ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: 2018ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ 150 ಸ್ಥಾನ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 15: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿರುವುದು ಗೊತ್ತಿರುವ ವಿಚಾರ. ಭಾರತದ ನಾನಾ ರಾಜ್ಯಗಳಲ್ಲಿ ಈಗಾಗಲೇ ಕೇಸರಿ ಧ್ವಜ ಹಾರಾಡುತ್ತಿದ್ದು, ಕರ್ನಾಟಕದಲ್ಲಿ ಭರ್ಜರಿ ಗೆಲುವು ದಾಖಲಿಸುವ ಆಲೋಚನೆಯಲ್ಲಿದೆ. ಈ ಹಿಂದೆ ಇಲ್ಲಿ ಚುಕ್ಕಾಣಿ ಹಿಡಿದಿದ್ದ ಕೇಸರಿ ಪಕ್ಷ, ಮತ್ತೆ ಗೆಲ್ಲುವ ಹವಣಿಕೆಯಲ್ಲಿದೆ. [ಕರ್ನಾಟಕದಲ್ಲಿ ಬಿಜೆಪಿ ತ್ವರಿತವಾಗಿ ಮಾಡಬೇಕಿರುವ 7 ಸಂಗತಿ]

ಕೆಲ ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡಿ, ನರೇಂದ್ರ ಮೋದಿ ಹಾಗೂ ಅಮಿತ್ ಶಾ ವರ್ಚಸ್ಸಿನಿಂದ ರಾಜ್ಯದಲ್ಲಿ ಬಿಜೆಪಿ ಗೆಲ್ಲಲಿದೆ. ನಾನು ನೆಪಕ್ಕೆ ಮಾತ್ರ ಎಂದಿದ್ದರು. ಇಡೀ ಭಾರತದಲ್ಲಿರುವ ಬಿಜೆಪಿ ಅಲೆ ಮತ್ತು ಪಕ್ಷದ ಆಂತರಿಕ ಸಮೀಕ್ಷೆ ಪ್ರಕಾರ, 2018ರ ವಿಧಾನಸಭೆ ಚುನಾವಣೆಯಲ್ಲಿ 150-160 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂಬ ಸೂಚನೆ ಸಿಕ್ಕಿದೆಯಂತೆ.[ಪ್ರಧಾನಿ ಮೋದಿ 'ಅಶ್ವಮೇಧ'ದ ಕುದುರೆಯನ್ನು ನಾವು ಕಟ್ಟಿ ಹಾಕುತ್ತೇವೆ]

In Karnataka BJP will win 129-150 seats says survey

ಕರ್ನಾಟಕದ ಒಟ್ಟು 224 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ ಸಮೀಕ್ಷೆ ಸೂಚಿಸುವಂತೆ 150 ಸ್ಥಾನಗಳನ್ನು ಗೆಲ್ಲಲಿದೆ. ಈ ಲೆಕ್ಕಾಚಾರದಲ್ಲಿ ಏನೇ ಹೆಚ್ಚು ಕಡಿಮೆ ಆದರೂ ಕನಿಷ್ಠ 129 ಸೀಟುಗಳನ್ನು ಬಿಜೆಪಿ ಪಡೆಯಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಅಧಿಕಾರ ಹಿಡಿಯಲು ಇಷ್ಟು ಪ್ರಮಾಣದ ಸ್ಥಾನ ಗೆದ್ದರೆ ಸಾಕು.

In Karnataka BJP will win 129-150 seats says survey

ಇನ್ನು ಕಾಂಗ್ರೆಸ್ 50, ಜೆಡಿಎಸ್ 22 ಇತರ ಸ್ಥಾನಗಳಲ್ಲಿ ಪಕ್ಷೇತರರು ಗೆಲ್ಲುವ ಸಾಧ್ಯತೆಗಳಿವೆಯಂತೆ. ಸನ್ನಿವೇಶ ಹಾಗಾದರೆ ಇತರರ ಬೆಂಬಲ ಇಲ್ಲದೆ ಸ್ವತಂತ್ರವಾಗಿ ಬಿಜೆಪಿ ಸರಕಾರ ರಚನೆ ಮಾಡಲಿದೆ. 2008ರ ಚುನಾವಣೆ ನಂತರ ಪಕ್ಷದಲ್ಲಿ ಭಿನ್ನಮತ, ಅಸಮಾಧಾನ ಬುಗಿಲೆದ್ದಿತ್ತು. ಈ ಬಾರಿ ಹಾಗಾಗದಂತೆ ಎಚ್ಚರದಿಂದ ಇರುವ ಭರವಸೆ ನೀಡಿದ್ದಾರೆ ರಾಜ್ಯ ಬಿಜೆಪಿ ನಾಯಕರು.[ಸಿದ್ರಾಮಯ್ಯನವರೇ ಕಾಂಗ್ರೆಸ್ ಗೆ ಅಧಿಕಾರ ಭಾಗ್ಯ ಕೊಡಿಸ್ತೀರಾ?]

ಪಕ್ಷದ ವರಿಷ್ಠರು ಈಗಾಗಲೇ ರಾಜ್ಯದ ನಾಯಕರಿಗೆ ಎಚ್ಚರಿಕೆ ನೀಡಿದ್ದು, ಒಗ್ಗಟ್ಟಾಗಿದ್ದು ಪಕ್ಷ ಗೆಲ್ಲುವಂತೆ ಸೂಚನೆ ನೀಡಿದ್ದಾರೆ.

English summary
Looking at the BJP wave in the nation and an internal survey conducted by the BJP, the party is looking to bag anything between 150 and 160 seats in the Karnataka assembly elections of 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X