ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಸ್ ಸುಬ್ಬಲಕ್ಷ್ಮೀ ಗಾನ ಸುಧೆ-ಶ್ರೀರಂಗ ಪುರವಿಹಾರ

|
Google Oneindia Kannada News

ತುಮಕೂರು, ಮಾ. 27: ಕುಟುಂಬದಲ್ಲಿ ಮಡುಗಟ್ಟಿದ ದುಃಖ ಇನ್ನು ಕಡಿಮೆಯಾಗಿಲ್ಲ. ದಕ್ಷ ಅಧಿಕಾರಿ ಸಾವನ್ನಪ್ಪಿ 11 ದಿನ ಕಳೆದಿದೆ. ಡಿ.ಕೆ. ರವಿ ಹುಟ್ಟೂರು ದೊಡ್ಡಕೊಪ್ಪಲಿನಲ್ಲಿ ಪುಣ್ಯತಿಥಿ ಕಾರ್ಯಕ್ರಮಗಳು ನಡೆದವು.

ಡಿ.ಕೆ. ರವಿ 11ನೇ ದಿನದ ಕಾರ್ಯಗಳು ಅವರ ಹುಟ್ಟೂರು ದೊಡ್ಡಕೊಪ್ಪಲಿನಲ್ಲಿ ಶುಕ್ರವಾರ ಬೆಳಗ್ಗೆ ಆರಂಭವಾಗಿದೆ. ವೈಕುಂಠ ಸಮಾರಾಧನೆಯಲ್ಲಿ ಕುಟುಂಬ ಸದಸ್ಯರೆಲ್ಲರೂ ಭಾರವಾದ ಮನಸ್ಸಿನಿಂದಲೇ ಭಾಗವಹಿಸಿದ್ದರು.[ಈ ಸಾವು ನ್ಯಾಯನಾ? ಬೇಕೇ ಬೇಕು ನ್ಯಾಯ ಬೇಕು]

ravi

ಒಕ್ಕಲಿಗ ವಿಧಿವಿಧಾನಗಳಂತೆ ಪುಣ್ಯತಿಥಿ ಕಾರ್ಯಗಳು ನಡೆದವು. ರವಿ ತಾಯಿ ಮತ್ತು ಹೆಂಡತಿ ಕುಸುಮಾ ಅಳುತ್ತಲೇ ಸಮಾಧಿಗೆ ನಮನ ಸಲ್ಲಿಸಿದರು. ಅಣ್ಣ ರಮೇಶ್, ಮಾವ ಹನುಮಂತರಾಯಪ್ಪ ಭಾಗವಹಿಸಿದ್ದರು.[ರವಿ ತವರು ದೊಡ್ಡಕೊಪ್ಪಲು ಗ್ರಾಮಕ್ಕೆ ದಾರಿ]

ರವಿ ತಾಯಿ ಗೌರಮ್ಮ ಅವರ ಆಕ್ರಂದನ , ಮತ್ತೆ ಮತ್ತೆ ಮಗನನ್ನು ನೆನೆದು ಅಳುತ್ತಿದ್ದ ರೀತಿ ವೈಕುಂಠ ಸಮಾರಾಧನೆಯ ವಾತಾವರಣದ ದುಃಖವನ್ನು ಮತ್ತಷ್ಟು ಹೆಚ್ಚಿಸಿತ್ತು. ಕುಟುಂಬದ ಸದಸ್ಯರೆಲ್ಲ ಒಂದಾಗಿ ಡಿಕೆ ರವಿ ಸಮಾಧಿಗೆ ಪೂಜೆ ಸಲ್ಲಿಸಿದರು.

ಅಪಾರ ಅಭಿಮಾನಿಗಳು ಮತ್ತೆ ಮತ್ತೆ ರವಿ ಅವರ ಹೋರಾಟಗಳನ್ನು, ಶಿಸ್ತಿನ ಕ್ರಮಗಳನ್ನು ನೆನೆದರು, ಕೋಲಾರದಿಂದ ಆಗಮಿಸಿದ್ದ ಜನರು ರವಿಯವರ ಸಮಾಧಿ ಮುಂದೆ ಕಣ್ಣೀರಿಡುತ್ತಿದ್ದ ದೃಶ್ಯ ಎಂಥವರ ಹೃದಯವನ್ನು ಕಲಕುವಂತಿತ್ತು.[ವೈತರಣಿಯ ದಾಟುವುದೆ ಡಿಕೆ ರವಿಯ ಆತ್ಮ?]

ಕೋಲಾರ ಗೆಳೆಯರ ಬಳಗದಿಂದ ಉಚಿತ ಆಂಬುಲೆನ್ಸ್
ಕೋಲಾರ ಗೆಳೆಯರ ಬಳಗದಿಂದ ಉಚಿತ ಆಂಬುಲೆನ್ಸ್ ಸೇವೆ ಒದಗಿಸಲು ತೀರ್ಮಾನ ಮಾಡಿದರು. ಹರಿಕಥೆ, ರಕ್ತದಾನ ಶಿಬಿರದ ಮೂಲಕವು ಅಗಲಿದ ರವಿಯವರನ್ನು ನೆನಪು ಮಾಡಿಕೊಳ್ಳಲಾಯಿತು. ಡಿಕೆ ರವಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈ ಗೊಳ್ಳಬೇಕು ಅದು ಸಾಧ್ಯವಾಗದಿದ್ದರೆ ನಾವೇ ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು ಜನರು ಆಕ್ರೋಶಭರಿತರಾಗಿಯೇ ಹೇಳಿದರು.[ಡಿಕೆ ರವಿ ತಾಯಿ ಗೌರಮ್ಮನವರ ಸಂದರ್ಶನ]

ಸುಮಾರು ಆರು ಸಾವಿರಕ್ಕೂ ಅಧಿಕ ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಜಿಲ್ಲಾಡಳಿತ ಭದ್ರತೆ ದೃಷ್ಟಿಯಿಂದ ಒಬ್ಬ ಡಿವೈಎಸ್ಪಿ ಸೇರಿದಂತೆ ಮೂರು ತಂಡದಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಒಂದು ಕೆಎಸ್ ಆರ್ ಪಿ ತುಕಡಿಯೂ ಭದ್ರತೆಯಲ್ಲಿ ಜವಾಬ್ದಾರಿ ಹೊತ್ತುಕೊಂಡಿತ್ತು.[ಡಿಕೆ ರವಿ ಮುದ್ದಿನ ನಾಯಿ ರೋದನಕ್ಕಿಲ್ಲ ಉತ್ತರ]

ಈ ನಿಮಿತ್ತ ಒನ್ ಇಂಡಿಯಾ ಕನ್ನಡ ಸಾದರಪಡಿಸುವ ಭಾರತ ರತ್ನ ಎಂಎಸ್ ಸುಬ್ಬಲಕ್ಷ್ಮಿ ಅವರ ಗಾನಸುಧೆ-ಶ್ರೀರಂಗ ಪುರವಿಹಾರ

English summary
IAS Officer D.K.Ravi who has passed away on 16 march. The 11th day religious programme held in Doddakoppalu,Tumakuru on Friday, march 27. D.K. Ravi Family members and thousands of people say last tribute to Officer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X