ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿಯಲ್ಲಿ ಸದ್ಯದಲ್ಲೇ ಸ್ಮಾರ್ಟ್ ಸಿಟಿ ಸಹಾಯವಾಣಿ

By Vanitha
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್, 03 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗೆ ಆಯ್ಕೆಯಾಗಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳನ್ನು ದೇಶದಲ್ಲಿಯೇ ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ನಗರದಲ್ಲಿ ಸ್ಮಾರ್ಟ್ ಸಿಟಿ ಸಹಾಯವಾಣಿ ಆರಂಭಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ನಗರದಲ್ಲಿ ಅಕ್ಟೋಬರ್ 1ರ ಗುರುವಾರದಂದು ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್, ಬಿವಿಬಿ ಎಂಜಿನಿಯರ್ ಕಾಲೇಜು ಹಾಗೂ ದೇಶಪಾಂಡೆ ಫೌಂಡೇಶನ್ ಸಹಕಾರದಿಂದ 24 ಗಂಟೆಗಳ ನಿರಂತರ ಸೇವೆಯ ಸಹಾಯವಾಣಿಯನ್ನು ಆರಂಭಿಸಲಾಗುತ್ತಿದ್ದು, ಇದಕ್ಕಾಗಿ ಕಿಯೋನಿಕ್ಸ್ ನಿಂದ 9 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.[ಸ್ಮಾರ್ಟ್ ಸಿಟಿ : ಕರ್ನಾಟಕಕ್ಕೆ 6 ಮಿಕ್ಕ ರಾಜ್ಯಕ್ಕೆ ಎಷ್ಟು?]

ಈ ಅವಳಿ ನಗರಗಳ ಹೆಸರನ್ನು ಮೊದಲ 20 ನಗರಗಳ ಪಟ್ಟಿಯಲ್ಲಿ ಇರುವಂತೆ ಮಾಡಲು ಸಾಕಷ್ಟು ಶ್ರಮಿಸಲಾಗುವುದು. ಇದಕ್ಕೆ ಈ ಸಹಾಯವಾಣಿ ಸಹಾಯವಾಗಲಿದ್ದು, ಆಯ್ಕೆಯಾದ ಸಿಬ್ಬಂದಿಗಳು 3 ಪಾಳಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಜನರ ಕುಂದು ಕೊರತೆಗಳನ್ನು ನೆರವೇರಿಸಲು ಇದೊಂದು ಮೈಲಿಗಲ್ಲಾಗಲಿದೆ ಎಂದರು..

ನಗರದ ಜನತೆಗೆ ಸ್ಮಾರ್ಟ್ ಸಿಟಿಯ ಸಹಾಯವಾಣಿ ಕುರಿತು ಜಾಗೃತಿ ಮೂಡಿಸಲು ಈಗಾಗಲೇ ಸುಮಾರು 2 ಲಕ್ಷ ಅರ್ಜಿಗಳನ್ನು ವಿತರಿಸಲಾಗಿದೆ. ಸದ್ಯ ಜನರಿಂದ ಕೇವಲ 50ಸಾವಿರ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಜಿಗಳನ್ನು ಸ್ವೀಕರಿಸಲು ಮುಂದಾಗಲಿದ್ದೇವೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಭರವಸೆ ನೀಡಿದರು.

English summary
Dharwar DC Announced Helpline for Hubballi-Dharwar Smart City Project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X