ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಮಾರುಕಟ್ಟೆಯಲ್ಲಿ ಕುಸಿದ ಶಂಕರಪುರ ಮಲ್ಲಿಗೆ ದರ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್ 07 : ಉಡುಪಿ ಮಾರುಕಟ್ಟೆಯಲ್ಲಿ ಶಂಕರಪುರ ಮಲ್ಲಿಗೆ ದರ ಎರಡು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದ್ದು ವ್ಯಾಪಾರಿಗಳು ಆತಂಕಗೊಂಡಿದ್ದಾರೆ. ಸೋಮವಾರ ಅಟ್ಟೆಗೆ 70 ರೂ. ದರವಿದ್ದು ಮೂರು ಅಥವ ನಾಲ್ಕು ದಿನಗಳ ಕಾಲ ಇದೇ ದರ ಮುಂದುವರಿಯಬಹುದು ಎನ್ನುತ್ತಾರೆ ವ್ಯಾಪಾರಿಗಳು.

ಈ ಬಾರಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿ ಬಿದ್ದ ಮಳೆಯಿಂದಾಗಿ ಮಲ್ಲಿಗೆ ಬೆಳೆ ಮಾಮೂಲಿಗಿಂತ ಹೆಚ್ಚಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ಹೆಚ್ಚಿನ ಹೂವು ಆಗಮಿಸಿದ್ದು ದರ ಕುಸಿದಿದೆ. ಸೋಮವಾರ ಶಂಕರಪುರ ಮಲ್ಲಿಗೆ ಅಟ್ಟೆಗೆ 70 ರೂ. ಇದ್ದರೆ, ಭಟ್ಕಳ ಮಲ್ಲಿಗೆ ದರ 55 ರೂ. ಇತ್ತು. [ಪುಷ್ಪಲೋಕದ ವಿಸ್ಮಯ ಬ್ರಹ್ಮಕಮಲ]

jasmine

ಒಂದು ಅಟ್ಟೆ (3200 ಮೊಗ್ಗು) ನಾಲ್ಕು ಚೆಂಡು ಮಲ್ಲಿಗೆ ದೊರೆಯುತ್ತಿದ್ದು, ಒಂದು ಚೆಂಡು ಮಲ್ಲಿಗೆ ದರವೀಗ 150ರಿಂದ 60 ರೂ.ಗೆ ಇಳಿದಿದೆ. ಊರಲ್ಲಿ ಬೇಡಿಕೆ ಕಡಿಮೆ ಇದೆ ಎಂದು ಬೆಂಗಳೂರು, ಮುಂಬೈ, ದುಬೈಗೆ ಕಳಿಸಲು ಸಾಧ್ಯವಿಲ್ಲ. ಇದಕ್ಕಾಗಿ ಅಗತ್ಯವಿರುವ ಶೀತಲೀಕರಣ ವ್ಯವಸ್ಥೆಯೂ ಇಲ್ಲ. [ಬಿಸಿಲ ನಾಡಲ್ಲಿ ಅರಳುತ್ತಿರುವ ಜರ್ಬೆರಾ ಹೂಗಳು!]

ಮಲ್ಲಿಗೆ ಬೆಳೆಗಾರರ ಪ್ರಕಾರ ಈ ಕನಿಷ್ಟ ದರ 3 ರಿಂದ 4 ದಿನ ಹಾಗೆ ಇರುತ್ತದೆ. ಇನ್ನೊಂದು ವಾರ ವಿಫುಲ ಹೂವು ದೊರೆಯಬಹುದು. ಬಳಿಕ ಹೂ ಪೂರೈಕೆ ಕಡಿಮೆಯಾಗಿ, ಬೇಡಿಕೆ ಸ್ವಲ್ಪ ಹೆಚ್ಚಿ ದರದಲ್ಲಿ ಏರಿಕೆಯಾಗುತ್ತದೆ. [ಮಂಗಳೂರಿನಲಿ ಚಂದಿರನ ತಂಪಿನಲ್ಲಿ ಅರಳಿದ ಬ್ರಹ್ಮಕಮಲ]

ಈ ವರ್ಷ ಫೆಬ್ರವರಿ, ಏಪ್ರಿಲ್, ಮೇ ತಿಂಗಳಲ್ಲಿ ಮಲ್ಲಿಗೆ ದರ ಅಟ್ಟೆಗೆ ಗರಿಷ್ಠ 820 ರೂ. ಗಳಾಗಿತ್ತು. ಪ್ರಸ್ತುತ ಮಳೆ ಮತ್ತು ಬಿಸಿಲ ಕಣ್ಣಾಮುಚ್ಚಾಲೆಯಾಟ ಮಲ್ಲಿಗೆ ಹೂ ಬೆಳೆಗೆ ಅನುಕೂಲಕರವಾಗಿದೆ. ಎರಡು ವರ್ಷಗಳ ಹಿಂದೆ ಮಲ್ಲಿಗೆ ದರ ಕನಿಷ್ಠ 90 ರೂ. ಗೆ ಇಳಿದಿತ್ತು.

ಸಾಮಾನ್ಯವಾಗಿ ಮಲ್ಲಿಗೆ ದರ 150 ರೂ. ಗಳಿಗಿಂತ ಹೆಚ್ಚಿರುತ್ತದೆ. ಆದರೆ, ಈ ಬಾರಿ ಒಮ್ಮೆಲೆ ಮಲ್ಲಿಗೆ ಹೂ ಬೆಲೆ ಮೂರ್ನಾಲ್ಕು ಪಟ್ಟು ಹೆಚ್ಚಿದ್ದರಿಂದ ಕೊಯ್ದು ಕಟ್ಟಲಾಗುತ್ತಿಲ್ಲ, ದರವೂ ಇಲ್ಲ, ಹೀಗಾಗಿ ಅರ್ಧದಷ್ಟು ಮಲ್ಲಿಗೆ ಗಿಡದಲ್ಲೇ ಹಾಳಾಗುತ್ತಿದೆ.

ವಿವಿಧ ಮಲ್ಲಿಗೆಗೆ ವಿವಿಧ ಹೆಸರು : ಕುಂದಾಪುರ ಪ್ರದೇಶದಲ್ಲಿ ಬೆಳೆಯುವ ಮಲ್ಲಿಗೆ ಹೂಗಳಿಗೆ ಭಟ್ಕಳ ಮಲ್ಲಿಗೆ ಎಂದು ಕರೆಯುತ್ತಾರೆ. ಶಂಕರಪುರ, ಶಿರ್ವ ಪ್ರದೇಶದಲ್ಲಿ ಬೆಳೆಯನ್ನು ಶಂಕರಪುರ ಮಲ್ಲಿಗೆ ಎಂದೂ, ಪುತ್ತೂರು, ಸುಳ್ಯ ಭಾಗದಲ್ಲಿ ಬೆಳೆಯುವ ಮಲ್ಲಿಗೆಯನ್ನು ಮಂಗಳೂರು ಮಲ್ಲಿಗೆ ಎಂದು ಕರೆಯುತ್ತಾರೆ.

English summary
Shankarapura Mallige (Jasmine) price has hit new low, in Udupi and Dakshina Kannada market, due to over growth of the flower with sweet smell. The growers are worried as they don't have cold storage to preserve the flower to be sent to Dubai, Mumbai, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X