ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಸದಸ್ಯತ್ವ ನೋಂದಣಿಗೆ ಹೈಟೆಕ್ ಸ್ಪರ್ಶ

|
Google Oneindia Kannada News

ಬೆಂಗಳೂರು, ಮಾ.6 : ಕರ್ನಾಟಕ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದೆ. ಫೇಸ್‌ಬುಕ್, ಮೊಬೈಲ್‌ ಅಪ್ಲಿಕೇಷನ್‌ಗಳ ಮೂಲಕ ಪಕ್ಷದ ಸದಸ್ಯತ್ವವನ್ನು ಪಡೆಯುವ ವ್ಯವಸ್ಥೆಯನ್ನು ಆರಂಭಿಸಲಾಗುತ್ತದೆ.

ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ರಶೀದಿ ಮೂಲಕ ಪಕ್ಷದ ಸದಸ್ಯತ್ವ ಪಡೆಯುವ ಪ್ರಕ್ರಿಯೆ ಜೊತೆ ಫೇಸ್‌ಬುಕ್‌ ಮತ್ತು ಐಎನ್‌ಸಿ ಮೊಬೈಲ್‌ ಅಪ್ಲಿಕೇಷನ್‌ ಮೂಲಕವೂ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು. [ಕರ್ನಾಟಕದಲ್ಲಿ 50 ಲಕ್ಷ ಸದಸ್ಯತ್ವ, ಕಾಂಗ್ರೆಸ್ ಗುರಿ]

Parameshwar

ಕಾಂಗ್ರೆಸ್ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ಮಾಹಿತಿ ಲಭ್ಯವಾಗುತ್ತದೆ. ಸದಸ್ಯತ್ವ ಪಡೆಯುವವರು ಪೂರ್ಣ ವಿವರಗಳನ್ನು ದಾಖಲಿಸಿ ಸಲ್ಲಿಸಿದರೆ, ಸದಸ್ಯತ್ವ ದೊರೆಯುತ್ತದೆ. ಫೋಟೋ, ಇ-ಮೇಲ್‌ ಐಡಿ, ಗುರುತಿನ ಪತ್ರ ದಾಖಲಿಸುವುದು ಕಡ್ಡಾಯವಾಗಿರುತ್ತದೆ ಎಂದು ಪರಮೇಶ್ವರ ತಿಳಿಸಿದರು. [ಕಾಂಗ್ರೆಸ್ ವೆಬ್ ಸೈಟ್]

ಕಾಂಗ್ರೆಸ್ ಪಕ್ಷ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಫೆ.28ರ ಗಡುವು ನೀಡಿತ್ತು. ಸದ್ಯ ಎಐಸಿಸಿ ಈ ದಿನಾಂಕವನ್ನು ವಿಸ್ತರಣೆ ಮಾಡಿದೆ. ಆದ್ದರಿಂದ ಸದಸ್ಯತ್ವ ನೋಂದಣಿ ಅಭಿಯಾನ ಈಗಲೂ ಮುಂದುವರೆಯುತ್ತಿದೆ ಎಂದು ಪರಮೇಶ್ವರ ಅವರು ಮಾಹಿತಿ ನೀಡಿದರು. [50 ಲಕ್ಷ ಸದಸ್ಯರ ನೋಂದಣಿ ಜೆಡಿಎಸ್ ಟಾರ್ಗೆಟ್]

250 ರೂ. ಸಹಾಯಧನ : ಸದಸ್ಯರಾಗುವವರಿಂದ 250 ರೂ. ಸಹಾಯಧನ ಪಡೆಯಲು ಎಐಸಿಸಿ ತೀರ್ಮಾನಿಸಿದೆ. ಇದನ್ನು ಪದಾಧಿಕಾರಿಗಳಿಗೆ ಸಭೆಯಲ್ಲಿ ತಿಳಿಸಲಾಗಿದೆ. ಈಗಾಗಲೇ ಶೇ.60ರಷ್ಟು ಸದಸ್ಯತ್ವ ನೋಂದಣಿ ಪ್ರಕ್ರಿಯೆ ಮುಗಿದಿರುವ ಹಿನ್ನೆಲೆಯಲ್ಲಿ. ಸಹಾಯಧನ ಸಂಗ್ರಹಿಸುವ ಕೆಲಸವನ್ನು ಸಾಧ್ಯವಾದಷ್ಟು ಮಟ್ಟಿಗೆ ಮಾಡಲಾಗುತ್ತದೆ ಎಂದರು.

250 ರೂ. ಸಹಾಯಧನದಲ್ಲಿ ಶೇ.75ರಷ್ಟು ಎಐಸಿಸಿಗೆ, ಉಳಿದ ಶೇ.25ರಷ್ಟು ಹಣ ಕೆಪಿಸಿಸಿ ಬಳಿ ಉಳಿಯಲಿದೆ. ಪಕ್ಷಕ್ಕೆ ದೇಣಿಗೆ ನೀಡುವವರಿಗೆ ಅಧಿಕೃತ ರಶೀದಿ ನೀಡಲಾಗುವುದು ಎಂದು ಪರಮೇಶ್ವರ ಅವರು ಹೇಳಿದರು.

English summary
Karnataka Congress decided to use technology to its membership drive. Party has taken steps to enroll new members online and using social media. One can also obtain the membership through the traditional method of filling in application forms said KPCC president G. Parameshwara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X