ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು: ಕುಶಾಲನಗರದಲ್ಲಿ ಕಾರ್ತಿಕ್ ಗೌಡರ ದಿಬ್ಬಣ

By ಬಿ.ಎಂ.ಲವಕುಮಾರ್, ಚಿತ್ರಗಳು : ರಘುಹೆಬ್ಬಾಲೆ
|
Google Oneindia Kannada News

ಕುಶಾಲನಗರ, ಅ.30: ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಅವರ ಪುತ್ರ ಕಾರ್ತಿಕ್‍ಗೌಡ ಅವರ ವಿವಾಹದ ಚಪ್ಪರದ ಶಾಸ್ತ್ರ ಮತ್ತು ದೇವತಾಕಾರ್ಯ ಕೊಡಗು ಗೌಡ ಸಂಪ್ರದಾಯದಂತೆ ಕೊಡಗಿನ ಕುಶಾಲನಗರದ ರೈತ ಸಹಕಾರ ಭವನದದ ಭವ್ಯ ಅಲಂಕೃತ ಸಭಾ ಮಂಟಪದಲ್ಲಿ ನಡೆಯಿತು.

ಗೌಡ ಸಂಪ್ರದಾಯದಲ್ಲಿ ವಧುವಿನ ಮನೆಗೆ ವರನ ಕಡೆಯುವರು ಬರುವುದನ್ನು ದಿಬ್ಬಣ ಎನ್ನುತ್ತಾರೆ. ಅದರಂತೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪತ್ನಿ ಡಾಟಿ, ವರ ಕಾರ್ತಿಕ್ ಗೌಡ ಸೇರಿದಂತೆ ಬಂಧು-ಬಾಂಧವರು ಆಗಮಿಸಿದರು.

ಈ ಸಂದರ್ಭ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲ್ ನಿವಾಸಿ ದೇವರಗುಂಡ ಸದಾನಂದಗೌಡ ಮತ್ತು ಶ್ರೀಮತಿ ಡಾಟಿ ರವರ ಸುಪುತ್ರ ಕಾರ್ತಿಕ್ ಗೌಡ ಮತ್ತು ಕುಟುಂಬಸ್ತರು, ಬಂಧು-ಬಾಂಧವರನ್ನು ಸುಂಟಿಕೊಪ್ಪ ಸಮೀಪದ ಮಳೂರು ಗ್ರಾಮದ ಕೂಡಕಂಡಿ ಬೋಪಯ್ಯ ರವರ ಪುತ್ರರಾದ ಉದ್ಯಮಿ ಕೂಡಕಂಡಿ ನಾಣಯ್ಯರವರ ಕುಟುಂಬವು ಸಂಪ್ರದಾಯದಂತೆ ಬರಮಾಡಿಕೊಂಡಿತು.[ಕಾರ್ತಿಕ್ ಮದ್ವೆಗೆ ಮಂಟಪವಾದ ರೈತ ಭವನ]

ಕೊಡಗಿನಲ್ಲಿ ಮದುವೆಯ ಹಿಂದಿನ ದಿನವನ್ನು ಚಪ್ಪರ ಅಥವಾ ಊರುಕೂಡುವುದಾಗಿ ಕರೆಯುತ್ತಾರೆ. ಈ ದಿನ ವರ ಹಾಗೂ ವಧುವಿಗೆ ಅರಶಿನ ಎಣ್ಣೆ, ಮದರಂಗಿ ಶಾಸ್ತ್ರ ಮಾಡಲಾಗುತ್ತದೆ. ಅದರಂತೆಯೇ ಗುರುವಾರ ಬೆಳಿಗ್ಗೆಯಿಂದಲೇ ವಿವಿಧ ಶಾಸ್ತ್ರ ನೆರವೇರಿಸಲಾಯಿತು.

