ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಅಧಿಕಾರಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದಕ್ಕೆ

|
Google Oneindia Kannada News

ಬೆಂಗಳೂರು, ಮಾ. 26: ದಕ್ಷ ಅಧಿಕಾರಿ ಡಿ.ಕೆ. ರವಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಐಎಎಸ್ ಅಧಿಕಾರಿಯೊಬ್ಬರ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈ ಕೋರ್ಟ್ ಏಪ್ರಿಲ್ 6 ಕ್ಕೆ ಮುಂದೂಡಿದೆ.

ನ್ಯಾಯಮೂರ್ತಿ ಅಬ್ದುಲ್ ನಜೀರ್ ವಿಚಾರಣೆಯನ್ನು ಗುರುವಾರ ಮುಂದಕ್ಕೆ ಹಾಕಿದ್ದಾರೆ. ಡಿ.ಕೆ. ರವಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಬಹಿರಂಗ ಮಾಡಬಾರದು. ಮಹಿಳಾ ಅಧಿಕಾರಿ ಬಗ್ಗೆ ಕೇಳಿಬಂದಿರುವ ಊಹಾಪೋಹಗಳ ಕುರಿತು ಸರ್ಕಾರ ಅಥವಾ ಯಾವುದೇ ಅಧಿಕಾರಿಗಳು ಹೇಳಿಕೆ ನೀಡಬಾರದು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದಕ್ಕೆ ಹೋಗಿದೆ.[ಪೊಲೀಸರ ವಿರುದ್ದ ಡಿಕೆ ರವಿ ಮಾವ ಸಿಡಿಸಿದ ಹೊಸ ಬಾಂಬ್]

dk ravi

ಮಹಿಳಾ ಅಧಿಕಾರಿ ಹೆಸರು ಕೇಳಿ ಬಂದ ಸಂದರ್ಭ ಯಾವ ಮಾಧ್ಯಮಗಳಲ್ಲೂ ಅವರ ಹೆಸರು ಪ್ರಕಟವಾಗಬಾರದು ಎಂದು ಆಕೆಯ ಪತಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆದುಕೊಂಡಿದ್ದರು. [ಮೃತ ಡಿಕೆ ರವಿಯ ಖಾಸಗಿ ವಿಷಯಗಳು ಬಹಿರಂಗ]

ಮಾರ್ಚ್ 16 ರಂದು ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಶವ ಬೆಂಗಳೂರಿನ ಕೋರಮಂಗಲ ಬಳಿಯ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿಯಲ್ಲಿ ಪತ್ತೆಯಾಗಿದ್ದು. ನಂತರ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂಬ ಕೂಗು ಕೇಳಿಬಂದಿತ್ತು. ಜನರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ತನಿಖೆಯನ್ನು ಅಂತೂ ಇಂತೂ ಸಿಬಿಐಗೆ ನೀಡಿತ್ತು.

English summary
The Karnataka High Court adjourned hearing on a petition seeking a restraint on making the probe details into the death of D K Ravi public to April 6. Justice Abdul Nazeer who is hearing the petition will take up the matter on April 6. A petition was filed seeking a restraint on the government from making a statement on the D K Ravi case on the floor of the house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X