ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಲ್ಡ್ ಫಿಂಚ್ ಹೋಟೆಲಲ್ಲಿ ಗೌಡರಿಗೆ ಪಂಚ್ ಕೊಟ್ಟ ಸ್ವಾಮಿ!

|
Google Oneindia Kannada News

ಬೆಂಗಳೂರು, ಜೂನ್ 13 : 'ಭಾನುವಾರ ನಮ್ಮನ್ನು ಅಮಾನತು ಮಾಡಿ ಪಕ್ಷ ಕಟ್ಟಲು ದೇವೇಗೌಡರು ಸಭೆ ಕರೆದಿರಲಿಲ್ಲ. ಪಕ್ಷವನ್ನು ಹಾಳು ಮಾಡಲು ಸಭೆ ಕರೆದಿದ್ದರು' ಎಂದು ಅಮಾನತುಗೊಂಡಿರುವ ಜೆಡಿಎಸ್ ಶಾಸಕ ಎನ್.ಚೆಲುವರಾಯ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ['ಕುಮಾರಸ್ವಾಮಿ ಅವರಿಗೆ ನಿಜವಾದ ಶನಿ ರೇವಣ್ಣ']

ಸೋಮವಾರ ಅಮಾನತುಗೊಂಡ ಶಾಸಕರ ಜೊತೆ ನಾಗಮಂಗಲ ಕ್ಷೇತ್ರದ ಶಾಸಕ ಚೆಲುವರಾಯಸ್ವಾಮಿ ಅವರು ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. 'ನಮ್ಮ ಇಂದಿನ ಬೆಳವಣಿಗೆಗೆ ದೇವೇಗೌಡರು, ಜೆಡಿಎಸ್ ಪಕ್ಷ ಮತ್ತು ಅದರ ಸಾವಿರಾರು ಕಾರ್ಯಕರ್ತರು ಕಾರಣ' ಎಂದು ಒಪ್ಪಿಕೊಂಡರು. [8 ಶಾಸಕರ ಅಮಾನತು ಮುಂದೇನು?]

cheluvarayaswamy

'ಕಾರ್ಯಕರ್ತರನ್ನು ನಮ್ಮ ವಿರುದ್ಧ ಮಾತನಾಡುವಂತೆ ಪ್ರಚೋದನೆ ನೀಡಲಾಗಿದೆ. ನಮ್ಮ ವಿರುದ್ಧ ವಾಟ್ಸಪ್ ಮೂಲಕ ಅಶ್ಲೀಲವಾಗಿ ಪ್ರಚೋದನೆ ಮಾಡಲಾಗುತ್ತಿದೆ. ನಾವು ಪಕ್ಷದಿಂದ ಅಮಾನತುಗೊಂಡಿದ್ದೇವೆ. ಆದರೆ, ಪಕ್ಷವನ್ನು ಬಿಟ್ಟಿಲ್ಲ' ಎಂದು ಸ್ಪಷ್ಟಪಡಿಸಿದರು. [ಶಾಸಕರ ಅಮಾನತು : ಬಿಬಿಎಂಪಿ ಮೈತ್ರಿಗೆ ಧಕ್ಕೆ]

ಚೆಲುವರಾಯಸ್ವಾಮಿ ಅವರು ಹೇಳಿದ್ದಿಷ್ಟು [ಜೆಡಿಎಸ್ ಭಿನ್ನಮತ ಅಂತಿಮ ಘಟ್ಟಕ್ಕೆ]

* 'ನಮ್ಮ ಬಳಿಯೂ ಕಾರ್ಯಕರ್ತರಿದ್ದಾರೆ. ನಮಗೂ ತಿಥಿ ಕಾರ್ಡ್ ಹಂಚಲು ಬರುತ್ತದೆ, ಪ್ರತಿಮೆ ಮಾಡಿ ಚಪ್ಪಲಿಯಲ್ಲಿ ಹೊಡೆಯಲು ಬರುತ್ತೆ. ಆದರೆ, ನಾವು ಹಾಗೆ ಮಾಡಲ್ಲ. ಪಕ್ಷದ ನಾಯಕರ ಬಗ್ಗೆ ಗೌರವವಿದೆ. ನಮ್ಮ ಕಾರ್ಯಕರ್ತರಿಗೆ ಹಾಗೆ ಮಾಡದಂತೆ ಮನವಿ ಮಾಡುತ್ತೇನೆ'. [8 ಭಿನ್ನಮತೀಯ ಶಾಸಕರಿಗೆ ಅಮಾನತು ಶಿಕ್ಷೆ]

* 'ದೇಶಾದ್ಯಂತ ಪ್ರಾದೇಶಿಕ ಪಕ್ಷ ಯಶಸ್ವಿಯಾಗುತ್ತಿದೆ. ಮಮತಾ ಬ್ಯಾನರ್ಜಿ, ತಮಿಳುನಾಡಿನಲ್ಲಿ ಜಯಲಲಿತಾ ಕೈ ತೋರಿಸಿದವರು ಎಂಎಲ್‌ಎ ಆಗುತ್ತಾರೆ. ನಮ್ಮ ರಾಜ್ಯದಲ್ಲಿ ಏನಾಗಿದೆ?, ಪಕ್ಷದ ನಾಯಕರೇ ತಿಳಿದುಕೊಳ್ಳಲಿ'.

