ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಲ ನಾಡಲ್ಲಿ ಅರಳುತ್ತಿರುವ ಜರ್ಬೆರಾ ಹೂಗಳು!

|
Google Oneindia Kannada News

ಬಿಸಿಲ ನಾಡು ಎಂದು ಹೆಸರುವಾಸಿಯಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಕೃಷಿಭಾಗ್ಯ ಯೋಜನೆಯ ಪ್ರಯೋಜನ ಪಡೆದು ರೈತರೊಬ್ಬರು ಜರ್ಬೆರಾ ಬೆಳೆದಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಜರ್ಬೆರಾ ಹೂವಿನ ಕೃಷಿ ಮಾಡಿದ ಕೀರ್ತಿ ಕಲಬುರಗಿ ತಾಲೂಕಿನ ಕಪನೂರ ಗ್ರಾಮದ ರೈತ ಸೈಯ್ಯದ್ ರಿಯಾಜುದ್ದಿನ್ ಭುಟ್ಟೊ ಅವರಿಗೆ ಸೇರುತ್ತದೆ.

ಸೈಯ್ಯದ್ ಅವರಿಗೆ ಒಟ್ಟು 3 ಎಕರೆ ಜಮೀನಿದೆ. ಮೊದಲು 10 ಗುಂಟೆ ಪ್ರದೇಶದಲ್ಲಿ ಕೆಎಫ್ ಬಯೋಟೆಕ್ ತಂತ್ರಜ್ಞಾನ ಹಾಗೂ ಕಮಲಾಪುರದಿಂದ ಮಣ್ಣು ತಂದು ಬೆಡ್ ಸಿಸ್ಟಂದಿಂದ ನೈಸರ್ಗಿಕ ನೆರಳು ಪರದೆ (ಪಾಲಿ ಹೌಸ್) ಘಟಕ ಸ್ಥಾಪಿಸಿ, ಪೂನಾದಿಂದ 6000 ಜರ್ಬೆರಾ ಸಸಿಗಳನ್ನು ತಂದು ನೆಟ್ಟರು. [ನೇಪಥ್ಯಕ್ಕೆ ಸರಿದ ಕೊಡಗಿನ ಜೇನು ಉತ್ಪಾದನೆ]

ಮೂರು ತಿಂಗಳ ಬಳಿಕ ಪ್ರತಿ ದಿನ ಒಂಭತ್ತು ವಿಧದ ಸುಮಾರು 1000 ಜರ್ಬೆರಾ ಹೂಗಳಂತೆ ತಿಂಗಳಿಗೆ 30,000 ಹೂಗಳನ್ನು ಪಡೆಯುತ್ತಿದ್ದಾರೆ. ಇವುಗಳ ಮಾರಾಟದಿಂದ ಎಲ್ಲ ಖರ್ಚು ವೆಚ್ಚ ಹೋಗಿ ಮಾಸಿಕ 50,000 ರೂ. ಲಾಭ ಪಡೆಯುತ್ತಿದ್ದಾರೆ. ಈ ಬೆಡ್ ಸಿಸ್ಟಂ ಕೃಷಿಗೆ ನಿರ್ವಹಣಾ ವೆಚ್ಚ ಮತ್ತು ಕೀಟ ಬಾಧೆ ಹೆಚ್ಚು ತಗಲುವ ಸಂಭವವಿರುತ್ತದೆ. ಇಳುವರಿ ಪ್ರಮಾಣವೂ ಹೆಚ್ಚಾಗಿರುತ್ತದೆ. [ತಾರಸಿ ತೋಟ ನಿರ್ಮಿಸಿ, ನಿಮ್ಮ ಮನೆಯನ್ನು ಹಚ್ಚ ಹಸುರಾಗಿಸಿ]

syed riyazuddin

ಈಗ ಸೈಯ್ಯದ್ ಪುನಃ 10 ಗುಂಟೆ ಪ್ರದೇಶದಲ್ಲಿ ಜರ್ಬೆರಾ ಕೃಷಿಯನ್ನು ವಿಸ್ತರಿಸಿದ್ದಾರೆ. ಹೊಸ ಪದ್ಧತಿಯ ಮೂಲಕ 7,200 ಹೂಕುಂಡಗಳಲ್ಲಿ ಕೋಕೋ ಪಿಟ್ ಮಣ್ಣಿನಲ್ಲಿ ಜರ್ಬೆರಾ ಸಸಿಗಳನ್ನು ಬೆಳೆದಿದ್ದಾರೆ. ಈ ಪದ್ಧತಿಯಲ್ಲಿ ನಿರ್ವಹಣಾ ವೆಚ್ಚ ಮತ್ತು ಕೀಟ ಬಾಧೆ ಹೆಚ್ಚು ಇರುವುದಿಲ್ಲ. ಸರಾಸರಿ ಇಳುವರಿ ಪ್ರಮಾಣ ಕಡಿಮೆ ಬರುತ್ತದೆ. [ಸಾಂಬಾರ ಪದಾರ್ಥಗಳ ರಾಣಿ ಏಲಕ್ಕಿ ನೇಪಥ್ಯಕ್ಕೆ ಸರಿದಿದ್ದೇಕೆ?]

