ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಭಾಗ್ಯ ವಿಧಾತಕ್ಕೆ ಬಹುಮಾನಗಳ ಸುರಿಮಳೆ

ಕರ್ನಾಟಕದಾದ್ಯಂತ ಬಹಳಷ್ಟು ನಗರಗಳಲ್ಲಿ "ಭಾರತ ಭಾಗ್ಯ ವಿದಾತ" ಧ್ವನಿ ಬೆಳಕು ದೃಶ್ಯ ವೈಭವ ವಿನೂತನ ರೂಪಕ ಪ್ರದರ್ಶನ ಕಾಣುತ್ತಿದ್ದು ಅದರ ಕೆಲವು ಮಾಹಿತಿ ಇಲ್ಲಿದೆ.

By Ananthanag
|
Google Oneindia Kannada News

ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮಡಿಗೊಳಿಸಿದ ಮಹಾಚೇತನ, ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಜೀವನ ಚರಿತ್ರೆಯನ್ನು ನ ಆತ್ಮಕತೆಯು ಪ್ರೇಕ್ಷಕರ ಮನದಲ್ಲಿ ರೋಮಾಂಚನ ಮೂಡಿಸಿದೆ.

ಕರ್ನಾಟಕದಾದ್ಯಂತ ಬಹಳಷ್ಟು ನಗರಗಳಲ್ಲಿ ಪ್ರದರ್ಶನ ಕಂಡಿರುವ ಭಾರತ ಭಾಗ್ಯ ವಿದಾತ ಧ್ವನಿ ಬೆಳಕು ದೃಶ್ಯ ವೈಭವ ವಿನೂತನ ರೂಪಕ ಬೆಳಗಾವಿಯ ಸರದಾರ ಹೈಸ್ಕೂಲ್ ಮೈದಾನದಲ್ಲಿ ಜರುಗಿತು.

ಅಂಬೇಡ್ಕರ್‍ ಅವರ 125ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ಜೀವನಸಾಧನೆಗಳನ್ನು ಬಿಂಬಿಸುವ ಭಾರತ ಭಾಗ್ಯವಿಧಾತ ಕಾರ್ಯಕ್ರಮವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜ್ಯದ ಎಲ್ಲ ಜನರಿಗೂ ತಲುಪಿಸುವ ಕೆಲಸವನ್ನು ಮಾಡುತ್ತಿದೆ.[ಅಂಬೇಡ್ಕರ್ ಹೆಸರಿನಲ್ಲಿ 125 ವಸತಿ ಶಾಲೆ : ಸಿದ್ದರಾಮಯ್ಯ]

ಯಾರು ಭಾರತ ಭಾಗ್ಯವಿಧಾತ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇದಕ್ಕೆ ಉತ್ತರ ಕೊಡುತ್ತ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಜೀವನದ ವಿವಿಧ ಮಜಲುಗಳನ್ನು ಹಾಗೂ ಸಾಧನೆಯನ್ನು ಕಂಸಾಳೆ ಕಲಾವಿದರು ಪರಿಚಯಿಸುತ್ತಾ ಸಾಗುತ್ತಾರೆ. ಹೀಗೆ ಕಥೆ ಮುಂದುವರೆಯುತ್ತಾ ಇಡೀ ಜೀವನ ಶೈಲಿಯನ್ನು ವಿವರಿಸುತ್ತಾ ಹೋಗುತ್ತಾರೆ.

