ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಸ್ಕಾಂ ಕರೆಂಟ್ ಬಿಲ್ ಕಟ್ಟಲು ಆನ್‌ಲೈನ್ ವ್ಯವಸ್ಥೆ ಗತಿಯಿಲ್ಲ!

By ಶಂಭು, ಹುಬ್ಬಳ್ಳಿ
|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 16 : ಹುಬ್ಬಳ್ಳಿ ವಿದ್ಯುತ್ ವಿತರಣಾ ಕೇಂದ್ರದ (ಹೆಸ್ಕಾಂ) ವಿದ್ಯುತ್ ಬಳಸುವ ಗ್ರಾಹಕರು ನಿತ್ಯ ಗಂಟೆಗಟ್ಟಲೇ ಸಾಲಿನಲ್ಲಿ ಬಿರು ಬಿಸಿಲು, ಮಳೆ, ಚಳಿ ಎನ್ನದೇ ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಿದೆ. ವಿದ್ಯುತ್ ಬಿಲ್ ಪಾವತಿ ಮಾಡಲು ಇರುವ ಆನ್‌ಲೈನ್‌ ವ್ಯವಸ್ಥೆಯ ಗೊಂದಲ ಹುಟ್ಟು ಹಾಕಿರುವುದೇ ಇದಕ್ಕೆ ಕಾರಣ.

ಹುಬ್ಬಳ್ಳಿ-ಧಾರವಾಡ ಒನ್‌ ಕೇಂದ್ರದಲ್ಲಿ ಮತ್ತು ಹೆಸ್ಕಾಂ ಕಚೇರಿಗಳಲ್ಲಿ ಬಿಲ್ ಪಾವತಿ ಮಾಡಬಹುದಾಗಿದೆ. ಆನ್‌ಲೈನ್ ತುಂಬಲು ಪ್ರಯತ್ನಪಟ್ಟರೇ ಹಣ ಹೋಗುತ್ತದೆ. ಆದರೆ, ಆ ಹಣ ಹೆಸ್ಕಾಂಗೆ ಹೋಗುವುದಿಲ್ಲ. ಈ ಬಗ್ಗೆ ಕಚೇರಿಯಲ್ಲಿ ಕೇಳಿದರೆ, ಹೋಗಿದ್ದು ಹೋಯ್ತು ಇನ್ನು ಮುಂದೆ ಇಲ್ಲೇ ಬಂದು ಬಿಲ್ ಕಟ್ಟಿ ಎಂಬ ಉತ್ತರ ನೀಡುತ್ತಾರೆ. [ಕರೆಂಟ್ ಕೊಡಿ ಎಂದು ಕರೆ ಮಾಡಿದ್ದಕ್ಕೆ ಕಂಬಿ ಹಿಂದೆ ಹೋದ್ರು]

hescom

ವಿದ್ಯುತ್ ಬಿಲ್ ಪಾವತಿ ಮಾಡಲು ಸಾಲಿನಲ್ಲಿ ನಿಲ್ಲುವವರು ವಯಸ್ಸಾದವರು, ಮಹಿಳೆಯರು ಮತ್ತು ಶಾಲಾ ಮಕ್ಕಳು. ಶಾಲಾ ಮಕ್ಕಳು ಶಾಲೆಗೆ ಚಕ್ಕರ್ ಹೊಡೆದು ಬಿಲ್ ಪಾವತಿಸಲು ಬರುತ್ತಾರೆ. ರಜೆಯ ದಿನಗಳಲ್ಲಂತೂ ವಿದ್ಯುತ್ ಬಿಲ್ ತುಂಬುವುದೊಂದೇ ದೊಡ್ಡ ಕೆಲಸವಾಗುತ್ತಿದೆ. ಬಿಲ್ ತುಂಬಲು ಪಾಳಿ ಬೇಗ ಬಂತಾ ? ಎಂಬುದು ಎಲ್ಲರೂ ಕೇಳುವ ಪ್ರಶ್ನೆಯಾಗಿದೆ. [ಚಿತ್ರಗಳು : ಶರಾವತಿ ವಿದ್ಯುದಾಗಾರಕ್ಕೆ ಡಿಕೆ ಶಿವಕುಮಾರ್ ಭೇಟಿ]

ಆಗಬೇಕಾಗಿರುವುದೇನು? : ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಆನ್‌ಲೈನ್‌ನಲ್ಲಿ ಬಿಲ್ ತುಂಬಿಸುವ ವ್ಯವಸ್ಥೆ ವ್ಯವಸ್ಥೆ ಕಲ್ಪಿಸಬೇಕು. ಎಷ್ಟೋ ಜನರು ಉದ್ಯೋಗ ಅರಸಿ ದೂರದ ಬೆಂಗಳೂರು, ಮುಂಬೈ, ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರು ತಮ್ಮ ಮನೆಯ ವಿದ್ಯುತ್ ಬಿಲ್‌ಅನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡಲು ಅನುಕೂಲವಾಗುತ್ತದೆ. [ಕರ್ನಾಟಕದಲ್ಲಿ ವಿದ್ಯುತ್ ಕೊರತೆ : ಶಾಶ್ವತ ಪರಿಹಾರಗಳು]

ಸದ್ಯ, ಹುಬ್ಬಳ್ಳಿ ನೀರು ಸರಬರಾಜು ಮಂಡಳಿಯು ನೀರಿನ ಬಿಲ್ ಕೊಡುವ ಜೊತೆಗೆ ಅದನ್ನು ಪಾವತಿ ಮಾಡಿಸಿಕೊಂಡಿ ರಸೀದಿ ಕೊಡುವ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಇದೇ ರೀತಿ ಮೀಟರ್ ರೀಡರ್‌ ಜೊತೆ ಒಬ್ಬ ಸಿಬ್ಬಂದಿಯನ್ನು ವಿದ್ಯುತ್ ಬಿಲ್ ಪಾವತಿಸಿಕೊಳ್ಳಲು ಕಳಿಸಿಕೊಡಬೇಕು ಎಂಬುದು ಜನರ ಒತ್ತಾಯವಾಗಿದೆ. [ರಾಜ್ಯದ ವಿದ್ಯುತ್ ಸಮಸ್ಯೆ ಏಕೆ, ನಿವಾರಣೆ ಹೇಗೆ?]

ಆನ್‌ಲೈನ್ ಬಿಲ್ ಪಾವತಿ ವ್ಯವಸ್ಥೆ ಜೊತೆಗೆ ಮೊಬೈಲ್ ಅಪ್ಲಿಕೇ‍‍ಷನ್ ಅಭಿವೃದ್ಧಿಪಡಿಸಿದರೆ ಜನರು ದೂರು ನೀಡಲು ಸಹಾಯಕವಾಗುತ್ತದೆ. ಸರ್ಕಾರ ಹೆಸ್ಕಾಂನಲ್ಲಿ ಆನ್‌ಲೈನ್ ಬಿಲ್ ಪಾವತಿ ವ್ಯವಸ್ಥೆ ಸರಿಪಡಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

English summary
Hubli Electricity Supply Company Limited (HESCOM) online bill payment system sparks confusion. So customers to pay bill at HESCOM office. People urged the HESCOM to restore online system as early as possible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X