ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಷಾರ್... ಬೆಂಗಳೂರು, ಕೊಲ್ಕತ್ತಾ ಉಗ್ರರ ತಾಣ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆ. 13: ಕನ್ನಡಿಗರು ಬೆಚ್ಚಿಬೀಳುವ ಸುದ್ದಿ ಬಂದಿದೆ. ಏನೇ ಗೊತ್ತೇ? ಲೋಕ ಕಂಟಕವಾಗುತ್ತಿರುವ ಐಎಸ್ಐಎಸ್ ಪರವಾಗಿ ಉಗ್ರರ ನೇಮಿಸುವ ಜನ ಬೆಂಗಳೂರು ಹಾಗೂ ಕೊಲ್ಕತ್ತಾದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಷ್ಟೇ ಅಲ್ಲ, ಇವರೆಲ್ಲ ಈಗ ಇಂಟರ್ನೆಟ್‌ನಿಂದ ದೂರವುಳಿದು ಹಳೇ ಶೈಲಿಯಂತೆ ಮಾತಿನ ಮೂಲಕವೇ ಯುವಕರನ್ನು ಸೆಳೆಯುತ್ತಿದ್ದಾರೆ.

ಸುಮಾರು 40 ಉಗ್ರರು ದೇಶಾದ್ಯಂತ ಹರಡಿದ್ದಾರೆ. ಅವರ ಉದ್ದೇಶ ಐಎಸ್ಐಎಸ್ ಪರ ಅಫ್ಘಾನಿಸ್ತಾನ ಘಟಕವಾದ ಅಲ್-ಖೋರಾಸನ್ ಸಂಘಟನೆಗೆ ಉಗ್ರರನ್ನು ಪೂರೈಸುವುದು. ಹೆಚ್ಚಿನವರು ಹರಡಿರುವುದು ಬೆಂಗಳೂರು ಹಾಗೂ ಕೊಲ್ಕತ್ತಾದಲ್ಲಿ. [ಗಡೀಪಾರಾಗಿದ್ದವರ ಬಿಡುಗಡೆ]

ಬೆಂಗಳೂರು ಯಾವಾಗ ಐಟಿ ಹಬ್ ಆಯಿತೋ, ವಿದ್ಯಾವಂತ ಯುವಕರಿಗೆ ಬೇಡಿಕೆ ಬಂದಿತೋ ಅಂದೇ ಉಗ್ರರ ನೇಮಕಾತಿ ಮಾಡುವವರು ಇಲ್ಲಿಗೆ ಬಂದರು. ಬಾಂಗ್ಲಾದೇಶದಿಂದ ಬಂದವರು ಐಎಸ್ಐಎಸ್ ಪರ ಉಗ್ರರನ್ನು ನೇಮಿಸಲು ಕೊಲ್ಕತ್ತಾವನ್ನು ಆಯ್ದುಕೊಂಡರು.

isis

ಇಂಟೆಲಿಜೆನ್ಸ್ ಬ್ಯೂರೊ ಪ್ರಕಾರ ಬೆಂಗಳೂರು ಹಾಗೂ ಕೊಲ್ಕೊತಾಗಳಲ್ಲಿ ಕನಿಷ್ಠ 25 ಉಗ್ರರು ಅಡಗಿದ್ದಾರೆ. ಉಳಿದವರು ಮುಂಬೈ ಹಾಗೂ ಹೈದರಾಬಾದ್‌ನಲ್ಲಿದ್ದಾರೆ. ಇವರೆಲ್ಲ ಯುವಕರನ್ನು ಮಾತಿನ ಮೂಲಕವೇ ಮರುಳು ಮಾಡಿ ಐಎಸ್ಐಎಸ್ ತತ್ವ-ಸಿದ್ಧಾಂತ ತುಂಬುತ್ತಿದ್ದಾರೆ. [ಒಬಾಮ ರುಂಡ ಚೆಂಡಾಡ್ತೇವೆ]

ಆದರೆ, ಐಎಸ್ಐಎಸ್ ಪರ ಉಗ್ರರಿಗೆ ನಿರೀಕ್ಷಿಸಿದಷ್ಟು ಯಶಸ್ಸು ಸಿಕ್ಕಿಲ್ಲ. ದೇಶದಲ್ಲಿ ಉಂಟಾದ ಜಾಗೃತಿಯಿಂದ ಅವರ ಪ್ರಯತ್ನಗಳು ಕುಂಠಿತಗೊಂಡಿತು. ಉಗ್ರರು ಅಲ್-ಖೋರಾಸನ್ ಪರ ಕೆಲಸ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದ ಈ ಸಂಘಟನೆ ಕುರಿತು ಹೆಚ್ಚಿನವರಿಗೆ ತಿಳಿದಿಲ್ಲ. ಆದ್ದರಿಂದ ಅವರ ಪ್ರಯತ್ನ ಕುಂಠಿತಗೊಂಡಿದೆ.

