ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ನೇಮಕಾತಿ ಮೌಖಿಕ ಸಂದರ್ಶನ ಫೆ. 26 ರಂದು

|
Google Oneindia Kannada News

ಬೆಂಗಳೂರು, ಫೆ. 20: ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ನಾಗರಿಕ ಮತ್ತು ಸಶಸ್ತ್ರ ಮೀಸಲು ಪಡೆ ಸಬ್ ಇನ್ಸ್ ಪೆಕ್ಟರ್ ಅಭ್ಯರ್ಥಿಗಳಿಗೆ ಫೆ. 26 ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಸಿಐಡಿ ಕೇಂದ್ರ ಕಚೇರಿಯಲ್ಲಿ ಮೌಖಿಕ ಪರೀಕ್ಷೆ ನಡೆಸಲಾಗುವುದು.

ಜನವರಿ 11 ರಂದು ನಡೆದ ಲಿಖಿತ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಆಧಾರದಲ್ಲಿ ಸಂದರ್ಶನ ನಡೆಯಲಿದೆ. ಆಯ್ಕೆ ಪಟ್ಟಿಯನ್ನು http://www.ksp.gov.in/. ವೆಬ್ ತಾಣದಲ್ಲಿ ನೋಡಬಹುದಾಗಿದೆ ಎಂದು ನೇಮಕಾತಿ ಮತ್ತು ತರಬೇತಿ ಎಡಿಜಿಪಿ ತಿಳಿಸಿದ್ದಾರೆ.[ಬೆಸ್ಕಾಂನಲ್ಲಿ 189 ಸಹಾಯಕ ಲೈನ್‌ಮೆನ್ ಹುದ್ದೆ ಖಾಲಿ]

police

ಅಭ್ಯರ್ಥಗಳು ತಮ್ಮ ಕರೆ ಪತ್ರವನ್ನು ವೆಬ್ ತಾಣದ ಮೂಲಕ ಡೌನ್ ಲೋಡ್ ಮಾಡಿಕೊಂಡು ಮೂಲ ದಾಖಲಾತಿಗಳೊಂದಿಗೆ ಸಿಐಡಿ ಕೇದ್ರ ಕಚೇರಿಗೆ ಹಾಜರಾಗಬೇಕು. ಗೈರಾದರೆ ಹೆಸರನ್ನು ಕೈ ಬಿಡಲಾಗುವುದು ಎಂದು ತಿಳಿಸಿದ್ದಾರೆ.[ಬೆಸ್ಕಾಂನಲ್ಲಿ 628 ಹುದ್ದೆಗಳು ಖಾಲಿ ಇವೆ ಅರ್ಜಿ ಹಾಕಿ]

ಅಪರ ಜಿಲ್ಲಾ ಸರ್ಕಾರಿ ವಕೀಲರ ನೇಮಕಕ್ಕೆ ಅರ್ಜಿ ಆಹ್ವಾನ
ಬೆಂಗಳೂರು ನಗರ ಜಿಲ್ಲೆಯ ಮೂರನೇ ಅಪರ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಅರ್ಜಿ ಪಡೆಯಬಹುದು. 10 ವರ್ಷ ವಕೀಲ ವೃತ್ತಿ ನಡೆಸಿರುವ ಬಗೆಗಿನ ದಾಖಲೆ, ಜನ್ಮ ದಿನಾಂಕ ದಾಖಲೆ, 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಲಗತ್ತಿಸಿ ಮಾರ್ಚ್ 30 ರೊಳಗೆ ಸಲ್ಲಿಸಬೇಕು.

ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ, ಕೆಂಪೇಗೌಡ ರಸ್ತೆ. ಬೆಂಗಳೂರು-9 ವಿಳಾಸಕ್ಕೆ ಎಲ್ಲ ದಾಖಲೆಗಳನ್ನು ದೃಢೀಕರಿಸಿ ನೀಡಬೇಕು ಎಂದು ಪ್ರಕಟಣೆ ತಿಳಿಸಿದೆ.

English summary
The police department is going to conduct a interview for sub-inspectors on February 26 . The oral interview will be held at Bengaluru CID central office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X