ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯವಾಡ-ಹುಬ್ಬಳ್ಳಿ ನೂತನ ರೈಲಿನ ವೇಳಾಪಟ್ಟಿ

|
Google Oneindia Kannada News

ಕೊಪ್ಪಳ, ಜ.27 : ಕೊಪ್ಪಳ ಮಾರ್ಗವಾಗಿ ಸಂಚರಿಸುವ ವಿಜಯವಾಡ-ಹುಬ್ಬಳ್ಳಿ ನೂತನ ರೈಲಿಗೆ ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಪೂಜೆ ಸಲ್ಲಿಸಿದರು. ವಾರಕ್ಕೆ ಮೂರು ದಿನ ಓಡುತ್ತಿದ್ದ ಹುಬ್ಬಳ್ಳಿ-ವಿಜಯವಾಡ ಎಕ್ಸಪ್ರೆಸ್ ರೈಲು ಮಂಗಳವಾರದಿಂದ ಪ್ರತಿನಿತ್ಯ ಸಂಚರಿಸಲಿದೆ.

ನೂತನ ರೈಲಿಗೆ ಪೂಜೆ ಸಲ್ಲಿಸಿ ಮಾತನಾಡಿದ ಸಂಗಣ್ಣ ಕರಡಿ ಅವರು, ವಿಜಯವಾಡ-ಹುಬ್ಬಳ್ಳಿ ನೂತನ ರೈಲು ಪ್ರಾರಂಭದಿಂದ ಈ ಭಾಗದ ಸಾಮಾನ್ಯ ಬಡ ಜನರಿಗೆ ತುಂಬಾ ಅನುಕೂಲವಾಗಿದೆ. ಇಲ್ಲಿನ ಜನ ಹುಬ್ಬಳ್ಳಿ, ಬಳ್ಳಾರಿ, ಗದಗ, ಗುಂತಕಲ್ ಸೇರಿದಂತೆ ವಿವಿಧ ನಗರಗಳಿಗೆ ಸಂಚರಿಸಲು ಸಹಾಯಕವಾಗಿದೆ ಎಂದರು.

 train

ಭಾಗ್ಯನಗರ ಮತ್ತು ಕಿನ್ನಾಳ ಮಾರ್ಗದ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಬರುವ ಮಾರ್ಚ್ ತಿಂಗಳಲ್ಲಿ ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ ಇದಕ್ಕಾಗಿ ಈಗಾಗಲೆ ರಾಜ್ಯ ಸರ್ಕಾರ ತನ್ನ ಪಾಲಿನ 5 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿದೆ ಎಂದು ಸಂಸದರು ಹೇಳಿದರು. [ರೈಲ್ವೆ ಮಾಹಿತಿ ಪಡೆಯಲು ಹೊಸ ಸಹಾಯವಾಣಿ]

ರೈಲಿನ ವೇಳಾಪಟ್ಟಿ ಹೀಗಿದೆ : ಪ್ರತಿನಿತ್ಯ ಸಂಚರಿಸುವ ಈ ರೈಲು (17225) ವಿಜಯವಾಡದಿಂದ ರಾತ್ರಿ 7.45 ಕ್ಕೆ ಹೊರಟು, ಬೆಳಗ್ಗೆ 5.40 ಕ್ಕೆ ಗುಂತಕಲ್, 6.53 ಕ್ಕೆ ಬಳ್ಳಾರಿ, 7-30 ಕ್ಕೆ ತೋರಣಗಲ್, 8.15 ಕ್ಕೆ ಹೊಸಪೇಟೆ, 8.35 ಕ್ಕೆ ಮುನಿರಾಬಾದ್, 8.55 ಕ್ಕೆ ಕೊಪ್ಪಳ, 10.08 ಕ್ಕೆ ಗದಗ, ಬೆಳಗ್ಗೆ 11.20 ಕ್ಕೆ ಹುಬ್ಬಳ್ಳಿ ತಲುಪಲಿದೆ. [ಹುಬ್ಬಳ್ಳಿ-ವಿಜಯವಾಡ ರೈಲು ನಿತ್ಯ ಸಂಚಾರ]

ಪ್ರತಿನಿತ್ಯ ಮಧ್ಯಾಹ್ನ 1.30 ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 17226 ಮಧ್ಯಾಹ್ನ 2 ಗಂಟೆಗೆ ಅಣ್ಣಿಗೇರಿ, 2.25 ಕ್ಕೆ ಗದಗ, 3.30 ಕ್ಕೆ ಕೊಪ್ಪಳ, 3.53 ಕ್ಕೆ ಮುನಿರಾಬಾದ್, 04.05 ಕ್ಕೆ ಹೊಸಪೇಟೆ, 04.45 ಕ್ಕೆ ತೋರಟಗಲ್, 05.25 ಕ್ಕೆ ಬಳ್ಳಾರಿ, 06.35 ಕ್ಕೆ ಗುಂತಕಲ್, ಬೆಳಗ್ಗೆ 05.15 ಕ್ಕೆ ವಿಜಯವಾಡ ತಲುಪಲಿದೆ.

English summary
Hubli-Vijayawada daily train service begins on Tuesday. Koppal MP Sanganna A. Karadi (BJP) welcomes train in Koppal railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X