ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಕಾವತಿ ತನಿಖೆ, ಆಯೋಗದ ಅವಧಿ ವಿಸ್ತರಣೆ

|
Google Oneindia Kannada News

ಬೆಂಗಳೂರು, ಮಾ.2 : ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿರುವ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್‌ ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎಚ್‌.ಎಸ್‌. ಕೆಂಪಣ್ಣ ಆಯೋಗದ ಅವಧಿಯನ್ನು 6 ತಿಂಗಳ ಕಾಲ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಎಚ್‌.ಎಸ್‌. ಕೆಂಪಣ್ಣ ಆಯೋಗ ಮಾಡಿದ ಮನವಿಯ ಅನ್ವಯ, ಮಾ.1 ರಿಂದ ಅನ್ವಯವಾಗುವಂತೆ ಮುಂದಿನ ಆರು ತಿಂಗಳಿಗೆ, ಆಯೋಗದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆಯೋಗದ ಅವಧಿ ಫೆ.28ಕ್ಕೆ ಕೊನೆಗೊಂಡಿತ್ತು. [ಅರ್ಕಾವತಿ ಬಡಾವಣೆ ವಿವಾದ ಏಕೆ? ಏನು?]

Arkavathi Layout

ಅರ್ಕಾವತಿ ಡಿನೋಟಿಫಿಕೇಷನ್‌ ಆರೋಪ ಕೇಳಿ ಬಂದ ನಂತರ ಸರ್ಕಾರ ಪ್ರಕರಣದ ತನಿಖೆಗೆ 2014ರ ಆಗಸ್ಟ್‌ನಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌. ಕೆಂಪಣ್ಣ ನೇತೃತ್ವದ ತನಿಖಾ ಆಯೋಗ ನೇಮಕ ಮಾಡಲಾಗಿತ್ತು. [ಅರ್ಕಾವತಿ ಹಗರಣದ ಬಗ್ಗೆ ಎಚ್ಡಿಕೆ ಪುಸ್ತಕ]

ಆರು ತಿಂಗಳಿನಲ್ಲಿ ಆಯೋಗ ಕೇವಲ ದೂರಗಳನ್ನು ಮಾತ್ರ ಸ್ವೀಕರಿಸಿದೆ. ಅಧಿಕೃತವಾದ ತನಿಖೆ ಆರಂಭಗೊಂಡಿಲ್ಲ. ಆದ್ದರಿಂದ ಆಯೋಗದ ಅವಧಿಯನ್ನು ವಿಸ್ತರಣೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಇದರ ಅನ್ವಯ ಸರ್ಕಾರ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಇಂದು ಬಿಜೆಪಿ ದೂರು : ಬಿಜೆಪಿ ಮತ್ತೊಮ್ಮೆ ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಹೋರಾಟ ಆರಂಭಿಸಿದ್ದು, ಸೋಮವಾರ ಬಿಜೆಪಿ ಬೆಂಬಲಿತ ವಕೀಲರಾದ ಎಸ್‌.ನಟರಾಜ್‌ ಶರ್ಮ ಮತ್ತು ದೊರೆರಾಜು ಅವರು ನ್ಯಾಯಮೂರ್ತಿ ಕೆಂಪಣ್ಣ ಆಯೋಗಕ್ಕೆ ದೂರು ನೀಡಲಿದ್ದಾರೆ.

ಬೆಂಗಳೂರಿನ ಕಾವೇರಿ ಭವನದ 6ನೇ ಮಹಡಿಯಲ್ಲಿರುವ ಕೆಂಪಣ್ಣ ಆಯೋಗದ ಕಚೇರಿಗೆ ತೆರಳಿ ದೂರು ಸಲ್ಲಿಸಲಿದ್ದು, ಇದರ ಜೊತೆಗೆ ಸುಮಾರು 800 ಪುಟಗಳ ದಾಖಲೆಗಳನ್ನು ಸಲ್ಲಿಸಲಿದ್ದಾರೆ.

English summary
Karnataka government extended Justice H.S. Kempanna Commission panel term for 6 months. Panel probing the alleged corruption and illegalities in Arkavathi Layout, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X