ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ? ಏಕೆ?

By Mahesh
|
Google Oneindia Kannada News

ಮದುವೆ ಪ್ರಮಾಣ ಪತ್ರ, ವಯಸ್ಕ ಯುವಕ ಯುವತಿ ದಂಪತಿಗಳಾಗಿರುವುದಕ್ಕೆ ಸರ್ಕಾರದಿಂದ ಸಿಗುವ ದೃಢೀಕೃತ ಪತ್ರವಾಗಿದೆ. ಭಾರತದಲ್ಲಿ ಹಿಂದೂ ಮದುವೆ ಕಾಯಿದೆ 1955 ಅಥವಾ ವಿಶೇಷ ಮದುವೆ ಕಾಯಿದೆ 1954ರ ಅನ್ವಯ ಮದುವೆಯಾಗಿರುವುದನ್ನು ನೋಂದಾಯಿಸಬಹುದು.

ಕಾನೂನಿನ ಪ್ರಕಾರ ಮದುವೆಯಾಗುವುದಕ್ಕೆ ವರನಿಗೆ 21 ವರ್ಷ ಹಾಗೂ ವಧುವಿಗೆ 18 ವರ್ಷ ವಯಸ್ಸಾಗಿರಬೇಕು. ವಿವಾಹ ನಡೆದಿದೆ ಎನ್ನುವುದಕ್ಕೆ ಮದುವೆ ಪ್ರಮಾಣ ಪತ್ರ ಪ್ರಮುಖ ಸಾಕ್ಷಿ ಹಾಗೂ ದಾಖಲೆಯಾಗಿರುತ್ತದೆ. 2006ರಲ್ಲಿ ಮಹಿಳಾ ಸುರಕ್ಷಣೆಯನ್ನು ಮನಗಂಡ ಸುಪ್ರೀಂಕೋರ್ಟ್ ಮದುವೆ ನೊಂದಣಿಯನ್ನು ಕಡ್ಡಾಯಗೊಳಿಸಿದೆ. ಈಗ ಆನ್ ಲೈನ್ ಮೂಲಕ ಕೂಡಾ ಮದುವೆ ನೋಂದಾವಣೆ ಸಾಧ್ಯ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?:
* ಹಿಂದೂ ಮದುವೆ ಕಾಯ್ದೆ ಅಡಿಯಲ್ಲಿ ನೋಂದಾಯಿಸಲು: ಪತಿ ಅಥವಾ ಪತ್ನಿ ವಾಸಿಸಿರುವ ಬಡಾವಣೆಯ ವ್ಯಾಪ್ತಿಗೆ ಬರುವ ಉಪ ನೋಂದಾವಣಾಧಿಕಾರಿ ಕಚೇರಿಗಳಲ್ಲಿ ಅರ್ಜಿ ಪಡೆದುಕೊಳ್ಳಬಹುದು.
* ರಜಾ ದಿನಗಳನ್ನು ಹೊರತುಪಡಿಸಿ ಕಚೇರಿ ನಿರ್ವಹಿಸುವ ವೇಳೆಯಲ್ಲಿ ಅರ್ಜಿ ಲಭ್ಯವಿರುತ್ತದೆ. ಪತಿ ಹಾಗೂ ಪತ್ನಿ ಹಸ್ತಾಕ್ಷರ ಸಮೇತ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬಹುದು.
* ಅರ್ಜಿ ಸಲ್ಲಿಸಿದ ದಿನದಂದು ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ನಂತರ ನೋಂದಣೆ ಮಾಡುವ ದಿನಾಂಕವನ್ನು ನಿಗದಿ ಪಡಿಸಿ ದಂಪತಿಗಳಿಗೆ ತಿಳಿಸಲಾಗುತ್ತದೆ.
* ದಾಖಲೆಗಳು ಸೂಕ್ತವಾಗಿದ್ದು, ನೋಂದಣಿ ದಿನಾಂಕದವರೆಗೂ ಯಾವುದೇ ಕಡೆ(ವರ ಅಥವಾ ವಧು)ಯಿಂದ ಆಕ್ಷೇಪಣೆ ಬಾರದಿದ್ದರೆ ದಂಪತಿಗಳು ಹಾಗೂ ಸಾಕ್ಷಿಗಳ ಸಮೇತ ನಿಗದಿತ ದಿನದಂದು ಹಾಜರಾಗಬೇಕು ಹಾಗೂ ಅಂದೇ ಪ್ರಮಾಣ ಪತ್ರ ಪಡೆದುಕೊಳ್ಳಬಹುದು. [ಆನ್ ಲೈನ್ ಮೂಲಕ ಮದುವೆ ನೋಂದಣಿ]

