ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್‌ಐಎಸ್‌ನಲ್ಲಿದ್ದ ಭಟ್ಕಳ ಮೂಲದ ಶಫಿ ಅರ್ಮರ್ ಹತ್ಯೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 25 : ಐಎಸ್‌ಐಎಸ್ ಉಗ್ರ ಸಂಘಟನೆಯಲ್ಲಿದ್ದ ಭಟ್ಕಳ ಮೂಲದ ಶಫಿ ಅರ್ಮರ್ ಮೃತಪಟ್ಟಿದ್ದಾನೆ. ಸಿರಿಯಾದ ಮೇಲೆ ನಡೆದ ವಾಯುದಾಳಿಯಲ್ಲಿ ಅರ್ಮರ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದ್ದು, ಈ ಕುರಿತು ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿ ಬಂದಿದೆ.

ಶಫಿ ಅರ್ಮರ್ (26) ಮೃತಪಟ್ಟ ಬಗ್ಗೆ ಮಾಹಿತಿ ಬಂದಿದ್ದು, ಮಾಹಿತಿಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ. ಅರ್ಮರ್‌ ಐಎಸ್‌ಐಎಸ್‌ನ ಭಾರತದ ಶಾಖೆಯಾಗಿರುವ ಅನ್ಸರ್-ಉತ್-ತಾಹಿದ್‌ನ ಸ್ಥಾಪಕ ಸುಲ್ತಾನ್ ಅರ್ಮರ್‌ನ ಸಹೋದರ. [ಭಟ್ಕಳ ಮೂಲದ ಶಫಿ ಭಾರತದಲ್ಲಿ ISIS ಮುಖ್ಯಸ್ಥ]

isis

ಭಟ್ಕಳ ಮೂಲದ ಈ ಇಬ್ಬರು ಐಎಸ್‌ಐಎಸ್ ಉಗ್ರ ಸಂಘಟನೆಗೆ ಭಾರತೀಯರನ್ನು ನೇಮಕ ಮಾಡಲು ಅನ್ಸರ್-ಉತ್-ತಾಹಿದ್ ಸಂಘಟನೆ ಸ್ಥಾಪಿಸಿದ್ದರು. ಕಳೆದ ವರ್ಷ ಸುಲ್ತಾನ್ ಹತ್ಯೆಯಾದ ಬಳಿಕ, ಶಫಿ ಅರ್ಮರ್ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ. [ಉಗ್ರರಿಗೆ ಮುಂಬೈನಿಂದ ಸೂಚನೆ ಸಿಗುತ್ತಿತ್ತು]

ಈ ಇಬ್ಬರು ಸಹೋದರರು ಮೊದಲು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಐಎಸ್‌ಐ ಸಂಘಟನೆ ಅಡಿಯಲ್ಲಿ ಕೆಲಸ ಮಾಡಲು ಒಪ್ಪದ ಇವರು ಅದರಿಂದ ಹೊರ ಬಂದಿದ್ದರು. ಭಾರತದಲ್ಲಿ ಇತ್ತೀಚೆಗೆ ಐಎಸ್ಐಎಸ್ ಪರ ಕೆಲಸ ಮಾಡುತ್ತಿದ್ದ ಉಗ್ರರನ್ನು ಬಂಧಿಸಿದ ಬಳಿಕ ಶಫಿ ಅರ್ಮರ್ ಹೆಸರು ಹಲವು ಬಾರಿ ಕೇಳಿಬಂದಿತ್ತು. [ಭಟ್ಕಳದ ಅಹಮದ್ ಗೆ ISIS ನಂಟಿಲ್ಲ]

ಶಫಿ ಅರ್ಮರ್ ಮೃತಪಟ್ಟ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಐಎಸ್‌ಐಎಸ್ ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಮಾಹಿತಿ ಇಲ್ಲ. ಹಿಂದೆ ಸುಲ್ತಾನ್ ಅರ್ಮರ್ ಹತ್ಯೆಯಾದಾಗ ಸಂಘಟನೆಯ ಸಾಮಾಜಿಕ ತಾಣದಲ್ಲಿ ಹಲವು ಉಗ್ರರು ಆತನಿಗೆ ಅಂತಿಮ ನಮನ ಸಲ್ಲಿಸಿದ್ದರು ಎನ್ನುತ್ತಾರೆ ಗುಪ್ತಚರ ಇಲಾಖೆ ಅಧಿಕಾರಿಗಳು.

English summary
The security agencies in India could heave a sigh of relief with the death of Shafi Armar. This 26 year old who is a resident of Bhatkal in Karnataka was the alleged headhunter or recruiter for the ISIS in India. He is said to have been killed in an airstrike in Syria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X