ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಂಬರೀಶ್ ಅವರೇ ನಾನು ನಿಮ್ಮ ಫ್ಯಾನ್'

|
Google Oneindia Kannada News

ಬೆಳಗಾವಿ, ಜು. 01 : ಮುಂಗಾರು ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ರೈತರ ಸಮಸ್ಯೆಗಳ ಬಗ್ಗೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ವಿವರವಾದ ಚರ್ಚೆ ನಡೆಯಿತು. ಇದರ ನಡುವೆಯೇ ಕೆಲವು ಸ್ವಾರಸ್ಯಕರೆ ಚರ್ಚೆಗಳು ನಡೆದವು. ನಿಜವಾದ ರೈತನಾರು? ಎಂಬ ಬಗ್ಗೆ ಸಿದ್ದರಾಮಯ್ಯ ಚರ್ಚೆ ಮಾಡಿದರು, ವಿಪಕ್ಷ ನಾಯಕರನ್ನು ಛೇಡಿಸಿದರು. ಆದರೆ, ಕುಮಾರಸ್ವಾಮಿ ಅವರು ಮಾತ್ರ ಸೋಲೊಪ್ಪಿಕೊಳ್ಳಲಿಲ್ಲ.

ಎಚ್ಡಿಕೆ, ಶೆಟ್ಟರ್‌ ಎಲ್ಲಾ ಎಲ್ಲಿ ನೇಗಿಲು ಹಿಡಿದಿದ್ದಾರೆ? : ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಸರ್ಕಾರದ ಕೊಟ್ಟ ಉತ್ತರದಿಂದ ತೃಪ್ತರಾದ ಪ್ರತಿಪಕ್ಷಗಳು, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದವು. ಇದು ಯಾವು ನಿಜವಾದ ರೈತರು? ಎಂಬ ಚರ್ಚೆಯನ್ನು ಹುಟ್ಟುಹಾಕಿತು. [ರೈತರ ಸಮಸ್ಯೆ, ಸಿದ್ದರಾಮಯ್ಯ ಕೊಟ್ಟ ಉತ್ತರ]

ಮೊದಲು ಮಾತು ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಸಭಾಧ್ಯಕ್ಷರೇ ನಿಮಗೆ ಗೊತ್ತಿರಬಹುದು. ನಾನು ಕಾನೂನು ಪದವಿ ಓದೋವರೆಗೂ ಊರಿಗೆ ಹೋದಾಗ ನಮ್ಮಪ್ಪ ಬೇಸಾಯ ಮಾಡಿಸ್ತಿದ್ರು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ನೀವು ಲಾ ಓದೋವಾಗ, ನಾನು ಲಾ ಮುಗ್ಸಿ ಪ್ರಾಕ್ಟೀಸ್‌ ಶುರು ಮಾಡಿದ ಮೇಲೂ ಬೇಸಾಯ ಮಾಡ್ತಿದ್ದೆ' ಎಂದು ಹೇಳಿದರು. [ಮಂಗಳವಾರದ ಕಲಾಪದಲ್ಲಿ ಏನೇನಾಯ್ತು?]

suvarna vidhana soudha

'ಸಭಾಧ್ಯಕ್ಷರೇ ನಿಮಗೆ ರೈತರ ಕಷ್ಟ ಗೊತ್ತಾಗುತ್ತೆ. ಕುಮಾರಸ್ವಾಮಿ, ಜಗದೀಶ್‌ ಶೆಟ್ಟರ್‌ ಎಲ್ಲಾ ಎಲ್ಲಿ ನೇಗಿಲು ಹಿಡಿದಿದ್ದಾರೆ? ಎಂದು ಸಿದ್ದರಾಮಯ್ಯ ಛೇಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಉಭಯ ನಾಯಕರು ಕೃಷಿ ಮಾಡಿದ್ದೇವೆ ಎಂದರು.

