ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸ್ಥಳ: ಸಮವಸರಣ ಪೂಜೆ : ಜಿನಾಗಮ ದರ್ಶನ

By Mahesh
|
Google Oneindia Kannada News

ಧರ್ಮಸ್ಥಳ, ನ.25: ಲಕ್ಷದೀಪೋತ್ಸವ ಅಂಗವಾಗಿ ಧರ್ಮಸ್ಥಳದಲ್ಲಿ ಭಾನುವಾರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಿತು. ಕೈವಲ್ಯ ಜ್ಞಾನ ಪಡೆದ ತೀರ್ಥಂಕರರು ತಮ್ಮ ದಿವ್ಯ ಧ್ವನಿಯ ಮೂಲಕ ಧರ್ಮೋಪದೇಶ ನೀಡುವ ಸಭೆಗೆ ಸಮವಸರಣ ಎನ್ನುತ್ತಾರೆ. ಜೈನ ಸಂಪ್ರದಾಯದ ಪ್ರಕಾರ ಬಸದಿಗಳು ಸಮವಸರಣದ ಪ್ರತೀಕವಾಗಿವೆ.

ತೀರ್ಥಂಕರರು ತಮ್ಮ ದಿವ್ಯ ಧ್ವನಿಯಿಂದ ಧರ್ಮೋಪದೇಶ ನೀಡುವ ಧರ್ಮಸಭೆಗೆ ಸಮವರಸಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ, ಪ್ರಾಣಿ - ಪಕ್ಷಿಗಳೂ ಸೇರಿದಂತೆ ಧರ್ಮೋಪದೇಶ ಕೇಳುವ ಸದವಕಾಶವಿದೆ. ಜೈನರ ಆರಾಧನಾ ಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿವೆ.[ವಿಜೃಂಭಣೆಯ ಲಕ್ಷದೀಪ ಉತ್ಸವಕ್ಕೆ ತೆರೆ]

ಬೀಡಿನಿಂದ (ಹೆಗ್ಗಡೆಯವರ ನಿವಾಸ) ಮಹೋತ್ಸವ ಸಭಾ ಭವನಕ್ಕೆ ತೀರ್ಥಂಕರರ ಮೂರ್ತಿಯ ಭವ್ಯ ಮೆರೆವಣಿಗೆಯ ಬಳಿಕ ಪಂಚ ಪರಮೇಷ್ಠಿಗಳ ಅಷ್ಟವಿಧಾರ್ಚನೆ ಪೂಜೆ, ಬಾಹುಬಲಿ ಪೂಜೆ ನಡೆಯಿತು.ಸ್ಥಳೀಯ ಬಾಲಕ-ಬಾಲಕಿಯರು ಅಷ್ಟವಿಧಾರ್ಚನೆ ಪೂಜೆ ಮಾಡಿದರೆ, ಸೌಮ್ಯ, ಸರಳಾರಾಜ್, ಸಂಧ್ಯಾ, ಗೀತಾ, ಭಗೀರಥ ಮತ್ತು ಶಿಶಿರ್ ಇಂದ್ರ ಪೂಜಾ ಮಂತ್ರ ಪಠಣ ಮಾಡಿದರು.

ಸುನಿಲ್ ನಿರ್ದೇಶನದಲ್ಲಿ ನಡೆದ ಜಿನಾಗಮ ದರ್ಶನ

ಸುನಿಲ್ ನಿರ್ದೇಶನದಲ್ಲಿ ನಡೆದ ಜಿನಾಗಮ ದರ್ಶನ

ಎಸ್,ಡಿ,ಎಮ್. ಪದವಿಪೂರ್ವ ಕಾಲೇಜಿನ ಸುನಿಲ್ ನಿರ್ದೇಶನದಲ್ಲಿ ನಡೆದ ಜಿನಾಗಮ ದರ್ಶನದಲ್ಲಿ ಗಣಧರರಾಗಿ ಉಪನ್ಯಾಸಕರಾದ ಸುವೀರ್ ನೆಲ್ಲಿಕಾರ್ ಹಾಗೂ ಸರಸ್ವತಿಯಾಗಿ ಅಭಿಜ್ಞಾ ಉಜಿರೆ, ಆಚಾರ್ಯರಾಗಿ ಶಿಶಿರ್, ಅರಿಹಂತ, ಅಣಿನಂದನ್ ಮತ್ತು ನವೀನ್ ಪಾತ್ರ ನಿರ್ವಹಿಸಿದರು.