* '2006ರಲ್ಲಿ ಬಿಜೆಪಿ ಜೊತೆ ಕೈ ಜೋಡಿಸಬೇಡಿ ಎಂದು ದೇವೇಗೌಡರು ಕಣ್ಣೀರು ಹಾಕಿದ್ದರು. ಆದರೆ, ಕುಮಾರಸ್ವಾಮಿ ಅವರ ಮೇಲೆ ನಂಬಿಕೆ ಇಟ್ಟು ನಾವು ಬೆಂಬಲ ಕೊಟ್ಟೆವು. ರಾಷ್ಟ್ರಮಟ್ಟದಲ್ಲಿ ರಾಜಕೀಯ ಮಾಡಿದ ನನಗೆ ಅವಮಾನ ಮಾಡುತ್ತಿದ್ದೀರಿ ಎಂದರು. ಕೋಮುವಾದಿಗಳ ಜೊತೆ ಕೈ ಜೋಡಿಸಬೇಡಿ' ಎಂದರು.

* 'ಆಗ ನಾವು ಕುಮಾರಸ್ವಾಮಿ ಅವರಿಗೆ ಬೆಂಬಲ ಕೊಟ್ಟೆವು. ಅದು ಪಕ್ಷ ವಿರೋಧಿ ಚಟುವಟಿಕೆಯಲ್ಲವೇ?. ಆಗ ಏಕೆ ಕುಮಾರಸ್ವಾಮಿ ಮತ್ತು ನಮ್ಮ ವಿರುದ್ಧ ದೇವೇಗೌಡರು ಕ್ರಮ ಕೈಗೊಳ್ಳಲಿಲ್ಲ?. ಏಕೆ ನಮ್ಮೆಲ್ಲರನ್ನು ಅಮಾನತು ಮಾಡಲಿಲ್ಲ?'

* 'ನಾವು ಎಂದೂ ಪಕ್ಷದ ನಾಯಕರ ಬಗ್ಗೆ ಲಘುವಾಗಿ ಮಾತನಾಡಿಲ್ಲ. ಆದರೆ, ಅವರು ಅದನ್ನು ಮಾಡುತ್ತಿದ್ದಾರೆ. ಕಾರ್ಯಕರ್ತರಿಗೆ ಪ್ರಚೋದನೆ ಮಾಡುತ್ತಿದ್ದಾರೆ. ಅವರಿಗೆ ಪ್ರತಿ ತಾಲೂಕಿನಲ್ಲಿ 100 ಜನ ಕಾರ್ಯಕರ್ತರಿದ್ದರೆ ನಮಗೆ ಇಬ್ಬರು ಇದ್ದಾರೆ. ಆದರೆ, ನಮಗೆ ನಾಯಕರ ಬಗ್ಗೆ ಅಪಾರವಾದ ಗೌರವವಿದೆ. ನಾವು ಆ ರೀತಿ ಮಾತನಾಡುವುದಿಲ್ಲ.

* 'ಬಿಬಿಎಂಪಿ ಚುನಾವಣೆ ಮೈತ್ರಿ ವಿಚಾರದಲ್ಲಿ ಅವರ ನಡುವೆಯೇ ಭಿನ್ನಮತವಿತ್ತು. ಕುಮಾರಸ್ವಾಮಿ ಅವರು ಒಂದು ಹೆಜ್ಜೆ ಮುಂದಿಟ್ಟರು. ಜಮೀರ್ ಅಹಮದ್ ಅವರನ್ನು ಕೇಳಿದರು. ಗೋ ಅಹೆಡ್ ಎಂದರು. ಆದರೆ, ಕುಮಾರಸ್ವಾಮಿ ಬಿಜೆಪಿ ಪರವಾಗಿದ್ದರು. ದೇವೇಗೌಡರು ಕಾಂಗ್ರೆಸ್ ಪರವಾಗಿದ್ದರು'.