ಬಿ.ಎಂ.ಗಿರಿರಾಜ್ ಅವರ ನಿರ್ದೇಶನದಲ್ಲಿ ರೂಪುಗೊಂಡಿರುವ ಈ ದೃಶ್ಯ ವೈಭವಗಳ ರೂಪಕದಲ್ಲಿ ಸುಮಾರು 80 ಕಲಾವಿದರು ಅದ್ಭುತ ಪ್ರದರ್ಶನ ನೀಡಿದರು. ಗೀತರಚನೆ ಡಾ.ಕೆ.ವೈ.ನಾರಾಯಣಸ್ವಾಮಿ ಹಾಗೂ ಬಿ.ಎಂ.ಗಿರಿರಾಜ್, ಸಂಗೀತ ಪೂರ್ಣಚಂದ್ರ ತೇಜಸ್ವಿ, ರಂಗವಿನ್ಯಾಸ ಶಶಿಧರ ಅಡಪ, ನೃತ್ಯ ಸಂಯೋಜನೆ ಪದ್ಮಿನಿ ಅಚ್ಚಿ, ಬೆಳಕು ನಂದಕಿಶೋರ್, ವಸ್ತ್ರಾಲಂಕಾರ ಪ್ರಮೋದ ಶಿಗ್ಗಾವ್, ಪ್ರಸಾಧನ ರಾಮಕೃಷ್ಣ ಬೆಳ್ತೂರು ಹಾಗೂ ಸಹ ನಿರ್ದೇಶನ ಎಂ.ಪಿ.ಎಂ.ವೀರೇಶ್ ನೀಡಿದ್ದಾರೆ.

ಗತ ವೈಭವವನ್ನು ಸಾರುವ ಕಥೆ

ಗತ ವೈಭವವನ್ನು ಸಾರುವ ಕಥೆ

ಕಾರ್ಮಿಕರ ಕಾನೂನು ರೂಪಿಸಿದಾತ.. ಕುಡಿಯುವ ನೀರಿನ ಹಕ್ಕು ಕೊಡಿಸಿದವ... ಪ್ರತಿ ಹೆಣ್ಣಿಗೂ ಗೌರವದ ಬದುಕು ಕಲ್ಪಿಸಿಕೊಟ್ಟವ ಭಾರತ ಭಾಗ್ಯವಿಧಾತ. ಆತನೇ ಡಾ.ಅಂಬೇಡ್ಕರ್ ಎಂಬುದನ್ನು ದೃಶ್ಯ-ವೈಭವ ಮತ್ತು ಧ್ವನಿ-ಬೆಳಕಿನ ಮೂಲಕ ಜನಮನದಲ್ಲಿ ಅಚ್ಚೊತ್ತಿದರು. ಅಂಬೇಡ್ಕರ್ ಅವರು ಬಾಲಕನಾಗಿದ್ದಾಗ ಶಾಲೆಯಲ್ಲಿ ಓರಗೆಯವರಿಂದ ಅನುಭವಿಸಿದ ಅವಮಾನ, ಜಾತಿ ಕಾರಣಕ್ಕೆ ಗಾಡಿಯಿಂದ ಕೆಳಕ್ಕೆ ದಬ್ಬಿಸಿಕೊಂಡ ಘಟನೆಯನ್ನು ಕಲಾವಿದರು ವೇದಿಕೆಯಲ್ಲಿ ಪ್ರದರ್ಶಿಸಿದಾಗ ಪ್ರೇಕ್ಷಕರ ಕಣ್ಣುಗಳು ತುಂಬಿ ಬಂದವು

ವಿದೇಶದಲ್ಲಿ ಅಂಬೇಡ್ಕರ್ ಅವರ ಪಾಡು

ವಿದೇಶದಲ್ಲಿ ಅಂಬೇಡ್ಕರ್ ಅವರ ಪಾಡು

ಶಾಹು ಮಹಾರಾಜರ ಸಹಾಯದಿಂದ ವಿದೇಶದಲ್ಲಿ ಓದುವ ಡಾ.ಅಂಬೇಡ್ಕರ್ ಅವರು, ಬಾಡಿಗೆ ಮನೆಯನ್ನು ಪಡೆಯಲು ಪಟ್ಟ ಪಾಡು; ಕುಡಿಯುವ ನೀರಿಗಾಗಿ ನಡೆಸಿದ ಹೋರಾಟ; ಅವಮಾನದ ಬದುಕಿನ ನಡುವೆಯೂ ಅಪಾರ ಪಾಂಡಿತ್ಯ ಗಳಿಸಿ ಸಂವಿಧಾನ ರಚಿಸುವುದು ಸೇರಿದಂತೆ ಬದುಕಿನ ವಿವಿಧ ಘಟ್ಟಗಳಲ್ಲಿ ಅನುಭವಿಸಿದ ಕಹಿ ಗಳಿಗೆಯನ್ನು ಕಲಾವಿದರು ಮನೋಜ್ಞವಾಗಿ ಅನಾವರಣಗೊಳಿಸಿದರು.

