ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೀಷ್-ಎಲ್ಲರ ಕನ್ನಡ ನಿಘಂಟಿಗೆ ಮುನ್ನುಡಿ

By Mahesh
|
Google Oneindia Kannada News

ಬೆಂಗಳೂರು, ಡಿ. 24: ಡಾ. ಡಿ. ಎನ್. ಶಂಕರ ಬಟ್ಟರ ಹೊಸ ಹೊತ್ತಗೆ 'ಇಂಗ್ಲಿಶ್-ಕನ್ನಡ ಪದನೆರಕೆ' ಇತ್ತೀಚೆಗೆ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ನುಡಿಯರಿಮೆಯ ವಲಯದಲ್ಲಿ ಆಸಕ್ತಿಯುಳ್ಳ ಯೋ ಬರತ್ ಕುಮಾರ್ ಮತ್ತು ವಿವೇಕ್ ಶಂಕರ್ ಕೂಡ ಈ ಹೊತ್ತಗೆ ಬರೆಯುವಲ್ಲಿ ಶಂಕರ ಬಟ್ಟರ ಕೈ ಜೋಡಿಸಿದ್ದಾರೆ.

ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ಇಂಗ್ಲಿಶ್-ಕನ್ನಡ ನಿಘಂಟುಗಳು ಇವೆ. ಆದರೆ ಈ ಪದನೆರಕೆಯು ಬೇರೆ 'ನಿಘಂಟು'ಗಳಿಗಿಂತ ಈ ಮೂರು ವಿಷಯಗಳಲ್ಲಿ ಬೇರೆಯಾಗಿದೆ: [ಎಲ್ಲರ ಕನ್ನಡದ ಶಂಕರ ಬಟ್ ರಿಗೊಂದು ಪತ್ರ]

ಈ ಪದನೆರಕೆಯಲ್ಲಿ ಇಂಗ್ಲಿಶ್ ಪದಗಳಿಗೆ ಸಮಾನವಾದ ಕನ್ನಡ ಮೂಲದ್ದೇ ಪದಗಳನ್ನು ಕೊಡಲಾಗಿದೆ

ಸಾಮಾನ್ಯ ಬಳಕೆಯಲ್ಲಿರುವ ಕನ್ನಡ ಪದಗಳ ಜೊತೆಗೆ, ಅರಿಮೆ ಮತ್ತು ಇತರೆ ಹೊಸ ವಲಯಗಳಲ್ಲಿ ಕಟ್ಟಲಾದ ಹೊಸಪದಗಳನ್ನು ಇಲ್ಲಿ ಕೊಡಲಾಗಿದೆ

['ಪದ ಪದ ಕನ್ನಡ ಪದಾನೇ'] ಎಂಬ ಫೇಸ್ ಬುಕ್ ಗುಂಪಿನಲ್ಲಿ, ಪದಕಟ್ಟಣೆಯಲ್ಲಿ ಆಸಕ್ತಿಯಿರುವ ಸಾಮಾನ್ಯ ಮಂದಿ ಕಟ್ಟಿರುವ ಹಲವಾರು ಪದಗಳನ್ನು ಈ ಪದನೆರಕೆಯಲ್ಲಿ ಸೇರಿಸಿಕೊಳ್ಳಲಾಗಿದೆ.

DN Shankara Bhat's English Kannada Dictionary

ಈ ಹೊತ್ತಗೆಯಲ್ಲಿ ಸುಮಾರು 18,000 ಇಂಗ್ಲಿಶ್ ಪದಗಳಿಗೆ, ಹೆಚ್ಚು ಕಡಿಮೆ 45,000 ಕನ್ನಡ ಪದಗಳನ್ನು ಕೊಡಲಾಗಿದೆ. ಅಲ್ಲದೆ ಒಂದೇ ಪದ ಬೇರೆ ಬೇರೆ ಅರ್ಥಗಳಲ್ಲಿ ಬಳಕೆಯಾಗುವುದನ್ನು ತೋರಿಸಿಕೊಡುವ ಸಲುವಾಗಿ ಹಲವು ಉದಾಹರಣೆಯ ವಾಕ್ಯಗಳನ್ನೂ ನೀಡಲಾಗಿದೆ.[ವಿದ್ವಾಂಸ ಶಂಕರ್ ಭಟ್ 'ಎಲ್ಲರ ಕನ್ನಡ'ಕ್ಕೆ ಸಮರ್ಥನೆ]

