ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ ಲೈನ್ ನಲ್ಲಿ ಸಿಇಟಿ ಅರ್ಜಿ ತುಂಬುವುದು ಹೇಗೆ?

|
Google Oneindia Kannada News

ಬೆಂಗಳೂರು, ಜ. 30 : 2015ರ ಸಿಇಟಿ ಪರೀಕ್ಷೆ ನೋಂದಣಿ ಪ್ರಕ್ರಿಯೆಗೆ ಆನ್ ಲೈನ್ ಮೂಲಕ ಅವಕಾಶ ಒದಗಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ. ಜತೆಗೆ ಅಂತರ್ಜಾಲ ಸಂಪರ್ಕವಿಲ್ಲದಿದ್ದರೂ ಏನು ಮಾಡಬೇಕು ಎಂಬುದಕ್ಕೆ ಸರ್ಕಾರ ಉತ್ತರ ನೀಡಿದೆ.

ಸಂಪೂರ್ಣವಾಗಿ ಆಧುನೀಕರಣಕ್ಕೆ ಒಗ್ಗಿಕೊಳ್ಳುತ್ತಿರುವ ಸಿಇಟಿ ಪರೀಕ್ಷೆಯನ್ನು ಈ ಬಾರಿ ಮತ್ತಷ್ಟು ಸರಳ ಮಾಡಲು ಇಂಥ ಕ್ರಮ ತೆಗೆದುಕೊಳ್ಳಲಾಗಿದೆ. ಪಾಲಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಪ್ರಾಚಾರ್ಯರಿಗೂ ಈ ಬಗ್ಗೆ ತಿಳಿವಳಿಕೆ ಅಗತ್ಯವಾಗಿದೆ.[ಪಿಯುಸಿ ವಿದ್ಯಾರ್ಥಿಗಳ ಮಾಹಿತಿ ಆನ್ ಲೈನ್ ನಲ್ಲೇ ಲಭ್ಯ]

ಸಹಾಯವಾಣಿಯನ್ನು ತೆರೆಯಲಾಗಿದ್ದು 080-23460460ಗೆ (ಬೆಳಗ್ಗೆ 9.30ರಿ ಸಂಜೆ 6) ಸಂಪರ್ಕಿಸಬಹುದು. ಹಾಗಾದರೆ ಆನ್ ಲೈನ್ ಮೂಲಕ ಸಿಇಟಿ ಅರ್ಜಿ ಸಲ್ಲಿಕೆ ಹೇಗೆ? ಯಾವ ದಾಖಲೆಗಳನ್ನು ನೀಡಬೇಕು? ಗ್ರಾಮೀಣ ವಿದ್ಯಾರ್ಥಿಗಳಿಗೆ ಯಾವ ಸೂತ್ರ? ಎಂಬುದಕ್ಕೆಲ್ಲ ಇಲ್ಲಿದೆ ಉತ್ತರ.

ಅರ್ಜಿ ತುಂಬಲು ಇಲ್ಲಿ ಕ್ಲಿಕ್ ಮಾಡಿ

ಅಂತರ್ಜಾಲ ತಾಣಕ್ಕೆ ಲಾಗ್ ಇನ್ ಆಗಿ

ಅಂತರ್ಜಾಲ ತಾಣಕ್ಕೆ ಲಾಗ್ ಇನ್ ಆಗಿ

ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಅಂತರ್ಜಾಲ ತಾಣಕ್ಕೆ ಲಾಗ್ ಇನ್ ಆಗಿ. ಬಲತುದಿಯಲಲ್ಲಿ ಕಾಣುವ CET-2015 ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಈ ಬಾರಿಯ ಸಿಇಟಿ ನೋಂದಣಿ ಪುಟ ತೆರೆದುಕೊಳ್ಳುತ್ತದೆ.

ಅರ್ಜಿ ಪಡೆದುಕೊಳ್ಳಿ

ಅರ್ಜಿ ಪಡೆದುಕೊಳ್ಳಿ

ನಂತರ ಎಡಭಾಗದಲ್ಲಿ ಕಾಣುವ CET-2015 - UG Online Application ಎಂಬ ಐಕಾನನ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನಿಮಗೆ ಅರ್ಜಿ ನಮೂನೆ ದೊರೆಯಲಿದ್ದು ಹಿಂದೆ ಲಿಖಿತವಾಗಿ ನೀಡುತ್ತಿದ್ದ ಎಲ್ಲ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.