ಶೆಟ್ಟರ್ ಮಾತಿಗೆ ಉತ್ತರ ಕೊಟ್ಟ ಸಿದ್ದರಾಮಯ್ಯ ಅವರು, 'ಶೆಟ್ರೆ, ನೀವು ವ್ಯಾಪಾರ ಮಾಡಿದವ್ರು. ಎಲ್ಲಿ ನೇಗಿಲು ಹಿಡಿದಿದ್ರಿ? ಎಲ್ಲಿ ಬೇಸಾಯ ಮಾಡಿದ್ರಿ?' ಎಂದು ಸಿದ್ದರಾಮಯ್ಯ ಎಂದು ಮರುಪ್ರಶ್ನೆ ಹಾಕಿದರು. 'ನಾನೂ ಕೃಷಿ ಮಾಡಿದ್ದೇನೆ' ಎಂದು ಶೆಟ್ಟರ್‌ ಸುಮ್ಮನೆ ಕುಳಿತರು.

ಕುಮಾರಸ್ವಾಮಿ ಸುಮ್ಮನಾಗಲಿಲ್ಲ : ಸಿದ್ದರಾಮಯ್ಯ ಅವರ ಮಾತಿನಿಂದ ಕುಮಾರಸ್ವಾಮಿ ಅವರು ಸಮಾಧಾನವಾಗಲಿಲ್ಲ. ನಾನೂ ಕೃಷಿಕನೇ, ಎಲ್ಲಾ ಮಾಡಿಯೇ ಇಲ್ಲಿಗೆ ಬಂದಿದ್ದು ಎಂದಾಗ, ಚರ್ಚೆ ಗಂಭೀರ ಸ್ವರೂಪ ಪಡೆಯುತ್ತಿದೆ ಎಂದು ಸಿದ್ದರಾಮಯ್ಯ ಸರಿಬಿಡಿ ಎಂದು ಒಪ್ಪಿಕೊಂಡರು.

'ಅಂಬರೀಶ್ ಅವರೇ ನಾನು ನಿಮ್ಮ ಫ್ಯಾನ್' : ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಮಂಗಳವಾರದ ಕಲಾಪದ ಸಂದರ್ಭದಲ್ಲಿ 'ಅಂಬರೀಶ್‌ ಅವರೇ, ನಾನು ನಿಮ್ಮ ದೊಡ್ಡ ಫ್ಯಾನ್‌. ನೀವು ಸಿನಿಮಾಗಳಲ್ಲಿ ಬಡವರ ಪರವಾಗಿ ಧ್ವನಿ ಎತ್ತುವುದು, ಹೋರಾಡುವ ಪಾತ್ರ ಮಾಡಿರುವುದನ್ನು ಮೆಚ್ಚಿಕೊಂಡಿದ್ದೇನೆ' ಎಂದು ಹೇಳಿದರು.

ಪರಿಷತ್ತಿನಲ್ಲಿ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಕುರಿತು ಚರ್ಚೆ ನಡೆಯುವಾಗ ಮಾತನಾಡಿದ ಈಶ್ವರಪ್ಪ ಅವರು, 'ನಾನು ನಿಮ್ಮ ದೊಡ್ಡ ಫ್ಯಾನ್‌ ವಸತಿ ಸಚಿವರಾಗಿ ಬಡವರ ಪರವಾಗಿ ಬದ್ಧತೆ ತೋರಿಸುವ ಮೂಲಕ ಬಡವರ ಪಾಲಿಗೆ ನಿಜವಾದ ಹೀರೋ ಆಗಿ' ಎಂದು ಕರೆ ನೀಡಿದರು.

ಈಶ್ವರಪ್ಪ ಮಾತಿಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ ಅವರು, 'ಅಂಬರೀಶ್‌ ಅವರ ನಾಗರಹಾವು ಚಿತ್ರದ ಪಾತ್ರಕ್ಕೆ ಫ್ಯಾನ್‌ ಆಗಿರಬೇಕು ಎಂದು ಈಶ್ವರಪ್ಪ ಅವರನ್ನು ಛೇಡಿಸಿದರು. ಇದಕ್ಕೆ ಉತ್ತರ ನೀಡಿದ ಈಶ್ವರಪ್ಪ, 'ಅಂಬರೀಶ್‌ ವಿಲನ್‌ ಅಥವಾ ಹೀರೋ ಯಾವುದೇ ಪಾತ್ರ ಮಾಡಿದರೂ ನಾನು ಅವರ ಫ್ಯಾನ್‌' ಎಂದರು.

English summary
12 days Karnataka Assembly monsoon session in Belagavi Suvarna vidhana soudha. Day 2, Tuesday, June 30, humorous discussion in assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X