ಕನ್ನಡ ಮೂಲ ಪದಗಳ ಬಳಕೆ: ಇಂದು ಮಾರುಕಟ್ಟೆಯಲ್ಲಿ ಸಿಗುವ ಕನ್ನಡ ನಿಘಂಟುಗಳಲ್ಲಿನ ಪದಗಳಲ್ಲಿ ಹಲವಾರು ಪದಗಳು ಸಂಸ್ಕೃತ ಮೂಲದವಾಗಿದ್ದು, ಅವುಗಳಲ್ಲಿ ಹಲವು ಸಾಮಾನ್ಯ ಜನರಿಗೆ ಸುಲಭವಾಗಿ ತಿಳಿಯಲಾರದ್ದಾಗಿವೆ. ಅರಿಮೆಯ ವಿಷಯಗಳಲ್ಲಿ ಬಳಸುವ ಪದಗಳಂತೂ ಬಹಳ ಸಿಕ್ಕಲಾಗಿದ್ದು, ಅವುಗಳ ಅರ್ಥವನ್ನು ತಿಳಿಯುವಲ್ಲಿ ಎಲ್ಲರಿಗೂ ಬಹಳ ತೊಡಕಾಗುತ್ತದೆ.

ಉದಾಹರಣೆಗೆ ವಿಜ್ಞಾನ ಪದಕೋಶಗಳಲ್ಲಿ ಸಿಗುವ ಈ ಕೆಲವು ಪದಗಳನ್ನು ಗಮನಿಸಿ: ಶಲಾಕಾಗ್ರ, ಕಶೇರುಕ, ವ್ಯಾಕೋಚನ. ಈ ಪದಗಳ ಅರ್ಥ ತಿಳಿದುಕೊಂಡು ಅವನ್ನು ಬಳಸುವುದು ಎಂತಹವರಿಗೂ ಕಷ್ಟವೇ ಸರಿ. ಬದಲಾಗಿ 'ಹೆಣ್ಣುತುದಿ', 'ಬೆನ್ನುಮೂಳೆಯುಳ್ಳ', 'ಹರಡುವಿಕೆ' ಎಂಬಂತಹ ಕನ್ನಡದ್ದೇ ಪದಗಳನ್ನು ಬಳಸಿದರೆ ಕಲಿಕೆ ಸುಲಭವಾಗುತ್ತದೆ.

ಇಂದು, ಕನ್ನಡದಲ್ಲಿ ಅರಿಮೆಯ ವಿಷಯಗಳನ್ನು ಬರಹಕ್ಕಿಳಿಸಿ, ಕನ್ನಡಲ್ಲೇ ಎಲ್ಲ ತಿಳಿವುಗಳನ್ನು ಕಟ್ಟಿಕೊಳ್ಳುವ ಕೆಲಸ ಅಷ್ಟಾಗಿ ಆಗಿಲ್ಲ. ಹಾಗಾಗಿ, ನಮ್ಮ ಓದಿಗಾಗಿ ನಾವು ಇಂಗ್ಲಿಶನ್ನೇ ನೆಚ್ಚಿಕೊಳ್ಳುವ ಪರಿಸ್ಥಿತಿ ಬಂದಿದೆ.[ಪ್ರತಿಕ್ರಿಯೆ: ಕನ್ನಡಿಗರ ಮಾತಿನಲ್ಲಿ 'ಮಹಾಪ್ರಾಣ' ಇಲ್ಲ]

ಆದರೆ, ಇದು ಸಾಮಾನ್ಯ ಕನ್ನಡಿಗರಿಗೆ ಕಲಿಕೆಯಲ್ಲಿ ತೊಡಕನ್ನು ಉಂಟು ಮಾಡುತ್ತದೆ. ಮತ್ತು ಇರುವ ಕೆಲವೇ ಕೆಲವು ಅರಿಮೆಯ ಬರಹಗಳಲ್ಲಿ ಕೂಡ ಬಳಸಲಾಗಿರುವ ಪದಗಳು ಹೆಚ್ಚಾಗಿ ಸಂಸ್ಕೃತ ಮೂಲಗಳಿಂದ ಕಟ್ಟಿಕೊಂಡಿರುವುದರಿಂದ ಅವು ತೊಡಕು ತೊಡಕಾಗಿದ್ದು, ಮೊದಲೇ ಹೇಳಿದಂತೆ, ಹೆಚ್ಚಿನ ಜನರಿಗೆ ಅರ್ಥವಾಗಲಾರದಂತಿದೆ.