ಛಾಯಾಗ್ರಹಣ ನಿಷೇಧ: ಕೇಂದ್ರ ಸಚಿವರ ಡಿ.ವಿ.ಸದಾನಂದಗೌಡ ರವರ ಪುತ್ರ ಕಾರ್ತಿಕ್ ಗೌಡ ರವರ ವಿವಾಹ ಮಹೋತ್ಸವದಲ್ಲಿ ಪತ್ರಕರ್ತರು ಹಾಗೂ ಖಾಸಗಿ ವ್ಯಕ್ತಿಗಳು ಛಾಯಾಚಿತ್ರ ಹಾಗೂ ವೀಡಿಯೋವನ್ನು ತೆಗೆಯುವುದನ್ನು ನಿಷೇಧಿಸಲಾಗಿರುವುದು ಮಾತ್ರ ಇರಿಸು ಮುರಿಸನ್ನುಂಟು ಮಾಡಿದೆ.

ಕಾರ್ತಿಕ್ ಗೌಡ ಅವರಿಗೆ ಅರಶಿನ ಶಾಸ್ತ್ರ

ಕಾರ್ತಿಕ್ ಗೌಡ ಅವರಿಗೆ ಅರಶಿನ ಶಾಸ್ತ್ರ

ವಾದ್ಯಗೋಷ್ಠಿಗಳೊಂದಿಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ದಿಬ್ಬಣದಲ್ಲಿ ಬಂದ ವರನ ಕಡೆಯವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.ನಂತರ ಕೊಡಗಿನ ವಾಲಗದೊಂದಿಗೆ ವರನೊಂದಿಗೆ ಮಹಿಳೆಯರು ತೆರಳಿ ಗಂಗೆ ಪೂಜೆ ನೆರವೇರಿಸಿ ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ಛತ್ರಕ್ಕೆ ಆಗಮಿಸಿ ಕಳಶ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಆ ನಂತರ ವರ ಕಾರ್ತಿಕ್ ಗೌಡನಿಗೆ ಅರಶಿನ ಶಾಸ್ತ್ರವನ್ನು ನೆರವೇರಿಸಲಾಯಿತು. ಈ ಸಂದರ್ಭ ಅರಿಶಿನ ಹಚ್ಚಿ ಅಕ್ಷತೆ ಹಾಕಿ ಹಿರಿಯರು, ಮಹಿಳೆಯರು ಆಶೀರ್ವದಿಸಿದರು.

ಅತಿಥಿಗಳಿಗೆ ಭರ್ಜರಿ ಸ್ವಾಗತ

ಅತಿಥಿಗಳಿಗೆ ಭರ್ಜರಿ ಸ್ವಾಗತ

ಕಾನೂನು ಸಚಿವ ಡಿ.ವಿ.ಸದಾನಂದಗೌಡ ಮತ್ತು ಡಾಟಿ ಸದಾನಂದಗೌಡ ಅವರು ಚಪ್ಪರ ಶಾಸ್ತ್ರಕ್ಕೆ ಆಗಮಿಸಿದ ಬಂಧು-ಬಾಂಧವರನ್ನು ಸ್ವಾಗತಿಸಿ ಬರಮಾಡಿಕೊಂಡರು. ಮಧ್ಯಾಹ್ನ ಹಾಗೂ ರಾತ್ರಿ ಗಣ್ಯಾತಿ ಗಣ್ಯರು ಆಗಮಿಸಿದ್ದರು. ಇವರಿಗೆ ಭೂರಿ ಬೋಜನದ ವ್ಯವಸ್ಥೆ ಮಾಡಲಾಗಿತ್ತು. ಧಾರಾಕಾರ್ಯಕ್ರಮದ ಬಳಿಕ ಕಾರ್ತಿಕ್‍ಗೌಡ ಮತ್ತು ರಾಜಶ್ರೀ(ಸ್ವಾತಿ) ಅವರ ವಿವಾಹ ಮಹೋತ್ಸವವು ಶುಕ್ರವಾರ(ಅ.30) ಬೆಳಿಗ್ಗೆ 11.20ಕ್ಕೆ ಧನುರ್ ಲಗ್ನದ ಶುಭಗಳಿಗೆಯಲ್ಲಿ ನಡೆದಿದೆ