ಭಾವ ಪೂರ್ಣವಾದ ಸಮವಸರಣ ಪೂಜೆ

ಭಾವ ಪೂರ್ಣವಾದ ಸಮವಸರಣ ಪೂಜೆ

ಹೇಮಾವತಿ ವಿ,. ಹೆಗ್ಗಡೆ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಸಮವಸರಣ ಪೂಜೆ ಅತ್ಯಂತ ಭಾವ ಪೂರ್ಣವಾಗಿ ಹಾಗೂ ಅರ್ಥಪೂರ್ಣವಾಗಿ ನಡೆದು ಊರ-ಪರವೂರ ಶ್ರಾವಕ-ಶ್ರಾವಕಿಯರು ವೀಕ್ಷಿಸಿ ಪುಣ್ಯ ಸಂಚಯ ಮಾಡಿಕೊಂಡರು.

ಪಾಕಪರಿಣತರಿಗೆ ಸನ್ಮಾನ

ಪಾಕಪರಿಣತರಿಗೆ ಸನ್ಮಾನ

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಅಡುಗೆ ವಿಭಾಗದಲ್ಲಿ ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸಿದ ಪಾಕಪರಿಣತರಾದ ಪ್ರಕಾಶ್ ಅಳದಂಗಡಿ ಮತ್ತು ಗುಣಪಾಲ ಜೈನ್, ಅಳಿಯೂರು ಅವರನ್ನು ಡಾ .ಹೆಗ್ಗಡೆಯವರು ಸನ್ಮಾನಿಸಿದರು.

ಗಣ್ಯರ ಉಪಸ್ಥಿತಿ

ಗಣ್ಯರ ಉಪಸ್ಥಿತಿ

ಧಾರವಾಡದ ಡಾ. ನಿರಂಜನ್ ಕುಮಾರ್, ಮಂಗಳೂರಿನ ಡಾ. ಸಿ.ಕೆ. ಬಲ್ಲಾಳ್, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಪ್ರೊ.ಎಸ್. ಪ್ರಭಾಕರ್, ಡಾ. ಬಿ. ಯಶೋವರ್ಮ ಮತ್ತು ಏರ್ಯ ಲಕ್ಷ್ಮೀನಾರಾಯಣ ಆಳ್ವ ಉಪಸ್ಥಿತರಿದ್ದರು.

ಮಂತ್ರ ಪಠಣ

ಮಂತ್ರ ಪಠಣ

ಹೆಗ್ಗಡೆಯವರ ಬೀಡಿನಿಂದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಮೂರ್ತಿಯನ್ನು ಮಹೋತ್ಸವ ಸಭಾ ಭವನಕ್ಕೆ ಭವ್ಯ ಮೆರವಣಿಗೆಯಲ್ಲಿ ಕೊಂಡುಹೋದ ಬಳಿಕ ಅಲ್ಲಿ ಸ್ಥಳೀಯ ಶ್ರಾವಕ - ಶ್ರಾವಿಕೆಯರಿಂದ ಅಷ್ಟವಿಧಾರ್ಚನೆ ಪೂಜೆ, ಸಂಗೀತ ಪೂಜೆ, ಪಂಚ ನಮಸ್ಕಾರ ಮಂತ್ರ ಪಠಣ ನಡೆಯಿತು.

English summary
In Jainism, Samavasarana or Samosarana "Refuge to All" is a term for the divine preaching hall or the assembly of the Tirthankara after attaining perfect knowledge or Kevala Jnana. The theme of Samavasaranas has been popular in Jain art. Here is a report on Samavasarana pooja held at Dharmasthala, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X