How to apply for Marriage Certificate in India: Your complete guide

ಬೇಕಾದ ದಾಖಲೆಗಳು:
* ಉಪ ನೋಂದಾವಣಾಧಿಕಾರಿ ಕಚೇರಿಯಿಂದ ಪಡೆದ ಅರ್ಜಿ ಹಾಗೂ ದಂಪತಿಗಳ ಹಸ್ತಾಕ್ಷರ ಸಹಿತ ಭರ್ತಿ ಮಾಡಿದ ಅರ್ಜಿ.
* ವಿಳಾಸ ದೃಢೀಕರಣ ಪತ್ರ: ಮತದಾರರ ಐಡಿ/ ರೇಷನ್ ಕಾರ್ಡ್/ ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್,
* ದಂಪತಿಗಳ ಹುಟ್ಟಿದ ದಿನಾಂಕ ದೃಢೀಕರಣಕ್ಕೆ: ಜನನ ಪ್ರಮಾಣ ಪತ್ರ/ ಎಸ್ಎಸ್ಎಲ್ ಸಿ ಅಂಕ ಪಟ್ಟಿ.
* 6 ಪಾಸ್ ಪೋರ್ಟ್ ಸೈಜಿನ ಫೋಟೋಗ್ರಾಫ್ ನೀಲಿ ಅಥವಾ ಬಿಳಿ ಹಿನ್ನೆಲೆಯಲ್ಲಿ ತೆಗೆದ ಚಿತ್ರ, 2 ಮದುವೆ ಫೋಟೋಗ್ರಾಫ್ (ಮದುವೆ ಆರತಕ್ಷತೆ ಹಾಗೂ ಮಾಂಗಲ್ಯ ಧಾರಣೆ ವಿಧಿ ವಿಧಾನದ ಚಿತ್ರಗಳು)
* ಗಂಡ ಹಾಗೂ ಹೆಂಡತಿಯರಿಂದ ಪ್ರತ್ಯೇಕ ಮದುವೆ ಅಫಿಡವಿಟ್ ನಿಗದಿತ ಮಾದರಿಯಲ್ಲಿ ಸಲ್ಲಿಸಬೇಕು.ಮದುವೆ ನಂತರ ಪತ್ನಿ ಹೆಸರು ಬದಲಾವಣೆ ಮಾಡುತ್ತಿದ್ದರೆ, ಈ ಬಗ್ಗೆ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ನೀಡತಕ್ಕದ್ದು.
* ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ,
* ಎಲ್ಲಾ ದಾಖಲೆಗಳ ಪ್ರತಿಗಳನ್ನು ಸ್ವಯಂ ಪ್ರಮಾಣೀಕರಿಸಿರಬೇಕು (self attested)
* ಮದುವೆಯ ಕರೆಯೋಲೆ
* ಅರ್ಜಿ ನಮೂನೆಗಾಗಿ ಈ ವೆಬ್ ಲಿಂಕ್ ಕ್ಲಿಕ್ಕಿಸಿ

ಮದುವೆ ಪ್ರಮಾಣ ಪತ್ರದ ಉಪಯೋಗಗಳು:
* ಪಾಸ್ ಪೋರ್ಟ್ ಗೆ ಅರ್ಜಿ ಹಾಕಿರುವವರು, ಬ್ಯಾಂಕಿನಲ್ಲಿ ಹೊಸದಾಗಿ ಖಾತೆ ಆರಂಭಿಸಲು ಬಯಸುವವರಿಗೆ ಈ ಪ್ರಮಾಣ ಪತ್ರ ಸಹಾಯಕ.
* ಪತಿ ಹಾಗೂ ಪತ್ನಿ ಒಟ್ಟಿಗೆ ವೀಸಾ ಪಡೆಯಲು ಅನುಕೂಲಕರ.
* ಸಾಂಪ್ರದಾಯಿಕ ಮದುವೆಗಳ ದೃಢೀಕರಣಕ್ಕಿಂತ ಸರ್ಕಾರದಿಂದ ನೀಡಲಾಗುವ ಪ್ರಮಾಣ ಪತ್ರಕ್ಕೆ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಮಾನ್ಯತೆ ಇದೆ. ಹೀಗಾಗಿ ವಿದೇಶ ಪ್ರವಾಸಕ್ಕೆ ಹೊರಡಲು ಬಯಸುವ ಸತಿ ಪತಿಗೆ ಮದುವೆ ಪ್ರಮಾಣ ಪತ್ರ ಅಗತ್ಯ.
* ನಾಮಾಂಕಿತಗೊಂಡ ಪತಿ ಅಥವಾ ಪತ್ನಿ ಜೀವ ವಿಮೆ ರಿಟರ್ನ್ಸ್ ಪಡೆಯಲು, ಬ್ಯಾಂಕ್ ಖಾತೆ ಮೊತ್ತ ವಾಪಸ್ ಪಡೆಯಲು ಮದುವೆ ಪ್ರಮಾಣ ಪತ್ರ ಅಗತ್ಯವಿದೆ.

English summary
A marriage certificate is an official statement that two people are married. In India, Marriages can be registered either under the Hindu Marriage Act, 1955 or under the Special Marriage Act, 1954. It is a legal proof you are married and the most vital document of a marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X