ಕಲಾವಿದರಿಗೆ ಗಣ್ಯರಿಂದ ಗೌರವಧನ

ಕಲಾವಿದರಿಗೆ ಗಣ್ಯರಿಂದ ಗೌರವಧನ

ಭಾರತ ಭಾಗ್ಯ ವಿಧಾತ ಧ್ವನಿ ಬೆಳಕು ನೃತ್ಯ ರೂಪಕ ಪ್ರದರ್ಶನ ಭಾರೀ ಜನಮನ್ನಣೆಗೆ ಪಾತ್ರವಾಗಿದೆ. ಸಚಿವರು ಸಂಸದರು, ಗಣ್ಯರು ಮೆಚ್ಚಿ ತಲೆ ದೂಗಿದ್ದಾರೆ ಎಂದು ಗಣ್ಯರು ಕೊಂಡಾಡಿದರು.
ಭಾರತ ಭಾಗ್ಯ ವಿಧಾತ ರಂಗ ಪ್ರದರ್ಶನವನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿ ಸಚಿವರಾದ ವಿನಯ್ ಕುಲಕರ್ಣಿ ಸ್ಥಳದಲ್ಲಿಯೇ ರೂ.50 ಸಾವಿರ ನಗದು ಮೊತ್ತವನ್ನು ಕಲಾವಿದರಿಗೆ ನೀಡಿದರು.ಸಂಸದರಾದ ಪ್ರಹ್ಲಾದ ಜೋಷಿ ರೂ.25ಸಾವಿರ, ಶಾಸಕರಾದ ಅರವಿಂದ ಬೆಲ್ಲದ ರೂ.25ಸಾವಿರ ಮೊತ್ತವನ್ನು ಕಲಾವಿದರಿಗೆ ಘೋಷಿಸಿದರು.

ಮೆಚ್ಚುಗೆಯ ಸುರಿಮಳೆ

ಮೆಚ್ಚುಗೆಯ ಸುರಿಮಳೆ

ಅಲ್ಲಿನ ವಾತಾವರಣದ ಸುತ್ತು ಛಳಿಗಿಂತ ಪ್ರೇಕ್ಷಕರ ಎದೆಯಲ್ಲಿ ಅಂಬೇಡ್ಕರ್ ಎಂಬ ಹಣತೆಯ ಬಿಸಿಯಿತ್ತು. ಜ್ಞಾನದ ಬೆಳಕಿತ್ತು. ಇಡೀ ಪ್ರದರ್ಶನವನ್ನು ಬಿಟ್ಟ ಕಣ್ಣು ಬಿಟ್ಟ ಹಾಗೆ ಕೂತು ವೀಕ್ಷಿಸಿದ ಪ್ರೇಕ್ಷಕರ ಎದಿರು ಧ್ವನಿ-ಬೆಳಕುಗಳು ಸಾರಿದ್ದು ಸಮಾನತೆಯ ಸಂದೇಶ. ಜನಪದ ಕಲಾ ಪ್ರಕಾರಗಳು ವೇದಿಕೆಯ ಮೇಲೆ ಸಾಲುಗಟ್ಟಿ ಮೆರವಣಿಗೆ ಹೊರಟಾಗ ಎಲ್ಲ ಕಲೆಗಳಿಗೂ ಚಪ್ಪಾಳೆಗಳ ಹೂಮಳೆ. ಕೇಕೆ, ಶಿಳ್ಳೆಗಳ ವಾದ್ಯದ ಸುರಿಮಳೆಯೇ ಸುರಿಯಿತು.