 ಅಪ್ಪ ಮಗ ಕೊಡಗಿನ ಅಳಿಯಂದಿರು

ಅಪ್ಪ ಮಗ ಕೊಡಗಿನ ಅಳಿಯಂದಿರು

ಕೊಡಗಿನ ಕುಶಾಲನಗರ ಬಳಿಯ ಗುಡ್ಡೆಹೊಸೂರಿನಿಂದ ಡಾಟಿ ಅವರನ್ನು ವಿವಾಹವಾಗುವ ಮೂಲಕ ಅಳಿಯಾಗಿದ್ದರು. ಇದೀಗ ಸದಾನಂದಗೌಡ ಅವರ ಪುತ್ರ ಕಾರ್ತಿಕ್‍ಗೌಡ ಅವರು ಗುಡ್ಡೆಹೊಸೂರಿನ ಕೂಡಕಂಡಿ ನಾಣಯ್ಯ ಮತ್ತು ಸುಧಾ ದಂಪತಿಗಳ ಪುತ್ರಿ ರಾಜಶ್ರೀ ವಿವಾಹವಾಗುವ ಮೂಲಕ ಕೊಡಗಿನ ಅಳಿಯರಾಗಿದ್ದಾರೆ.

ವಿವಾಹಕ್ಕೆ ಸಚಿವರ ದಂಡು

ವಿವಾಹಕ್ಕೆ ಸಚಿವರ ದಂಡು

ಕಾರ್ತಿಕ್ ಗೌಡ ಅವರ ವಿವಾಹ ಮಹೋತ್ಸವಕ್ಕೆ ಕೇಂದ್ರ ಸಚಿವ ಪೊನ್ನುರಾಧಾಕೃಷ್ಣ ಅವರು ಗುರುವಾರ ಭೇಟಿ ನೀಡಿ ವಧುವರರನ್ನು ಆಶೀರ್ವದಿಸಿದರು. ಶುಕ್ರವಾರದ ವಿವಾಹ ಮಹೋತ್ಸವಕ್ಕೆ ಕೇಂದ್ರ ಸಚಿವರಾದ ವೆಂಕಯ್ಯನಾಯ್ಡ್ಡು, ಅನಂತಕುಮಾರ್, ಮೇನಕಾ ಗಾಂಧಿ ಸೇರಿದಂತೆ ಅಪಾರ ಗಣ್ಯರು ಆಗಮಿಸಿದ್ದಾರೆ.

ರಾಜನಾಥ್ ಸಿಂಗ್ ಹಾಗೂ ಎಲ್ .ಕೆ.ಆಡ್ವಾನಿ ಅವರು ಕೂಡ ಬರುವ ಸಾಧ್ಯತೆಯಿತ್ತಾದರೂ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಮೂರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ ಅವರು ಬರುವ ನಿರೀಕ್ಷೆ ಕಡಿಮೆ ಎಂದು ಡಿ.ವಿ.ಸದಾನಂದಗೌಡ ಅವರು ತಿಳಿಸಿದ್ದಾರೆ.

ಗಣ್ಯರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

ಗಣ್ಯರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

ಈಗಾಗಲೇ ವಿವಾಹ ಮಹೋತ್ಸವಕ್ಕೆ ಆಗಮಿಸುವ 5 ಸಾವಿರ ಗಣ್ಯರಿಗೆ ರೈತ ಸಹಕಾರ ಭವನದಲ್ಲಿ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನ ನಿಲುಗಡೆಗೆ ರೈತ ಸಹಕಾರ ಭವನದ ಪಕ್ಕದಲ್ಲಿ ಮತ್ತು ಗೂಂಡೂರಾವ್ ಜಾತ್ರಾ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಪಾರ ಸಂಖ್ಯೆಯಲ್ಲಿ ಸಚಿವರು ಹಾಗೂ ಗಣ್ಯರು ಶುಕ್ರವಾರ ಆಗಮಿಸುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.


English summary
Kushalnagar: Union Minister for Law D V Sadananda Gowda’s son Karthik Gowda's is now married with K Nanaiah's daughter Swathi in rich Kodava rituals. Raitha Sahakara Bhavana is decorated with flowers for the marriage event on Oct 29 and 30, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X