* 'ಕೆ.ಸಿ.ರಾಮೂರ್ತಿಗೆ ಅವರಿಗೆ ನಮ್ಮ ಪಕ್ಷವೇ ಟಿಕೆಟ್ ಕೊಡಬಹುದಿತ್ತು. ಶರವಣ ಅವರು ಎಷ್ಟು ದಿನ ಪಕ್ಷ ಕಟ್ಟಿದ್ದಾರೆ?. ಕೆ.ವಿ.ನಾರಾಯಣ ಸ್ವಾಮಿ ಅವರು ಪಕ್ಷಕ್ಕೆ ಏನು ಮಾಡಿದ್ದಾರೆ?. ಪಿ.ಜಿ.ಆರ್.ಸಿಂಧ್ಯಾ, ನಾಣಯ್ಯ ಅವರನ್ನು ಎಂಎಲ್‌ಸಿ ಮಾಡಿ ಇಟ್ಟುಕೊಂಡಿದ್ದರೆ ಪಕ್ಷಕ್ಕೆ ಲಾಭವಾಗುತ್ತಿರಲಿಲ್ಲವೇ?'

* 'ಇವರು ಪಕ್ಷನಿಷ್ಠೆಯಿಂದ ದುಡಿದವರಿಗೆ ಎಂದೂ ಅಧಿಕಾರ ಕೊಟ್ಟಿಲ್ಲ. ನಿಗಮ-ಮಂಡಳಿಗಳ ಅಧ್ಯಕ್ಷರಾಗಿ ಮಾಡಿಲ್ಲ. ಪಕ್ಷಕ್ಕಾಗಿ ದುಡಿದವರಿಗೆ ಎಂದೂ ಅಧಿಕಾರ ನೀಡಿಲ್ಲ. ಹಾಗೆ ನೀಡಿದ್ದೆ ಎಂದು ಸಾಬೀತು ಮಾಡಿದರೆ ಇಂದೇ ರಾಜಕೀಯ ನಿವೃತ್ತಿ ಘೋಷಿಸುತ್ತೇವೆ'.

* 'ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರದಲ್ಲಿ ಲೋಕಸಭೆ ಚುನಾವಣೆಗೆ ನಿಲ್ಲಲು ಪಕ್ಷದ ಯಾವ ಶಾಸಕರ ಅಭಿಪ್ರಾಯ ಕೇಳಿದ್ದೀರಿ?. ಫಲಿತಾಂಶ ಬಂದಾಗ ಅವರು ಮೂರನೇ ಸ್ಥಾನಕ್ಕೆ ಹೋದ್ರು. ಇದರಿಂದ ಪಕ್ಷಕ್ಕೆ ಎಷ್ಟು ನಷ್ಟವಾಗಿದೆ?'

* 'ಒಕ್ಕಲಿಗರು ಪಕ್ಷದ ಶಕ್ತಿ ಎಂದು ಹೇಳುತ್ತೀರಿ. ಒಕ್ಕಲಿಗ ನಾಯಕರಲ್ಲಿ ಎಷ್ಟು ಜನರನ್ನು ಎಂಎಲ್‌ಸಿ ಮಾಡಿದ್ದೀರಿ?, ಎಷ್ಟು ಜನರನ್ನು ನಿಗಮ-ಮಂಡಳಿಗೆ ನೇಮಕ ಮಾಡಿದ್ದೀರಿ?. ಮಕ್ಕಳು ಏನೇ ತಪ್ಪು ಮಾಡಿದರೂ ಕ್ಷಮಿಸುವ ನೀವು ನಮ್ಮನ್ನು ಏಕೆ ಕ್ಷಮಿಸುವುದಿಲ್ಲ'.

* 'ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಮಾತುಕತೆ ನಡೆಯಿತು. ಕುಮಾರಸ್ವಾಮಿ ಅವರು ಅದರ ಪರವಾಗಿರಲಿಲ್ಲ. ಆಗ ಜಮೀರ್ ದೇವೇಗೌಡರ ಬಳಿ ಹೋದ್ರು. ಆಗ ಅವರು ಛೋಡ್‌ ದೋ ಅಂದರು. ಮೈತ್ರಿ ಮುರಿದು ಬಿದ್ದ ಬಳಿಕ ನಮ್ಮನ್ನು ಕಾಂಗ್ರೆಸ್ ಏಜೆಂಟ್ ಅಂದರು, ನಾವು ಅದಕ್ಕೆ ಪ್ರತ್ಯುತ್ತರ ಕೊಟ್ಟೆವು'.

* 'ಪಕ್ಷದಲ್ಲಿನ ಗೊಂದಲ ಬಗೆಹರಿಸಲು ಕೋರ್ ಕಮಿಟಿ ರಚನೆ ಮಾಡಲಾಯಿತು. ಆದರೆ, ಒಂದು ದಿನವೂ ಕೋರ್ ಕಮಿಟಿ ಸಭೆ ನಡೆಸಲಿಲ್ಲ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇದುವರೆಗೂ ನಾವು ಹಲವು ಬಾರಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೆ, ಅದನ್ನು ಪರಿಗಣಿಸಲಿಲ್ಲ'.

English summary
Karnataka JDS suspended its eight rebel MLA's who voted for Congress candidate in Rajya Sabha election held on June 11, 2016. Suspended MLA's addressed press conference on Monday, Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X