ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್ ನ ಪ್ರಮುಖಾಂಶಗಳು

|
Google Oneindia Kannada News

* ಬೆಂಗಳೂರಿನಲ್ಲಿ ನಮ್ಮ ಕ್ಯಾಂಟಿನ್ ನಂತೆ ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಗಳ ಮೂಲಕ ಸವಿರುಚಿ ಮೊಬೈಲ್ ಕ್ಯಾಂಟಿನ್

* ಕ್ಷೀರಭಾಗ್ಯ ಯೋಜನೆಯಡಿ ಈ ವರೆಗೆ ಮಕ್ಕಳಿಗೆ ವಾರದಲ್ಲಿ ಮೂರು ದಿನ ಹಾಲು ವಿತರಿಸಲಾಗುತ್ತಿತ್ತು. ಇನ್ನು ಮುಂದೆ 5 ದಿನ ವಿತರಣೆ

* ಜೂನ್ 2017ರಿಂದ ಅಂಗನವಾಡಿಯಲ್ಲಿ ವಾರದಲ್ಲಿ ಎರಡು ದಿನ ಮಕ್ಕಳಿಗೆ ಮೊಟ್ಟೆ ವಿತರಣೆ

* ಕಾರವಾರ, ಮಡಿಕೇರಿ ಹಾಗೂ ಚಿಕ್ಕಮಗಳೂರಿನಲ್ಲಿ ಹೊಸ ವಿಮಾನ ನಿಲ್ದಾಣ

* ಕನ್ನಡ ಚಲನಚಿತ್ರ ಉದ್ಯಮದ ಅಭಿವೃದ್ಧಿಗಾಗಿ ಮೈಸೂರಿನ ಹಿಮ್ಮಾವಿನಲ್ಲಿ ಫಿಲ್ಮ್ ಸಿಟಿ

* ಮಂಗಳೂರು, ಮಡಿಕೇರಿ ಹಾಗೂ ಗದಗ್ ನಲ್ಲಿ ತಾರಾಲಯ ಸ್ಥಾಪನೆಗೆ ಪ್ರಸ್ತಾವ

* ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಲೋಕೋಪಯೋಗಿ ಇಲಾಖೆಯು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಮೂಲಕ 150 ಕಿಮೀ ರಸ್ತೆ ಅಭಿವೃದ್ಧಿಗೆ 1455 ಕೋಟಿ

Highlights of Karnataka budget 2017

* ಐದು ಲಕ್ಷ ಬಡ ಕುಟುಂಬಗಳಿಗೆ ಎಲ್ ಪಿಜಿ ಸಂಪರ್ಕ

* ಅನಿಲ ಭಾಗ್ಯ ಯೋಜನೆ ಅಡಿ ಫಲಾನುಭವಿಗಳಿಗೆ 1600 ರುಪಾಯಿ

* ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಮತ್ತು ಕೆಳಸೇತುವೆಗಾಗಿ 88 ಕೋಟಿ ರುಪಾಯಿ

* ಒಲಿಂಪಿಕ್ಸ್ ನಲ್ಲಿ ಪದಕ ಗೆದವರಿಗೆ ರಾಜ್ಯ ಸರಕಾರಿ ಕೆಲಸ, ಚಿನ್ನದ ಪದಕ ಗೆದ್ದವರಿಗೆ 5 ಕೋಟಿ, ಬೆಳ್ಳಿ ಗೆದ್ದವರಿಗೆ 3 ಕೋಟಿ, ಕಂಚು ವಿಜೇತರಿಗೆ 2 ಕೋಟಿ

* ನಮ್ಮ ಕ್ಯಾಂಟೀನ್ ನಲ್ಲಿ 5 ರುಪಾಯಿಗೆ ತಿಂಡಿ, 10 ರುಪಾಯಿಗೆ ಊಟ

* ಬಿಎಂಟಿಸಿಗಾಗಿ ಮೂರು ಸಾವಿರ ಹೆಚ್ಚುವರಿ ಬಸ್ ಖರೀದಿ. ಅದರಲ್ಲಿ ನೂರೈವತ್ತು ಬಸ್ ವಿದ್ಯುತ್ ಚಾಲಿತ. ಮೈಸೂರಿಗೆ ಐವತ್ತು ಎಲೆಕ್ಟ್ರಿಕ್ ಬಸ್.

* ಬಿಡಿಎನಿಂದ 2017-18ರಲ್ಲಿ ಮೂರು ಸಾವಿರ ಫ್ಲ್ಯಾಟ್ ಗಳನ್ನು ಪೂರ್ಣಗೊಳಿಸುವ ಗುರಿ

* ಹೈ ಎಂಡ್ ಮೋಟಾರ್ ಬೈಕ್ ಗಳ (ಒಂಡು ಲಕ್ಷಕ್ಕಿಂತ ಹೆಚ್ಚಿನ ಬೆಲೆಯದು) ಎಂವಿಟಿ ಶೇ 12ರಿಂದ 18ಕ್ಕೆ ಏರಿಕೆ.

* ಕರ್ನಾಟಕ ಬಜೆಟ್ ಗಾತ್ರ 1.86 ಲಕ್ಷ ಕೋಟಿ

* ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರವೇಶ ದರ ಗರಿಷ್ಠ 200 ರುಪಾಯಿಗೆ ಮಿತಿ

* ಕೃಷಿ ವಲಯಕ್ಕೆ 5080 ಕೋಟಿ ಮೀಸಲು

* ವೈನ್, ಬಿಯರ್, ವೈನ್ ಮೇಲಿನ ವ್ಯಾಟ್ ಹಿಂತೆಗೆತ

* ಅನ್ನ ಭಾಗ್ಯ ಯೋಜನೆಯಡಿ 7 ಕೆಜಿ ಅಕ್ಕಿ ವಿತರಣೆ. ಈ ಹಿಂದೆ 5 ಕೆಜಿ ವಿತರಿಸಲಾಗುತ್ತಿತ್ತು.

* ಚೆನ್ನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕೆ ಕಾರಿಡಾರ್ ಗೆ 400 ಕೋಟಿ ರುಪಾಯಿ

* ಪೊಲೀಸ್ ಠಾಣೆಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ

* ಕಡಿಮೆ ದರದಲ್ಲಿ ಆಹಾರ ಸಿಗುವ 'ನಮ್ಮ ಕ್ಯಾಂಟೀನ್' ಆರಂಭ

English summary
Here is the highlights of Karnataka budget 2017 by chief minister Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X