ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ಮದುವೆಗೆ ಸಾಕ್ಷಿಯಾದ ಕಲಬುರಗಿ ರಾಜ್ಯ ಮಹಿಳಾ ನಿಲಯ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಮಾರ್ಚ್ 16 : ಕಲಬುರಗಿಯ ರಾಜ್ಯ ಮಹಿಳಾ ನಿಲಯ ಮತ್ತೊಂದು ವಿವಾಹಕ್ಕೆ ಸಾಕ್ಷಿಯಾಗಿದೆ. ನಿಲಯದ ನಿವಾಸಿ ಸಿದ್ದಮ್ಮ ಅವರು ಸುರಪುರ ತಾಲೂಕಿನ ತೆಗ್ಗಳ್ಳಿ ಗ್ರಾಮದ ನಿವಾಸಿ ಭೀಮಾಶಂಕರ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಸೋಮವಾರ ಈ ವಿವಾಹ ನಡೆದಿದೆ. ಬೆಳಗ್ಗೆ 10.35ರ ಅಭಿಜಿತ ಲಗ್ನದ ಶುಭ ಮುಹೂರ್ತದಲ್ಲಿ ಪರಸ್ಪರ ಹೂಮಾಲೆ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. [ಜ್ಯೋತಿಯ ಬಾಳು ಬೆಳಗಿದ ಗಿರೀಶ್ ಕುಮಾರ್]

marriage

ವಿಜಯಪುರದ ಸರ್ಕಾರಿ ಬಾಲಕಿಯರ ಬಾಲ ಮಂದಿರದಿಂದ ಕಲಬುರಗಿ ಮಹಿಳಾ ನಿಲಯ ಸಂಸ್ಥೆಗೆ ಸೇರಿಕೊಂಡಿರುವ ಸಿದ್ದಮ್ಮ (23)ಅವರು, ನಿಂಗಪ್ಪ ಅವರ ಪುತ್ರಿ. ಪ್ರಸ್ತುತ ತಂದೆ-ತಾಯಿ ಹಾಗೂ ಇತರ ಯಾವುದೇ ಸಂಬಂಧಿಕರಿಲ್ಲ. ಸಿದ್ದಮ್ಮ ಅವರು ಸ್ವ-ಇಚ್ಛೆಯಿಂದ ವಿವಾಹಕ್ಕೆ ಒಪ್ಪಿಗೆ ನೀಡಿದ್ದರು. [ಮದುವೆ, ಲಿವಿಂಗ್ ಟುಗೆದರ್ ಬೇರೆ ಬೇರೆಯಲ್ಲ]

ಸುರಪುರ ತಾಲೂಕಿನ ತೆಗ್ಗಳ್ಳಿ ಗ್ರಾಮದ ಬ್ರಾಹ್ಮಣ ಕುಟುಂಬದ ಗುರುನಾಥರಾವ ಕುಲಕರ್ಣಿ ಅವರ ಪುತ್ರ ಭೀಮಾಶಂಕರ (27) ಅವರು 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಕೃಷಿ ಗೊಬ್ಬರ ಅಂಗಡಿಯಲ್ಲಿ ಸಹಾಯಕ ಸೇಲ್ಸ್ ಮ್ಯಾನ್ ಆಗಿರುವ ಅವರು ಮಾಸಿಕ 12,000 ರೂ. ವೇತನ ಪಡೆಯುತ್ತಿದ್ದಾರೆ. [ನೋಟರಿಗಳು ವಿವಾಹ ಪ್ರಮಾಣ ಪತ್ರ ನೀಡುವಂತಿಲ್ಲ]

ಶುಭ ಹಾರೈಸಿದೆ ಜ್ಯೋತಿ ದಂಪತಿ : ಇದೇ ನಿಲಯದಲ್ಲಿ 2015ರ ನವೆಂಬರ್‌ನಲ್ಲಿ ವಿವಾಹವಾಗಿದ್ದ ಜ್ಯೋತಿ ಮತ್ತು ಗಿರೀಶ್ ಕುಮಾರ್ ಅವರು ಸಿದ್ದಮ್ಮ ಮತ್ತು ಭೀಮಾಶಂಕರ ಅವರ ವಿವಾಹಕ್ಕೆ ಆಗಮಿಸಿ ನವ ದಂಪತಿಗೆ ಶುಭ ಕೋರಿದರು.

kalaburagi

ನಿಲಯದಲ್ಲಿ 13ನೇ ಮದುವೆ : ಕರ್ನಾಟಕದಲ್ಲಿರುವ 8 ರಾಜ್ಯ ಮಹಿಳಾ ನಿಲಯಗಳ ಪೈಕಿ ಕಲಬುರಗಿ ಒಂದಾಗಿದೆ. ಇಲ್ಲಿ 2005-06ರಿಂದ ಇಲ್ಲಿಯವರೆಗೆ ಒಟ್ಟು 12 ಮದುವೆಗಳನ್ನು ಮಾಡಲಾಗಿದೆ. ಇದು ಹದಿಮೂರನೇ ಮದುವೆಯಾಗಿದೆ. ಮದುವೆಯಾದವರೆಲ್ಲ ಸುಖ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ.

ಹೈಕೋರ್ಟ್‌ ನ್ಯಾಯಮೂರ್ತಿ ಅಶೋಕ ಬಿ. ಹಿಂಚಗೇರಿ, ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಿ.ವಿ.ಪಾಟೀಲ್, ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಬಾಲ ನ್ಯಾಯ ಮಂಡಳಿಯ ಅಧ್ಯಕ್ಷೆ ರೇಣುಕಾ ಕುಲಕರ್ಣಿ ಮುಂತಾದವರು ನವ ದಂಪತಿಗಳಿಗೆ ಶುಭ ಹಾರೈಸಿದರು.

English summary
27-year-old Bhima Shankar gave a new life for Siddamma (23) by marrying her at a simple function in State Home of Women in Kalaburagi on March 14, 2016. Siddamma was first admitted to the home for girls at Vijayaura later she was transferred to the state home for women in Kalaburagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X