ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದಲಾವಣೆಗೆ ಸಜ್ಜಾದ ಇನ್ಫೋಸಿಸ್, ರಾಮನಗರಕ್ಕೆ ಬಯೋಗ್ಯಾಸ್

By Madhusoodhan
|
Google Oneindia Kannada News

ಚೆನ್ನಪಟ್ಟಣ, ಮೇ 30: ರಾಮನಗರ ಜಿಲ್ಲೆಯ ಮನೆ ಮನೆಗೆ ಬಯೋಗ್ಯಾಸ್ ಒದಗಿಸುವ ಯೋಜನೆಗೆ ಐಟಿ ದಿಗ್ಗಜ ಇನ್ಫೋಸಿಸ್ ಮುಂದಾಗಿದೆ. ಯೋಜನೆಯಡಿ 7,620 ಘಟಕ ಸ್ಥಾಪನೆ ಮಾಡಿ ಅಷ್ಟೇ ಸಂಖ್ಯೆಯ ಮನೆಗಳಿಗೆ ಬಯೋ ಗ್ಯಾಸ್ ಸಂಪರ್ಕ ನೀಡಲು ಮುಂದಾಗಿದೆ.

ಯೋಜನೆಗೆ ಇನ್ಫೋಸಿಸ್ 22 ಕೋಟಿ ರು. ವೆಚ್ಚ ಮಾಡಲಿದೆ. 10 ವರ್ಷದ ಅವಧಿಯನ್ನು ಇನ್ಫೋಸಿಸ್ ಇಟ್ಟುಕೊಂಡಿದ್ದು ಒಂದು ಮಿಲಿಯನ್ ಕುಟುಂಬಕ್ಕೆ ನೆರವಾಗಲಿದೆ. ಎನ್ ಜಿಒ ಎಸ್ ಕೆ ಜಿ ಸಂಘ ಈ ಕೆಲಸಕ್ಕೆ ಸಹಕಾರ ನೀಡಲಿದೆ.[ಸಿಕ್ಕಾ ಬಂದ್ಮೇಲೆ ಇನ್ಫಿಗೆ ಶುಕ್ರದೆಸೆ, ಮತ್ತೆ ನಿರೀಕ್ಷೆ ಮೀರಿದ ಲಾಭ!]

infosys

ಈ ಮಹತ್ವದ ಯೋಜನೆಗೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಚೆನ್ನಪಟ್ಟಣದಲ್ಲಿ ಸೋಮವಾರ ಚಾಲನೆ ನೀಡಿದರು. ಸಂಸದ ಡಿಕೆ ಸುರೇಶ್, ಇನ್ಫೋಸಿಸ್ ನ ಮೂಲಸೌಕರ್ಯ ವಿಭಾಗದ ಉಪಾಧ್ಯಕ್ಷ ರಾಮದಾಸ್ ಕಾಮತ್, ಗ್ರೀನ್ ಇನಿಶಿಯೇಟಿವ್ ಮುಖ್ಯಸ್ಥ ಬೋಸ್ ವರ್ಗೆಸೆ, ಎಸ್ ಕೆಜಿ ಸಂಘದ ಅಧ್ಯಕ್ಷ ವಿದ್ಯಾ ಸಾಗರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಪಿ ರಾಜು ಹಾಜರಿದ್ದರು.[ಇನ್ಫೋಸಿಸ್ Q4 ಫಲಿತಾಂಶ ಲಾಭಕ್ಕೆ ತಿರುಗಿದ್ದು ಹೇಗೆ?]

ಕೇಂದ್ರ ಸರ್ಕಾರ ಎಲ್ ಪಿಜಿಯನ್ನು ಮನೆ ಮನೆಗೆ ಮುಟ್ಟಿಸಲು ಮುಂದಾಗಿರುವ ವೇಳೆ ಇನ್ಫೋಸಿಸ್ ಸಹ ಅಂಥದ್ದೇ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಆಕಳ ಸಗಣಿಯಿಂದ ತಯಾರಾಗುವ ಬಯೋ ಗ್ಯಾಸ್ ಮೂಲಕ ಪರಿಸರ ಸಂರಕ್ಷಣೆ ಜತೆಗೆ ಗ್ರಾಮೀಣ ಭಾಗದಲ್ಲಿ ಹೊಸ ಕ್ರಾಂತಿ ಮಾಡಲು ಸಂಸ್ಥೆ ಮುಂದಾಗಿದೆ.

English summary
Infosys announced the launch of a household biogas project in Ramanagara district in Karnataka. Under the project, Infosys will build 7,620 household biogas units and provide an equal number of biogas stoves to as many families in the district. Infosys will spend nearly 22 Crores on the project. Over a 10-year period, the project is expected to generate biogas equivalent to about 1 million cylinders of domestic LPG. The project was inaugurated by Mrs. Sudha Murty, Chairperson of the Infosys Foundation, India, in Channapatna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X