ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈದುಂಬಿದ ಜೋಗ: ಕರಾವಳಿಯಲ್ಲಿ ಭಾರೀ ಮಳೆ ಸಂಭವ

By Madhusoodhan
|
Google Oneindia Kannada News

ಬೆಂಗಳೂರು, ಜೂನ್, 28: ನೈರುತ್ಯ ಮಾನ್ಸೂನ್ ಮಾರುತಗಳು ಬಲ ಪಡೆದುಕೊಂಡಿದ್ದು ಮುಂದಿನ 24 ಗಂಟೆಯಲ್ಲಿ ರಾಜ್ಯದ ಕರವಾಳಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಯನ್ನು ಹಾದು ಬರುವ ಮಾರುತಗಳು ಪಶ್ಚಿಮ ಘಟ್ಟ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಸಲಿವೆ. ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲೂ ರಾತ್ರಿ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.[ನಾವು ಎಲ್ಲಿ ಹೋಗಿ ಬಿದ್ದು ಸಾಯಬೇಕು? ಮಲ್ಲೇಶ್ವರಂ ಮರದ ಪ್ರಶ್ನೆ]

ಸೋಮವಾರ ಶಿವಮೊಗ್ಗ ಜಿಲ್ಲೆ ಹುಲಿಕಲ್ ನಲ್ಲಿ ಅತಿ ಹೆಚ್ಚು ಅಂದರೆ 15 ಸೆಂ ಮೀ ಮಳೆಯಾಗಿದೆ. ಉಳಿದಂತೆ ಆಗುಂಬೆ, ಉತ್ತರ ಕನ್ನಡ ಜಿಲ್ಲೆ ಗೇರುಸೊಪ್ಪಾ, ಹೊನ್ನಾವರ, ದಕ್ಷಿಣ ಕನ್ನಡ ಜಿಲ್ಲೆ ಪಣಂಬೂರು ಮಂಗಳೂರಿನಲ್ಲಿ 10 ಸೆಂ ಮೀಗೂ ಅಧಿಕ ಮಳೆಯಾಗಿದೆ. ವಿಶ್ವ ವಿಖ್ಯಾತ ಜೋಗ ಜಲಪಾತ ತನ್ನ ವೈಭವಕ್ಕೆ ಮರಳಿದೆ.[ಮುಂಗಾರು ಮಳೆ ಎದುರಿಸಲು ನಮ್ಮ ಬೆಂಗಳೂರು ಸಿದ್ಧವೇ?]

ಬೆಂಗಳೂರಲ್ಲಿ ಸೋಮವಾರ ಮಳೆ ಆರ್ಭಟ
ಉದ್ಯಾನನಗರಿಯಲ್ಲಿ ಸೋಮವಾರ ಬಿರುಗಾಳಿ ಮಳೆ ಆಭ೯ಟ ಇಬ್ಬರ ಬಲಿ ಪಡೆದಿದೆ. ಮಲ್ಲೇಶ್ವರಂ ಮತ್ತು ವಿವೇಕನಗರದಲ್ಲಿ ರಸ್ತೆಬದಿಯ ಮರಗಳು ಬಿದ್ದು 3 ವಷ೯ದ ಬಾಲಕ ಮತ್ತು ಸಕಾ೯ರಿ ಶಾಲೆಗಳಿಗೆ ಬಿಸಿಯೂಟ ಪೂರೈಕೆ ಗುತ್ತಿಗೆದಾರ ಮೃತಪಟ್ಟಿದ್ದಾರೆ. ನ೦ದಿನಿ ಲೇಔಟ್ ನಲ್ಲಿ ವಿದ್ಯುತ್ ಶಾಕ್ ತಗುಲಿ ಇಬ್ಬರು ಗಾಯಗೊಂಡಿದ್ದಾರೆ.[ಮೈದುಂಬಿ ಧುಮ್ಮಿಕ್ಕುತಿಹ ಅಬ್ಬಿ ಫಾಲ್ಸ್‌ನತ್ತ ಪ್ರವಾಸಿಗರ ದೌಡು]

rain

ಗದಗ, ಹಾವೇರಿ, ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಧಾರಾಕಾರ ಮಳೆಯಾಗಿದೆ. ಧಾರವಾಡ ನಗರದಲ್ಲಿ ಅರ್ಧ ಗಂಟೆ ಮತ್ತು ಹುಬ್ಬಳ್ಳಿಯಲ್ಲಿ ಸುಮಾರು ಮುಕ್ಕಾಲು ಗಂಟೆ ಬಿರುಸಿನ ಮಳೆಯಾಗಿದ್ದು, ಉಳಿದಂತೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.[

ಉಡುಪಿ ನಗರ ಸೇರಿದಂತೆ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು ಹಾಗೂ ಕೊಟ್ಟಿಗೆಹಾರಗಳಲ್ಲೂ ಮಳೆ ಸುರಿಯುತ್ತಿದೆ.

English summary
As the southwest monsoon remains active in Karnataka, heavy and widespread rains will batter the coastal region of the state over the next 24 hours, a Met official said on Tuesday afternoon. "The forecast is that rains will be heavy and widespread across the west coast, the Western Ghats in the Malnad region and south interior areas of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X