.ಆದರೆ, ವಿಧಿವಿಜ್ಞಾನ ಪ್ರಯೋಗಾಲಯ ಹತ್ಯೆಗೆ ಬಳಿಸಿದ ಬಂದೂಕಿನ ಬಗ್ಗೆ ನೀಡಿವ ವರದಿ ಬಗ್ಗೆ ಗೊಂದಲಗಳಿವೆ. ಆದ್ದರಿಂದ ಸ್ಕಾಟ್‌ಲ್ಯಾಂಡ್ ಪೊಲೀಸರ ಸಹಕಾರ ಪಡೆಯಲಾಗುತ್ತಿದೆ. [ಕಲಬುರ್ಗಿ ಹತ್ಯೆ ತನಿಖೆಗೆ ವಿಶೇಷ ತಂಡ ರಚನೆ]

ಗೊಂದಲಕ್ಕೆ ಕಾರಣವೇನು? : ಗೋವಿಂದ ಪನ್ಸಾರೆ ಅವರ ಹತ್ಯೆಗೆ 2 ಬಂದೂಕನ್ನು ಬಳಸಲಾಗಿದೆ. ದಾಬೋಲ್ಕರ್ ಮತ್ತು ಕಲಬುರ್ಗಿ ಅವರ ಹತ್ಯೆಗೂ ಇದೇ ಬಂದೂಕು ಬಳಸಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. [ಕಲಬುರ್ಗಿ ಹತ್ಯೆಯ ತನಿಖೆ ವಿಳಂಬಕ್ಕೆ ಯಾರು ಕಾರಣ?]

ಆದರೆ, ಮುಂಬೈನ ಪ್ರಯೋಗಾಲಯ ಒಂದೇ ಬಂದೂರು ಬಳಕೆ ಮಾಡಲಾಗಿದೆ ಎಂದು ಹೇಳಿದೆ. ಮೂವರ ಹತ್ಯೆಗೆ ಒಂದೇ ಬಂದೂಕು ಬಳಸಲಾಗಿದೆ ಎಂದು ಮುಂಬೈ ಪ್ರಯೋಗಾಲಯ ಹೇಳಿದೆ. ಆದ್ದರಿಂದ, ಸಿಬಿಐ ಮೂರನೇ ಅಭಿಪ್ರಾಯ ಸಂಗ್ರಹಣೆ ಮಾಡಲು ಸ್ಕಾಟ್‌ಲ್ಯಾಂಡ್ ಪೊಲೀಸರ ಸಹಕಾರ ಪಡೆಯಲಿದೆ.

ಸಿಐಡಿಯಿಂದ ವಿಚಾರಣೆ : ಕಲಬುರ್ಗಿ ಹತ್ಯೆ ತನಿಖೆ ನಡೆಸುತ್ತಿರುವ ಕರ್ನಾಟಕ ಸಿಐಡಿ ಅಧಿಕಾರಿಗಳ ತಂಡ ಡಾ.ವಿರೇಂದ್ರ ತಾವಡೆ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರ ತನಿಖೆಗ ಸಹಕಾರ ನೀಡುತ್ತಿಲ್ಲ ಎಂದು ಸಿಐಡಿ ಆರೋಪ ಮಾಡುತ್ತಿದೆ.

2015ರ ಆಗಸ್ಟ್ 30ರಂದು ಧಾರವಾಡದ ಕಲ್ಯಾಣ ನಗರದ ನಿವಾಸದಲ್ಲಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದಿತ್ತು. ಮೊದಲು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದರು. ನಂತರ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

English summary
The mystery behind the murder of rationalist M M Kalburgi rests on a third opinion that would be given by the Scotland Yard Police, London. Following the arrest of Dr Virendra Tawde by the CBI in connection with the murder of Dr Narendra Dabholkar, the agency has been getting fresh leads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X