ಈ ತೊಡಕುಗಳನ್ನು ಬಗೆಹರಿಸುವ ಒಂದು ಪ್ರಯತ್ನ ಈ ಪದನೆರಕೆಯ ಮೂಲಕ ಮಾಡಲಾಗಿದೆ. ಈ ಹೊತ್ತಗೆಯಲ್ಲಿ ಇಂಗ್ಲಿಶಿನ ಅರಿಮೆಯ ಪದಗಳಿಗೆ ಸಾಟಿಯಾಗಿ ಕೊಡಲಾಗಿರುವ ಕನ್ನಡ ಪದಗಳು ಕನ್ನಡದ್ದೇ ಮೂಲದವಾಗಿದ್ದು, ಕನ್ನಡಿಗರ ಮಾತಿಗೆ ಹೆಚ್ಚು ಹತ್ತಿರವಾಗಿವೆ. ಈ ಸಲುವಾಗಿ ಕನ್ನಡದ ಹಲವು ಒಳನುಡಿಗಳಿಂದಲೂ ಪದಗಳನ್ನು ಪಡೆದುಕೊಳ್ಳಲಾಗಿದೆ.

Dr Shankar Bhat

ಕನ್ನಡದ್ದೇ ಮೂಲದ ಪದಗಳನ್ನು ಬಳಸಿರುವುದರಿಂದ ಕನ್ನಡ ಬಲ್ಲವರೆಲ್ಲರಿಗೂ ತಾನಾಗೇ ಬರುವ ಕನ್ನಡದ ಪದಕಟ್ಟಣೆಯ ನಿಯಮಗಳು ಮತ್ತು ಒಲವುಗಳನ್ನು ಬಳಸಿಕೊಳ್ಳುವ ಅನುಕೂಲವೂ ಇರುತ್ತದೆ. ಹಾಗಾಗಿ, ಪದ ಅರಿತುಕೊಂಡು ಬಳಸುವುದು ಮಾತ್ರವಲ್ಲ, ಅವನ್ನು ಕಟ್ಟುವುದೂ ಸಹ ತೀರಾ ಸುಲಭವಾಗುತ್ತದೆ.

ಹೀಗೆ ಜನರ ಆಡುನುಡಿಗೆ ಹತ್ತಿರವಾದ ಪದಗಳನ್ನು ಬಳಸಿ ಅರಿಮೆಯ ಹೊಸಪದಗಳನ್ನು ಕಟ್ಟಿಕೊಂಡು, ಅವುಗಳನ್ನು ಅರಿಮೆಯ ವಿಷಯಗಳನ್ನು ಬರೆಯುವಲ್ಲಿ ಬಳಸಿದರೆ, ಕಲಿಕೆಯಲ್ಲಿ ಕಾಣಿಸಿಕೊಳ್ಳುವ ಹಲವಾರು ತೊಂದರೆ-ತೊಡಕುಗಳನ್ನು ನೀಗಿಸಿಕೊಳ್ಳಬಹುದು. ಇದರಿಂದ ಕನ್ನಡಿಗರ ಕಲಿಕೆಗೆ ಒಳಿತುಂಟಾಗುತ್ತದೆ ಮತ್ತು ಕನ್ನಡ ಸಮಾಜವನ್ನು ಕಲಿಕೆಯಲ್ಲಿ ಬಲಪಡಿಸಿದಂತಾಗುತ್ತದೆ.

ಆದರೆ ಇಂತಹ ತೊಡಕು-ತೊಂದರೆಗಳು ಬರೇ ಕನ್ನಡಕ್ಕೆ ಸೀಮಿತವಾದುದಲ್ಲ, ಭಾರತದ ಹಲವು ನುಡಿಗಳಲ್ಲೂ ಇದೇ ಬಗೆಯ ಸಮಸ್ಯೆಗಳಿವೆ. ಇಂತಹ ನುಡಿ ಸಮುದಾಯಗಳೂ ತಮ್ಮ ನುಡಿಯಲ್ಲಿ ಪದ ಸಂಪತ್ತನ್ನು ಕಟ್ಟಿಕೊಳ್ಳಲು, ಅದರಲ್ಲೂ ಅರಿಮೆಯ ವಿಷಯಗಳ ಪದಸಂಪತ್ತನ್ನು ಕಟ್ಟಿಕೊಳ್ಳಲು, ತಮ್ಮದೇ ನುಡಿಯ ಮಾತಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಪದಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಬೇಕಿದೆ.

ಈ ಪದನೆರಕೆಯು ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಹೆಚ್ಚಿನ ಮಾಹಿತಿಗೆ ಶಂಕರ ಬಟ್ಟರ ಮಿಂದಾಣದ ಈ [ಪುಟಕ್ಕೆ ಭೇಟಿ] ನೀಡಿ.

English summary
Dr. D. N. Shankara Bhat is a world-renowned linguist. Dr. D N Shankara Bhat's 'English-Kannada Padanerake' (dictionary) is now available in book stores. Here is a introductory article on new dictionary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X