ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಕಾರ್ಡ್ ಕಳ್ಕೊಂಡ್ರೆ, ಆನ್ ಲೈನ್ ನಲ್ಲೇ ಪಡ್ಕೊಳ್ಳಿ

By Mahesh
|
Google Oneindia Kannada News

ಯುಪಿಎ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಆಧಾರ್ ಗುರುತಿನ ಪತ್ರ ಯೋಜನೆ (UIDAI) ಯನ್ನು ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಮೋದಿ ಸರ್ಕಾರ ಹೇಳುತ್ತಲೇ ಬರುತ್ತಿದೆ. ಆಧಾರ್ ಕಾರ್ಡ್ ಕಡ್ಡಾಯವೇ? ಇಲ್ಲವೇ? ಎಂಬ ಗೊಂದಲದ ನಡುವೆ ಆಧಾರ್ ಕಾರ್ಡ್ ಇದ್ದರೆ ಅನುಕೂಲ ಎಂಬ ಉತ್ತರವೂ ಎಲ್ಲೆಡೆಯಿಂದ ಸಿಗುತ್ತದೆ. ಅದರೆ, ಕಷ್ಟಪಟ್ಟು ಆಧಾರ್ ಕಾರ್ಡ್ ಪಡೆದುಕೊಂಡವರು ಒಂದು ವೇಳೆ ಕಳ್ಕೊಂಡ್ರೆ ಏನು ಮಾಡುವುದು? ಮತ್ತೆ ಪಡೆಯಬಹುದೇ? ಮರು ಅರ್ಜಿ ಹಾಕುವ ವಿಧಾನ ಹೇಗೆ? ಎಂಬುದರ ಬಗ್ಗೆ ವಿವರಣೆ ಇಲ್ಲಿದೆ...

ಆಧಾರ್ ಕಾರ್ಡ್ ಕಳೆದುಕೊಂಡರೂ ಪರ್ವಾಗಿಲ್ಲ. ಕಾರ್ಡ್ ಸಂಖ್ಯೆ ಮಾತ್ರ ಮರೆಯದಿದ್ದರೆ ಸಾಕು. ಆಧಾರ್ ಕಾರ್ಡ್ ಪಡೆದುಕೊಂಡ ತಕ್ಷಣವೇ ರಸೀತಿ ಸಂಖ್ಯೆ(ನೋಂದಣಿ ನಂತರ ಸಿಗುವ ಸಂಖ್ಯೆ) ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ, ನೆನಪಿಟ್ಟುಕೊಳ್ಳಿ. ಇವೆರಡು ಇದ್ದರೆ ಆಧಾರ್ ಕಾರ್ಡ್ ಮರಳಿ ಪಡೆಯಲು ಅಥವಾ ಡೂಪ್ಲಿಕೇಟ್ ಕಾರ್ಡ್ ಆನ್ ಲೈನ್ ಮೂಲಕ ಪಡೆಯಲು ಸಹಾಯವಾಗುತ್ತದೆ. [ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ]

ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ಮರಳಿ ಪಡೆಯುವುದು ಹೇಗೆ?

How to Apply for Duplicate or lost Aadhaar Card online?

1. ಇ ಆಧಾರ್ ಕಾರ್ಡ್ ಆನ್ ಲೈನ್ ಪೋರ್ಟಲ್ ಗೆ ಭೇಟಿ ಕೊಡಿ.

2. ನಿಮ್ಮ ನೋಂದಣಿ ಸಂಖ್ಯೆ ವಿವರ ಸಲ್ಲಿಸಿ(ನೋಂದಣಿ ಸಂಖ್ಯೆ, ದಿನಾಂಕ, ಸಮಯ, ನಿವಾಸ ಹೆಸರು ಹಾಗೂ ಪಿನ್ ಕೋಡ್) ಆಧಾರ್ ರಸೀತಿ ಸ್ಲಿಪ್ ನಲ್ಲಿರುವಂತೆ.

3. ಅಥವಾ ಆಧಾರ್ ಕಾರ್ಡ್ ನಂಬರ್ ಹಾಕಿ.

4. ಮೇಲ್ಭಾಗದಲ್ಲಿರುವ I Have ಅಡಿಯಲ್ಲಿರುವ ಆಧಾರ್ ಆಯ್ಕೆಯನ್ನು ಸೂಚಿಸಿ.

5. ನಿಮ್ಮ ನೋಂದಾಯಿತ ಮೊಬೈಲ್ ಫೋನಿಗೆ One Time Pin ಬರುತ್ತದೆ.

6. OTP ನಮೂದಿಸಿ

7. ನಕಲಿ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳುವ ಆಯ್ಕೆ ನಿಮ್ಮ ಮುಂದೆ ಬರಲಿದೆ.

ಪಿಡಿಎಫ್ ಮಾದರಿಯಲ್ಲಿ ಲಭ್ಯವಾಗಲಿರುವ ಆಧಾರ್ ಕಾರ್ಡ್ ಪಾಸ್ ವರ್ಡ್ ನಿಂದ ಸುರಕ್ಷಿತವಾಗಿರುತ್ತದೆ. ಪಾಸ್ ವರ್ಡ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಬಗೆ ಇ ಮೇಲ್ ಕಳಿಸಲಾಗುತ್ತದೆ. ಅಥವಾ ಎಸ್ ಎಂಎಸ್ ಬರುತ್ತದೆ. ನಿಮ್ಮ ಪಿನ್ ಕೋಡ್ ಸಂಖ್ಯೆಯನ್ನೇ ಪಾಸ್ ವರ್ಡ್ ಆಗಿ ನೀಡಲಾಗಿರುತ್ತದೆ. ಪಾಸ್ ವರ್ಡ್ ಹಾಕಿ ಆಧಾರ್ ಕಾರ್ಡ್ ನೋಡಿ ಪ್ರಿಂಟ್ ತೆಗೆದುಕೊಂಡು ಅಸಲಿ ಆಧಾರ್ ಕಾರ್ಡ್ ನಂತೆ ಬಳಸಬಹುದು.

English summary
Do not panic if you have lost your Aadhaar card, there is a way to apply for another. However, one needs to be careful with card as it contains all the necessary details to harm your financial data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X