ಮೊಬೈಲ್ ಸಂಖ್ಯೆ ಇ ಮೇಲೆ ಕಡ್ಡಾಯ

ಮೊಬೈಲ್ ಸಂಖ್ಯೆ ಇ ಮೇಲೆ ಕಡ್ಡಾಯ

ದಾಖಲೆ ನೀಡುವ ವೇಳೆ ಮೊಬೈಲ್ ಸಂಖ್ಯೆ ಮತ್ತು ಇ ಮೇಲ್ ನೀಡುವುದು ಕಡ್ಡಾಯ. ನಿಮ್ಮ ಅರ್ಜಿಯ ಸಂಖ್ಯೆ ಮತ್ತು ಪಾಸ್ ವರ್ಡ್ ನ್ನು ಮೊಬೈಲ್ ಮತ್ತು ಇಮೇಲ್ ಗೆ ರವಾನಿಸಲಾಗುವುದು. ಇದನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ.

ಶುಲ್ಕ ಪಾವತಿ ಹೇಗೆ?

ಶುಲ್ಕ ಪಾವತಿ ಹೇಗೆ?

ಎಲ್ಲ ಮಾಹಿತಿಗಳನ್ನು ಸರಿಯಾಗಿ ನಮೂದಿಸಿದ ನಂತರ ನಿಮಗೆ ಹಣ ತುಂಬುವ ಚಲನ್ ದೊರೆಯುತ್ತದೆ. ಇದರ ಪ್ರಿಂಟ್ ತೆಗೆದುಕೊಳ್ಳುವ ಮುನ್ನ ಹಣ ತುಂಬುವ ಬ್ಯಾಂಕ್ ಹೆಸರು ಸರಿಯಾಗಿ ನಮೂದಿಸಬೇಕು. ನಂತರ ಪ್ರಿಂಟ್ ಔಟ್ ತೆಗೆದುಕೊಂಡು ಬ್ಯಾಂಕ್ ಮೂಲಕವೇ ಹಣ ಪಾವತಿಸಬೇಕು. ಇಲ್ಲಿ ಆನ್ ಲೈನ್ ಸಲ್ಲಿಕೆಗೆ ಅವಕಾಶವಿಲ್ಲ.

ಮಾಹಿತಿ ಭರ್ತಿ ಹೇಗೆ

ಮಾಹಿತಿ ಭರ್ತಿ ಹೇಗೆ

ಪುಟದಲ್ಲಿ ಕಾಣಿಸಿರುವಂತೆ ಒಂದೊಂದೆ ಮಾಹಿತಿಯನ್ನು ಭರ್ತಿ ಮಾಡುತ್ತ ಮುಂದುವರಿಯಬೇಕು. ಎಲ್ಲ ದಾಖಲೆಗಳನ್ನು ಇಟ್ಟುಕೊಂಡೇ ಕುಳಿತುಕೊಳ್ಳುವುದು ಉತ್ತಮ.

ಕಂಪ್ಯೂಟರ್ ಇಲ್ಲವಾದರೆ ಏನು ಮಾಡೋದು?

ಕಂಪ್ಯೂಟರ್ ಇಲ್ಲವಾದರೆ ಏನು ಮಾಡೋದು?

ಗ್ರಾಮೀಣ ಮಕ್ಕಳ ಹಿತಾಸಕ್ತಿ ಗಮನದಲ್ಲಿರಿಸಿಕೊಂಡಿರುವ ಸರ್ಕಾರ ಉಪನ್ಯಾಸಕರ ಮೂಲಕ ಅರ್ಜಿ ತುಂಬಿಸಿಕೊಳ್ಳಲಿದೆ. ಯಾವುದಕ್ಕೂ ಆನ್ ಲೈನ್ ಪ್ರಕ್ರಿಯೆ ಆರಂಭವಾದ ಮೇಲೆ ಸೂಕ್ತ ನಿರ್ದೇಶನ ನೀಡಲು ಪ್ರಾಧಿಕಾರ ತೀರ್ಮಾನಿಸಿದೆ.

ಮೊಬೈಲ್ ಬದಲಾಯಿಸಬೇಡಿ

ಮೊಬೈಲ್ ಬದಲಾಯಿಸಬೇಡಿ

ಸಿಇಟಿ ಸೀಟು ಹಂಚಿಕೆ ವರೆಗೆ ಅರ್ಜಿ ಸಲ್ಲಿಕೆ ವೇಳೆ ನೀಡಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಬದಲಾವಣೆ ಬೇಡ. ನಿಮ್ಮ ಇಮೇಲೆ ಮತ್ತು ಮೊಬೈಲ್ ಗೆ ರವಾನಿಸಿರುವ ಪಾಸ್ ವರ್ಡ್ ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯ.

English summary
Applications for CET 2015 that will hold the key to admission to various professional courses in the state, can be filled online from January 30. Here the steps to fill online application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X