ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನಿ ಮೇಕೆದಾಟು, ಸಂಗಮ ಸುತ್ತಿ ಬರೋಣ

By Mahesh
|
Google Oneindia Kannada News

ಬೆಂಗಳೂರು, ಏ.17: ಬೆಂಗಳೂರಿಗೆ ಸಮೀಪವಿರುವ ವಿಹಾರ ಸ್ಥಳ ಮೇಕೆದಾಟು ನೋಡಲು ಶನಿವಾರ ಅಥವಾ ಭಾನುವಾರ ಹೋಗಿ ಬರಲು ಅಡ್ಡಿ ಇಲ್ಲ. ಒಂದು ದಿನದ ಜಾಲಿ ಟ್ರಿಪ್ ಗೆ ಹೇಳಿ ಮಾಡಿಸಿದ ಸ್ಥಳ. ಏ.18 ಕರ್ನಾಟಕ ಬಂದ್ ಬೇರೆ ಇದೆ. ಕನ್ನಡ ಪರ ಕಾಳಜಿ ನಿಮಗೂ ಇದ್ದರೆ ನಿಮ್ಮ ಕಾರಿಗೆ ಕನ್ನಡ ಬಾವುಟ ಸಿಕ್ಕಿಸಿಕೊಂಡು ಸಂಜೆ ತನಕ ಬಂದ್ ಗೆ ಬೆಂಬಲ ನೀಡಬಹುದು.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಗಲಿದೆ. ಸ್ವಂತ ಕಾರು, ವಾಹನ ಇರುವವರು ಮೇಕೆದಾಟು ದಾರಿ ಹಿಡಿಯಬಹುದ್. ಜೂಮ್ ಕಾರಿನ ಬಾಡಿಗೆ ನಾಳೆ ಸಿಕ್ಕರೂ ಸಿಗಬಹುದು. ಬೆಂಗಳೂರಿನಿಂದ ಸುಮಾರು 90 ಕಿ.ಮೀ ದೂರದಲ್ಲಿದೆ

ಮೇಕೆ ಹಾರುವ ಸ್ಥಳ ಈಗ ವಿವಾದ ಕೇಂದ್ರ ಬಿಂದುವಾಗಿ ಎರಡು ರಾಜ್ಯಗಳ ನಡುವೆ ಬೆಂಕಿ ಹತ್ತಿಸಿದೆ. ಬಂಡೆಗಳ ನಡುವೆ ಅರ್ಕಾವತಿ ಹಾಗೂ ಕಾವೇರಿ ಸಂಗಮ ಸ್ಥಳಕ್ಕೂ ಹೋಗಬಹುದು. ಚುಂಚಿ ಫಾಲ್ಸ್ ನೋಡಬಹುದು. ಬೇಸಿಗೆಯಲ್ಲಿ ನೀರು ಕಮ್ಮಿ ಎನಿಸಿದರು. ಬೇಸರವಾಗುವುದಿಲ್ಲ. [ಕರ್ನಾಟಕ ಬಂದ್: ಸಾರ್ವಜನಿಕರಿಗೆ ಗೈಡ್ ಲೈನ್ಸ್ ]

ಬೆಂಗಳೂರಿನಿಂದ ಕನಕಪುರ, ಸಾತನೂರು ಮಾರ್ಗವಾಗಿ ಮೇಕೆದಾಟು ತಲುಪಬಹುದು. ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸಿಟಿ ಮಾರ್ಕೆಟ್ ನಿಂದ ಕನಕಪುರ ತನಕ ಬಸ್ ಸೌಕರ್ಯಗಳಿವೆ. ಸಂಗಮಕ್ಕೆ ನೇರ ಬಸ್ ಸಿಗುವುದು ಕಷ್ಟ. ನಗರದಿಂದ ಸುಮಾರು 2 ಗಂಟೆಗಳ ಅವಧಿ ಪ್ರಯಾಣ.

