ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್‌ಐಎಸ್ : ಐಒಸಿ ಮ್ಯಾನೇಜರ್‌ನಿಂದ ಯಾವ ಸುಳಿವು ಸಿಗಲಿದೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿಸೆಂಬರ್ 11 : ಐಎಸ್ಐಎಸ್ ಪರವಾಗಿ ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ಜೈಪುರದಲ್ಲಿ ಕಲಬುರಗಿ ಮೂಲದ ಮೊಹಮದ್ ಸಿರಾಜುದ್ದೀನ್ ಎಂಬುವವರನ್ನು ಬಂಧಿಸಲಾಗಿದೆ. ಭಾರತದಲ್ಲಿಯೂ ಐಎಸ್‌ಐಎಸ್ ಉಗ್ರ ಸಂಘಟನೆಗೆ ಬೆಂಬಲವಿದೆ ಎನ್ನುವುದಕ್ಕೆ ಇದೊಂದು ಚಿಕ್ಕ ಸುಳಿವು.

ಗುರುವಾರ ರಾತ್ರಿ ವಿಶೇಷ ಕಾರ್ಯಪಡೆ (ಎಸ್‌ಒಜಿ) ಮತ್ತು ರಾಜಸ್ಥಾನ ಭಯೋತ್ಪಾದಕ ನಿಗ್ರಹ ಪಡೆ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಸಿರಾಜುದ್ದೀನ್ ಅವರನ್ನು ಬಂಧಿಸಿದ್ದು, ಸದ್ಯ, ಜೈಪುರದಲ್ಲಿಯೇ ಅವರ ವಿಚಾರಣೆ ಮುಂದುವರೆದಿದೆ. [ISIS ಪರ ಪ್ರಚಾರ : ಐಒಸಿ ಮ್ಯಾನೇಜರ್ ಬಂಧನ]

jaipur

ಕರ್ನಾಟಕದ ಕಲಬುರಗಿ ಮೂಲದ ಸಿರಾಜುದ್ದೀನ್ ಜೈಪುರದಲ್ಲಿ ಭಾರತೀಯ ತೈಲ ನಿಗಮದ (ಐಒಸಿ)ಯಲ್ಲಿ ಮಾರ್ಕೆಟಿಂಗ್ ವಿಭಾಗದ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ಐಎಸ್‌ಐಎಸ್ ಉಗ್ರ ಸಂಘಟನೆ ಸೇರುವಂತೆ ಯುವಕರನ್ನು ಪ್ರೇರೆಪಿಸುತ್ತಿದ್ದರು ಎಂಬ ಆರೋಪ ಅವರ ಮೇಲಿದೆ. [ಬಿಜಾಪುರದ ಅಬ್ದುಲ್ ISIS ಸೇರಿಲ್ಲ, ಸೌದಿಯಲ್ಲಿದ್ದಾನೆ]

ಕರ್ನಾಟಕ ಪೊಲೀಸರಿಂದಲೂ ವಿಚಾರಣೆ? : ಸಿರಾಜುದ್ದೀನ್ ಕಲಬುರಗಿ ಮೂಲದವರಾಗಿದ್ದು, ಕರ್ನಾಟಕದ ಪೊಲೀಸರು ಅವರ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಕರ್ನಾಟಕದ ಪೊಲೀಸರು ರಾಜಸ್ಥಾನದ ಎಟಿಎಸ್ ಜೊತೆ ಸಂಪರ್ಕದಲ್ಲಿದ್ದು, ಅವರು ಮಾಹಿತಿ ಕೇಳಿದರೆ ಕಳುಹಿಸಿಕೊಡಲಿದ್ದಾರೆ.

ಸಿರಾಜುದ್ದೀನ್ ಸಿಕ್ಕಿದ್ದು ಹೇಗೆ? : ಸಿರಾಜುದ್ದೀನ್ ಬಂಧನದ ಕುರಿತು ರಾಜಸ್ಥಾನ ಭಯೋತ್ಪಾದಕ ನಿಗ್ರಹ ಪಡೆ ಹೆಚ್ಚುವರಿ ಡಿಜಿಪಿ ಅಲೋಕ್ ತ್ರಿಪಾಠಿ ಒನ್ ಇಂಡಿಯಾ ಜೊತೆ ಮಾತನಾಡಿದ್ದು, 'ಸಿರಾಜುದ್ದೀನ್ ಅವರ ಸಾಮಾಜಿಕ ಜಾಲ ತಾಣಗಳ ಮಾಹಿತಿಯನ್ನು ಸಂಗ್ರಹಣೆ ಮಾಡಿದ ನಂತರ ಅವರನ್ನು ಬಂಧಿಸಲಾಗಿದೆ' ಎಂದು ಹೇಳಿದ್ದಾರೆ.

'ಐಎಸ್‌ಐಎಸ್ ಸೇರುವಂತೆ ವಾಟ್ಸಪ್, ಫೇಸ್‌ಬುಕ್ ಮೂಲಕ ಸಿರಾಜುದ್ದೀನ್ ಪ್ರಚಾರ ಮಾಡುತ್ತಿದ್ದರು. ಉಗ್ರ ಸಂಘಟನೆ ಕುರಿತು ಫೋಟೋ, ವಿಡಿಯೋಗಳನ್ನು ಹಾಕುತ್ತಿದ್ದರು. ದೇಶದ ವಿವಿಧ ಭಾಗಗಳಿಂದ ಹಲವು ಯುವಕರನ್ನು ಅವರು ಸಂಘಟನೆಗೆ ಸೇರಿಸಿದ್ದಾರೆ' ಎಂದು ತ್ರಿಪಾಠಿ ವಿವರಣೆ ನೀಡಿದ್ದಾರೆ.

English summary
The arrest of the marketing manager in the Indian Oil Corporation for his alleged link to the ISIS may just be a tip of the iceberg. He is currently being questioned in Rajasthan. Karnataka police is also likely to question him since he hails from Kalaguragi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X