ಭಾರತೀಯ ಗುಪ್ತದಳ ನಡೆಸಿದ ಆಪರೇಶನ್ ಚಕ್ರವ್ಯೂಹ ಭಾರೀ ಯಶಸ್ಸು ಗಳಿಸಿದೆ. ಅವರು ಸುಳ್ಳು ಖಾತೆಗಳನ್ನು ತೆರೆದು ಶಂಕಿತರ ಮೇಲೆ ನಿರಂತರ ಕಣ್ಣಿಟ್ಟರು. [ಉಗ್ರರ ಬಂಧಿಸಲು ಚಕ್ರವ್ಯೂಹ]

ಯಾಸೀನ್ ಭಟ್ಕಳ್ ಬಂಧನದ ನಂತರ ಇಂಡಿಯನ್ ಮುಜಾಹಿದೀನ್ ಸಂಘಟನೆ ಶಕ್ತಿಗುಂದುತ್ತಿದೆ. ಐಎಂ ಕೂಡ ಐಎಸ್ಐಎಸ್‌ಗೆ ಉಗ್ರರನ್ನು ನೇಮಿಸಲು ಗಮನ ಕೇಂದ್ರೀಕರಿಸುತ್ತಿದೆ. ಅನ್ಸರ್-ಯು-ತವಹಿದ್ ಸಂಘಟನೆಯ ಮುಖ್ಯಸ್ಥ ಸುಲ್ತಾನ್ ಅಹ್ಮದ್ ಅರ್ಮರ್ ಮೂಲಕ ಈಗ ಹೆಚ್ಚು ನೈಮಕಾತಿ ನಡೆಯುತ್ತಿದೆ.

ಅಫ್ಘಾನಿಸ್ತಾನದಲ್ಲಿ ಯುದ್ಧ ನಡೆಯುತ್ತಿದ್ದಾಗ ಸಾಕಷ್ಟು ಸಂಖ್ಯೆಯಲ್ಲಿ ಉಗ್ರರನ್ನು ಐಎಂ ನೇಮಿಸಿತ್ತು. ಎರಡು ವರ್ಷಗಳ ಹಿಂದೆ ಅಹ್ಮದ್ ಭಟ್ಕಳ್ ಎಂಬುವನನ್ನು ಅರ್ಮರ್ ಅಫ್ಘಾನಿಸ್ತಾನಕ್ಕೆ ಕಳುಹಿಸಿದ್ದಾನೆ. ಆದರೆ, ಭಟ್ಕಳ್ ಅಲ್ಲಿ ನಡೆದ ಯುದ್ಧದಲ್ಲಿ ಮೃತಪಟ್ಟ. ಈ ಎಲ್ಲ ಕಾರಣಗಳಿಂದ ಐಎಂ ಈಗ ಬಲ ಕಳೆದುಕೊಳ್ಳುತ್ತಿದೆ. [ನೇಮಕಾತಿಯ ಕೊಂಡಿ ಭಟ್ಕಳದ ಸುಲ್ತಾನ್]

ಪ್ರಸ್ತುತ ಹಲವು ರಾಜ್ಯಗಳಲ್ಲಿ ಬಂಧನಕ್ಕೊಳಗಾಗಿರುವ ಐಎಸ್ಐಎಸ್ ಪರ ಕಾರ್ಯಕರ್ತರ ಮೇಲೆ ಇನ್ನಷ್ಟು ಕಠಿಣ ಪ್ರಕರಣಗಳನ್ನು ದಾಖಲಿಸಬೇಕಾಗಿದೆ. ರಾ ಮಾಜಿ ಮುಖ್ಯಸ್ಥ ಸಿ.ಡಿ. ಸಹಾಯ್ ಪ್ರಕಾರ ಉಗ್ರರಿಗೆ ಶಿಕ್ಷೆ ವಿಧಿಸಿದರೆ ಉಳಿದವರು ಪಾಠ ಕಲಿಯುತ್ತಾರೆ.

ಕಳೆದ ವರ್ಷ ತಮಿಳುನಾಡಿನಲ್ಲಿ ಬಾಲಕರ ಗುಂಪೊಂದು ಐಎಸ್ಐಎಸ್ ಟಿ ಶರ್ಟ್ ಧರಿಸಿತ್ತು. ಕಾಶ್ಮೀರದಲ್ಲಿ ಐಎಸ್ಐಎಸ್ ಧ್ವಜ ಹಾರಿತ್ತು. ಇಂತಹ ಘಟನೆಗಳನ್ನು ತಡೆಗಟ್ಟಲು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ.

English summary
The highest number of Jihad shoppers or head hunters for the ISIS are in Bengaluru and Kolkata. These head hunters are currently staying away from the internet and using the word of mouth tactic in a bid to spruce up the recruitment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X