ಕನಕಪುರದಿಂದ ಎಡಕ್ಕೆ ತಿರುಗಿ ಮೇಕೆದಾಟು ಹಾದಿ ಹಿಡಿಯಬಹುದು. ಸಂಗಮಕ್ಕೂ ಮೊದಲು 5 ಕಿ.ಮೀಗೆ ಮುಂಚೆ ಎಡಕ್ಕೆ ತಿರುಗಿದರೆ ಚುಂಚಿ ಫಾಲ್ಸ್(70 ಅಡಿ ಎತ್ತರ) ಸಿಗುತ್ತದೆ. ಮತ್ತೊಂದು ಹಾದಿ ಗೂಗಲ್ ಮ್ಯಾಪ್ ನಲ್ಲಿದೆ ಜಯನಗರದಿಂದ ಮಳವಳ್ಳಿ, ಬೆಳಕವಾಡಿ ಹಾದಿಯಲ್ಲಿ ಸಾಗಿ ಚಾಮರಾಜನಗರ ಜಿಲ್ಲೆಯ ಸುಂದರ ತಾಣ ಮೇಕೆದಾಟು ತಲುಪಬಹುದು.

ಸೂಕ್ತ ಕಾಲ: ಸುರಕ್ಷಿತ ದೃಷ್ಟಿಯಿಂದ ಬೇಸಿಗೆಯೇ ಉತ್ತಮ. ನೀರು ಕಡಿಮೆ ಇದ್ದರೂ ನೋಡಲಡ್ಡಿಯಿಲ್ಲ. ಮಳೆಗಾಲದಲ್ಲಿ ಸಂಗಮ ಸುಂದರ ಅದರೆ, ಇಳಿಜಾರು, ಜಾರುವ ಬಂಡೆಗಳು ಅಪಾಯಕ್ಕೆ ಆಹ್ವಾನ. ಅದರೆ, ಜನಾಭಿಪ್ರಾಯದಂತೆ ಆಗಸ್ಟ್ ನಿಂದ ಜನವರಿ ತನಕ ಹೋಗಿ ಬರಬಹುದು ನಂತರ ಬರೀ ಬಿಸಿಲು, ತಲೆಗೆ ಹ್ಯಾಟ್ ಇಲ್ಲದೆ ಓಡಾಟ ಕಷ್ಟಕರ.

ಊಟ , ತಿಂಡಿ: ಹೊಗೇನಕಲ್ ಫಾಲ್ಸ್ ಬಳಿ ಇರುವ ತೆಪ್ಪದ ಅಂಗಡಿಯಂತೆ ಇಲ್ಲಿ ಯಾವುದೇ ಸೂಕ್ತ ಆಹಾರ ವ್ಯವಸ್ಥೆ ಇಲ್ಲ. ಬೆಂಗಳೂರಿನಿಂದ ಊಟ ಕಟ್ಟಿಸಿಕೊಂಡು ಬರಬಹುದು ಅಥವಾ ಕನಕಪುರದಲ್ಲಿ ಹೋಟೆಲ್ ಗಳಿವೆ. [ಚಿತ್ರಗಳಲ್ಲಿ: ಸಂಗಮ ದಾಟಿ ಭೇಟಿ ನೀಡಿ ಮೇಕೆದಾಟು]

ಸ್ನಾಕ್ಸ್, ಕೂಲ್ ಡ್ರಿಂಕ್ಸ್ ಗೆ ಬೇಕಾದರೆ ಸಿಗುತ್ತದೆ. ಕೆಎಸ್ ಟಿಡಿಸಿ ಹೋಟೆಲ್ ನಂಬಿಕೊಂಡು ನೇರ ಬಂದರೆ ಕಾದಿದೆ ತೊಂದರೆ. ರೆಸಾರ್ಟ್ ಗಳ ಬೋರ್ಡ್ ಕಣ್ಣಿಗೆ ಬಿದ್ದರೂ ಹೀಗೆ ಬಂದು ಹಾಗೆ ಹೋಗಲು ಸಾಧ್ಯವಿಲ್ಲ. ಒಟ್ಟಾರೆ, ಮೇಕೆ ಹಾರುವ ಸ್ಥಳ ಎಷ್ಟು ಹಿರಿದಾಗಿದೆ ಎಂದು ನೋಡಲು ಒಮ್ಮೆ ಹೋಗಿ ಬನ್ನಿ.

English summary
Mekedatu is a location along Kaveri in Kanakapura Taluk, Ramanagara district, Karnataka. Sangama is the place where Arkavati merges with Kaveri.From this point, about 3.5 kilometers downstream, the river Kaveri flows through a deep and narrow gorge. Mekedatu' means 'goat's leap' in Kannada).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X