ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಲೋಕಾಯುಕ್ತರಿಗೆ ಮತ್ತೆ 45 ದಿನ ರಜೆ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 21 : ಕರ್ನಾಟಕ ಲೋಕಾಯುಕ್ತರಿಗೆ ಮತ್ತೊಮ್ಮೆ ರಜೆ ವಿಸ್ತರಣೆ ಭಾಗ್ಯ ಸಿಕ್ಕಿದೆ. ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರು ಅಕ್ಟೋಬರ್ 22ರಿಂದ 45 ದಿನಗಳ ಕಾಲ ರಜೆಯನ್ನು ವಿಸ್ತರಣೆ ಮಾಡಿದ್ದಾರೆ. ಲೋಕಾಯುಕ್ತ ಕಚೇರಿಯಲ್ಲಿ 350ಕ್ಕೂ ಅಧಿಕ ಕಡತಗಳು ಅವರಿಗಾಗಿ ಕಾದು ಕುಳಿತಿವೆ.

ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪುತ್ರ ಅಶ್ವಿನ್ ರಾವ್ ಬಂಧನವಾದ ಬಳಿಕ ಭಾಸ್ಕರರಾವ್ ಸರಣಿ ರಜೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹಿಂದೆ ರಜೆಯನ್ನು ಅವರು ಅಕ್ಟೋಬರ್ 21ರ ತನಕ ವಿಸ್ತರಣೆ ಮಾಡಿದ್ದರು. ಅದು ಮುಕ್ತಾಯಗೊಂಡ ಹಿನ್ನಲೆಯಲ್ಲಿ ಅಕ್ಟೋಬರ್ 22ರ ಗುರುವಾರದಿಂದ 45 ದಿನಗಳ ತನಕ ರಜೆಯನ್ನು ಅವರು ವಿಸ್ತರಿಸಿದ್ದಾರೆ. [3ನೇ ಬಾರಿ ರಜೆ ವಿಸ್ತರಣೆ ಮಾಡಿದ ಭಾಸ್ಕರರಾವ್]

lokayukta

4ನೇ ಬಾರಿ ರಜೆ ವಿಸ್ತರಣೆ : ಮೊದಲು ಭಾಸ್ಕರರಾವ್ ಅವರು ಜುಲೈ 17ರಿಂದ ಆಗಸ್ಟ್ 17ರ ತನಕ ರಜೆ ಹಾಕಿದ್ದರು. ನಂತರ ಅದನ್ನು ಸೆಪ್ಟೆಂಬರ್ 30ರ ತನಕ ವಿಸ್ತರಣೆ ಮಾಡಿದ್ದರು. ಪುನಃ ಅದನ್ನು ಅಕ್ಟೋಬರ್ 21ರ ತನಕ ವಿಸ್ತರಿಸಿದರು. ಸದ್ಯ, ಪುನಃ 45 ದಿನಗಳ ಕಾಲ ರಜೆ ವಿಸ್ತರಣೆಯಾಗಿದೆ. [ಲೋಕಾಯುಕ್ತರನ್ನು ಬಂಧಿಸಿ, ವಿಚಾರಿಸಲು ಸಕಾಲ]

ಲೋಕಾಯುಕ್ತರು ಸರಣಿ ರಜೆಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರು ಕೆಲಸಗಳನ್ನು ಯಾರಿಗೂ ಹಸ್ತಾಂತರ ಮಾಡಿಲ್ಲ. ಆದ್ದರಿಂದ, ಲೋಕಾಯುಕ್ತ ಕಚೇರಿಯಲ್ಲಿ 350ಕ್ಕೂ ಅಧಿಕ ಕಡತಗಳು ಅವರ ಒಪ್ಪಿಗೆಗಾಗಿ ಕಾದು ಕುಳಿತಿವೆ. ಅತ್ತ ಭ್ರಷ್ಟಾಷಾರ ಪ್ರಕರಣದಲ್ಲಿ ಅವರನ್ನು ಪ್ರಶ್ನೆ ಮಾಡಲು ಎಸ್‌ಐಟಿ ಕಾಯುತ್ತಿದೆ.

ರಜೆಯನ್ನು ವಿಸ್ತರಣೆ ಮಾಡುವ ಬಗ್ಗೆ ಲೋಕಾಯುಕ್ತದ ರಿಜಿಸ್ಟ್ರಾರ್ ಅವರಿಗೆ ನ್ಯಾ.ಭಾಸ್ಕರರಾವ್ ಪತ್ರ ಬರೆದಿದ್ದಾರೆ. ರಿಜಿಸ್ಟ್ರಾರ್ ಅವರು ಈ ಕುರಿತು ರಾಜ್ಯಪಾಲರ ಕಚೇರಿಗೆ ಮಾಹಿತಿ ರವಾನಿಸಿದ್ದಾರೆ. ಭಾಸ್ಕರರಾವ್ ಅವರು ಒಟ್ಟು 145 ದಿನಗಳ ವೇತನ ಸಹಿತ ರಜೆಯನ್ನು ಪಡೆದಿದ್ದಾರೆ.

English summary
The Karnataka Lokayukta Justice Y.Bhaskar Rao has done it again. This time he has extended his leave by another 45 days. His 45 day leave will begin from October 22 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X