ತೋಟಗಾರಿಕಾ ಇಲಾಖೆ ಸಹಾಯ : ಜರ್ಬೆರಾ ಕೃಷಿಯನ್ನು ಒಂದು ಸವಾಲಾಗಿ ಸ್ವೀಕರಿಸಿರುವ ಸೈಯ್ಯದ್ ಜೇವರ್ಗಿಯ ಪ್ರವೀಣ ಮತ್ತು ಆಳಂದ ತಾಲೂಕಿನ ಪ್ರಗತಿಪರ ರೈತ ವಿ.ಡಿ.ಪಾಟೀಲ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಾಂತ್ರಿಕ ಸಲಹೆ ಪಡೆದಿದ್ದಾರೆ. ಆರಂಭದಲ್ಲಿ ಮಣ್ಣಿನ ಹಾಗೂ ನೀರಿನ ಸಮಸ್ಯೆ ಎದುರಿಸಿದರು. ಕೊಳವೆಬಾವಿಯಲ್ಲಿ ಸಿಕ್ಕ ಮೂರು ಇಂಚು ನೀರಿನ ಲಭ್ಯತೆಯನ್ನು ಆಧಾರವಾಗಿಟ್ಟುಕೊಂಡು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಡಿದ್ದಾರೆ. [ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]

ಜರ್ಬೆರಾ ವರ್ಷಪೂರ್ತಿ ಹೂಗಳನ್ನು ಬಿಡುತ್ತದೆ. ಆದರೆ, ಮದುವೆ ಸೀಸನ್‌ನಲ್ಲಿ ಇವುಗಳ ಮಾರಾಟ ಜೋರು. ಪ್ರತಿ ಹೂಗೆ 8 ರಿಂದ 10 ರೂ.ದಂತೆ ಮಾರಾಟವಾಗುತ್ತದೆ, 15 ರೂ.ಗಳಿಗೂ ಮಾರಾಟವಾಗುವುದುಂಟು. ಆರಂಭದಲ್ಲಿ ಹೈದರಾಬಾದ್‌ನಲ್ಲಿ ಹೂಗಳನ್ನು ಮಾರಾಟ ಮಾಡಿದ್ದರು. ಈಗ ಸ್ಥಳೀಯವಾಗಿಯೂ ಮಾರಾಟ ಮಾಡಲಾಗುತ್ತಿದೆ. ಇದಕ್ಕಾಗಿಯೇ ಪ್ಯಾಕಿಂಗ್ ಘಟಕವನ್ನು ಸಹ ಸ್ಥಾಪಿಸಲಾಗಿದೆ. [ಬಯಲುಸೀಮೆ ಗೌರಿಬಿದನೂರಲ್ಲಿ ಹಸಿರು ಕ್ರಾಂತಿ]

ಜರ್ಬೆರಾ ಕೃಷಿಯಲ್ಲಿ ಸೈಯ್ಯದ್ ಅವರಿಗೆ ಸಹೋದರ ಸಿರಾಜುದ್ದಿನ್ ಅವರು ಸಹಾಯ ಮಾಡುತ್ತಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿ ಬಾಳೆಯ ಬೆಳೆಯನ್ನು ಸಹ ಬೆಳೆಯಲಾಗಿದೆ. ಕೃಷಿಭಾಗ್ಯ ಯೋಜನೆಯಡಿ ಒಂದು ಎಕರೆವರೆಗೆ ನೈಸರ್ಗಿಕ ನೆರಳು ಪರದೆ (ಪಾಲಿ ಹೌಸ್) ಘಟಕ ಸ್ಥಾಪಿಸಿಕೊಳ್ಳಲು ಅವಕಾಶವಿದೆ. ಇದಕ್ಕಾಗಿ ಸಹಾಯಧನವನ್ನು ನೀಡಲಾಗುತ್ತದೆ.

ಹರ್ಯಾಣ ರಾಜ್ಯದಲ್ಲಿ ಜರ್ಬೆರಾ ಹೂವಿನ ಬೇಸಾಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದನ್ನು ಕಲಬುರಗಿಯಲ್ಲೂ ಮಾಡಬಹುದೇ ಎಂದು ಕೃಷಿ ಆರಂಭಿಸಿದ ಸೈಯ್ಯದ್ ಇಂದು ಯಶಸ್ವಿಯಾಗಿದ್ದಾರೆ. ಜರ್ಬೆರಾ ನಾಟಿ ಮಾಡಿ 90 ರಿಂದ 100 ದಿನಗಳ ಬಳಿಕ ಕಟಾವು ಪ್ರಾರಂಭವಾಗಲಿದ್ದು, ಸುಮಾರು 3 ವರ್ಷಗಳವರೆಗೆ ಲಾಭ ಪಡೆಯಬಹುದು. [ಚಿತ್ರ, ಮಾಹಿತಿ : ಕಲಬುರಗಿ ವಾರ್ತೆ]

English summary
Syed Riyazuddin Bhutto success story of growing Gerbera flower on his land at Kalaburagi district Karnataka. Syed earning more than 50 thousand per-month by the Gerbera farming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X