ನಗಾರಿ ಭಾರಿಸುವ ಮೂಲಕ ಚಾಲನೆ

ನಗಾರಿ ಭಾರಿಸುವ ಮೂಲಕ ಚಾಲನೆ

ಸಂಸದ ಸುರೇಶ ಅಂಗಡಿ ಅವರು ನಗಾರಿ ಬಾರಿಸುವ ಮೂಲಕ ಧ್ವನಿ ಬೆಳಕು ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಎನ್ ಜಯರಾಮ, ಪೊಲೀಸ್ ಆಯುಕ್ತರಾದ ಕೃಷ್ಣಭಟ್ಟ ಅವರು ಉಪಸ್ಥಿತರಿದ್ದರು.

ಬೆಳಗಾವಿಯಲ್ಲಿ ಚಿಂತನೆಗೆ ಹಚ್ಚಿದ ಭಾಗ್ಯವಿಧಾತ

ಬೆಳಗಾವಿಯಲ್ಲಿ ಚಿಂತನೆಗೆ ಹಚ್ಚಿದ ಭಾಗ್ಯವಿಧಾತ

ಗಡಿನಾಡು ಬೆಳಗಾವಿಯಲ್ಲಿ 'ಭಾರತ ಭಾಗ್ಯ ವಿಧಾತ' ಧ್ವನಿ-ಬೆಳಕು ಕಾರ್ಯಕ್ರಮ ಪ್ರೇಕ್ಷಕರನ್ನು ಹೊಸ ಚಿಂತನೆಗೆ ಹಚ್ಚಿತು. ಬಿ.ಆರ್ ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ದೃಶ್ಯ ರೂಪಕಗಳಲ್ಲಿ ಮನಮುಟ್ಟುವಂತೆ ಕಲಾವಿದರು ಸಾದರಪಡಿಸಿದರು, ಅದ್ಭುತ ಸಂಗೀತ, ಧ್ವನಿ-ಬೆಳಕು ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು. ಜನಪದ ಕಲೆಗಳ ಜಾತ್ರೆಗೆ ನೋಡುಗರು ಮನಸೋತು ಕುಳಿತಿದ್ದರು.

ಧಾರವಾಡದಲ್ಲಿ ಭಾಗ್ಯ ವಿಧಾತ

ಧಾರವಾಡದಲ್ಲಿ ಭಾಗ್ಯ ವಿಧಾತ

ಕ್ಷಣ ಕ್ಷಣಕ್ಕೂ ಕೆರಳುತ್ತಿದ್ದ ಕುತೂಹಲ. ಪ್ರೇಕ್ಷಕರನ್ನು ಹಿಡಿದಿಟ್ಟ ಧ್ವನಿ ಬೆಳಕಿನ ಮಾಯಾಜಾಲ. ಅಂಬೇಡ್ಕರ್ ಎಂದರೆ ಬರಿ ಸಂವಿಧಾನಿ ಶಿಲ್ಪಿ ಅಲ್ಲ ಅವರು ಈ ಮಣ್ಣಿನ ನಿಜ ಅವಧೂತ ಭಾರತ ಭಾಗ್ಯ ವಿಧಾತ ಎಂದು ಅರಿತುಕೊಂಡ ಸುವರ್ಣ ಘಳಿಗೆ. ಅಂಬೇಡ್ಕರ್ ಜೀವನದ ಯಶೋಗಾಥೆಯನ್ನು ಸಾರುವ 'ಭಾರತ ಭಾಗ್ಯ ವಿಧಾತ" ದಾರವಾಡದಲ್ಲಿ ಅನಾವರಣಗೊಂಡಿದ್ದು ಹೀಗೆ.

English summary
Bhimrao Ambedkar popularly known as Baba Saheb, his life history inspired everyone in the nation. The Department of Information and Public Relations produced the program 'Bharata bhagya vidhata' has a history based on the life of Ambedkar. His program To win the audience's mind
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X